Fact Check: ಟ್ರಂಪ್, ಜಾಗತಿಕ ಉಗ್ರ ಬಿನ್ ಲಾಡೆನ್ ಕೈಕುಲುಕಿದ್ದರೆ?

By Suvarna News  |  First Published May 19, 2020, 10:37 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯುವಕರಾಗಿದ್ದಾಗ, ಜಾಗತಿಕ ಉಗ್ರ ಬಿನ್‌ ಲಾಡೆನ್‌ ಕೈಕುಲುಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 


ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯುವಕರಾಗಿದ್ದಾಗ, ಜಾಗತಿಕ ಉಗ್ರ ಬಿನ್‌ ಲಾಡೆನ್‌ ಕೈಕುಲುಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಚಿತ್ರದಲ್ಲಿ ಇಬ್ಬರೂ ಸೂಟ್‌ ಧರಿಸಿ ನಗುತ್ತಿರುವ ದೃಶ್ಯವಿದೆ. ಇದನ್ನು ಪೋಸ್ಟ್‌ ಮಾಡಿ, ‘ನನಗೆ ಒಸಾಮಾ ಬಿನ್‌ ಲಾಡೆನ್‌ ಗೊತ್ತು. ಜನರು ಅವರನ್ನು ಪ್ರೀತಿಸುತ್ತಿದ್ದರು. ಅವರು ಮಹಾನ್‌ ವ್ಯಕ್ತಿ’ ಎಂದು ಟ್ರಂಪ್‌ ಬಣ್ಣಿಸಿದ್ದಾರೆ ಎಂದು ಒಕ್ಕಣೆ ಬರೆಯಲಾಗಿದೆ.

 

Tap to resize

Latest Videos

undefined

ಆದರೆ ಈ ಫೋಟೋ ಹಿಂದಿನ ಕತೆ ಏನು ಎಂದು ಪರಿಶೀಲಿಸಿದಾಗ, ವೈರಲ್‌ ಫೋಟೋ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವಂಥದ್ದು ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ, 1987ರಲ್ಲಿ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಪ್ರಕಾಶಕರೊಬ್ಬರನ್ನು ನ್ಯೂಯಾರ್ಕ್ನಲ್ಲಿ ಭೇಟಿ ಮಾಡಿದ್ದರು. ಆಗ ತೆಗೆದಿದ್ದ ಫೋಟೋವನ್ನೇ ಎಡಿಟ್‌ ಮಾಡಿ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಭೇಟಿ ಮಾಡಿದ್ದರು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

Fact Check : ಕಾರ್ಮಿಕರಿಗೆ ಕೇಂದ್ರದಿಂದ 1.20 ಲಕ್ಷ ರೂ ಪ್ಯಾಕೇಜ್ ಕೊಡುತ್ತಿದೆಯಾ?

ಫೋಟೋ ಮೇಲೆ ಟ್ರಂಪ್‌, ‘ಲಾಡೆನ್‌ ಮಹಾನ್‌ ವ್ಯಕ್ತಿ’ ಎಂದು ಕರೆದಿದ್ದರು ಎಂಬ ಸುಳ್ಳು ಹೇಳಿಕೆಯನ್ನು ಸೂಪರ್‌ ಇಂಪೋಸ್‌ ಮಾಡಲಾಗಿದೆ ಎಂಬುದೂ ಬಯಲಾಗಿದೆ.

ಸೆ.11, 2001ರ ವಲ್ಡ್‌ರ್‍ ಟ್ರೇಡ್‌ ಸೆಂಟರ್‌ ಮೇಲಿನ ದಾಳಿ ಸೇರಿ ಅನೇಕ ಕುಕ್ಕೃತ್ಯಗಳ ರೂವಾರಿ ಒಸಾಮಾ ಬಿನ್‌ ಲಾಡೆನ್‌ ಅನ್ನು ಅಮೆರಿಕ ಮಿಲಿಟರಿ ಪಡೆಯೇ ದಶಕಗಳ ಬಳಿಕ ಪಾಕಿಸ್ತಾನದಲ್ಲಿ ಹತ್ಯೆ ಮಾಡಿದೆ.

- ವೈರಲ್ ಚೆಕ್ 

click me!