Fact Check: ಕಾಫಿ ಕುಡಿದರೆ ಕೊರೋನಾ ಬರಲ್ವಂತೆ..!

By Suvarna News  |  First Published Jun 16, 2020, 10:18 AM IST

ಕಾಫಿಯಲ್ಲಿರುವ ಮೀಥೈಲ್ಸಾಂಥೀನ್‌, ಥಿಯೋಬ್ರೊಮಿನ್‌, ಥಿಯೋಫಿಲೈನ್‌ ರಾಸಾಯನಿಕ ಅಂಶಗಳು ಕೊರೋನಾ ವಿರುದ್ಧ ಹೋರಾಡುವ ಗುಣ ಹೊಂದಿವೆ. ಜೊತೆಗೆ ಚೀನಾದ ವುಹಾನ್‌ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಕಾಫಿ ನೀಡುತ್ತಿರುವುದರಿಂದಲೇ ಕೊರೋನಾದಿಂದ ಅವರು ಬೇಗ ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 


ನಿತ್ಯ ಕಾಫಿ ಸೇವಿಸುವುದರಿಂದ ಕೊರೋನಾ ಗುಣವಾಗುತ್ತದೆ ಎಂದು ಚೀನಾ ವೈದ್ಯರು ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಮಾರಕ ಕೊರೋನಾ ವೈರಸ್‌ ಬಗ್ಗೆ ಚೀನಾ ಸರ್ಕಾರಕ್ಕೆ ಮೊಟ್ಟಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ, ಅನಂತರ ಕೊರೋನಾಗೆ ಬಲಿಯಾದ ವೈದ್ಯ ಡಾ.ಲೀ ವೆನ್‌ಲಿಯಾಂಗ್‌ ಕೊರೋನಾಗೆ ಕಾಫಿಯೇ ಔಷಧ ಎಂದು ಹೇಳಿದ್ದರು.

Fact Check | ನಿಂಬೆರಸ, ಸೋಡಾದಿಂದ ಕೊರೋನಾ ಖತಂ!

Tap to resize

Latest Videos

ಮೀಥೈಲ್ಸಾಂಥೀನ್‌, ಥಿಯೋಬ್ರೊಮಿನ್‌, ಥಿಯೋಫಿಲೈನ್‌ ರಾಸಾಯನಿಕ ಅಂಶಗಳು ಕೊರೋನಾ ವಿರುದ್ಧ ಹೋರಾಡುವ ಗುಣ ಹೊಂದಿವೆ. ಈ ಅಂಶಗಳು ಕಾಫಿಯಲ್ಲಿವೆ ಎಂದಿದ್ದರು ಎಂದು ಹೇಳಲಾಗುತ್ತಿದೆ. ಜೊತೆಗೆ ಚೀನಾದ ವುಹಾನ್‌ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಕಾಫಿ ನೀಡುತ್ತಿರುವುದರಿಂದಲೇ ಕೊರೋನಾದಿಂದ ಅವರು ಬೇಗ ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ.

 

ಇದು ನಿಜವೇ ಎಂದು ಬೂಮ್‌ಲೈವ್‌ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಈ ಹಿಂದೆ ಗ್ರೀನ್‌ ಟೀ ಕುಡಿಯುವುರಿಂದ ಕೊರೋನಾ ಗುಣವಾಗುತ್ತದೆ ಎಂಬ ಸಂದೇಶ ವೈರಲ್‌ ಆಗಿತ್ತು. ಇದೇ ಸಂದೇಶವನ್ನು ಸದ್ಯ ಎಡಿಟ್‌ ಮಾಡಿ, ಟೀ ಹೆಸರಿನಲ್ಲಿ ಕಾಫಿ ಎಂದು ಸೇರಿಸಲಾಗಿದೆಯಷ್ಟೆ. ಹಾಗೆಯೇ ಚೀನಾದಲ್ಲಿ ಮಾರಕ ವೈರಸ್‌ ಬಗ್ಗೆ ಎಚ್ಚರಿಕೆ ನೀಡಿದ್ದ ವೈದ್ಯ ಲೀ ವೆನ್‌ಲಿಯಾಂಗ್‌ ಹೀಗೆ ಹೇಳಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ.

ಜೊತೆಗೆ ಕಾಫಿಯಲ್ಲಿರುವ ಈ ರಾಸಾಯನಿಕ ಅಂಶಗಳಿಗೆ ಕೊರೋನಾ ಗುಣಪಡಿಸುವ ಶಕ್ತಿ ಇದೆ ಎಂದು ಯಾವ ವೈಜ್ಞಾನಿಕ ಪ್ರಯೋಗಾಲಯದಲ್ಲೂ ಸಾಬೀತಾಗಿಲ್ಲ. ಹಾಗಾಗಿ ಕಾಫಿ ಸೇವಿಸಿದರೆ ಕೊರೋನಾ ತೊಲಗುತ್ತದೆ ಎಂದು ಹೇಳಲಾದ ಸಂದೇಶ ಸುಳ್ಳು.

- ವೈರಲ್ ಚೆಕ್ 

click me!