Fact Check : ಫೈಝರ್‌ ಲಸಿಕೆ ಪಡೆದ ನರ್ಸ್‌ ಸಾವನ್ನಪ್ಪಿ ಬಿಟ್ರಾ..?

By Suvarna News  |  First Published Dec 26, 2020, 2:46 PM IST

ಅಮೆರಿಕದಲ್ಲೂ ಲಸಿಕೆ ನೀಡಲು ಆರಂಭಿಸಲಾಗಿದ್ದು,  ಲಸಿಕೆ ಹಾಕಿಸಿಕೊಂಡ ನರ್ಸ್‌ವೊಬ್ಬರು ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರಂತೆ! ಕೊನೆಗೂ ಕೊರೊನಾಗೆ ಲಸಿಕೆ ಬಂತು ಎಂದು ಖುಷಿ ಪಟ್ಟರೆ ಇದೆಂಥಾ ಸುದ್ದಿ..? ಹಾಗಾದ್ರೆ ಲಸಿಕೆ ಸೇಫ್ ಅಲ್ವಾ? ಏನಿದರ ಅಸಲಿಯತ್ತು? ನೋಡೋಣ..!


ಬ್ರಿಟನ್ನಿನಲ್ಲಿ ಹೈ-ರಿಸ್ಕ್‌ ವರ್ಗಕ್ಕೆ ಫೈಝರ್‌ ಲಸಿಕೆ ನೀಡಲು ಆರಂಭಿಸಿದ ಬೆನ್ನಲ್ಲೇ ಅಮೆರಿಕದಲ್ಲೂ ಲಸಿಕೆ ನೀಡಲು ಆರಂಭಿಸಲಾಗಿದೆ. ಆದರೆ ‘ಅಮೆರಿಕದಲ್ಲಿ ಲಸಿಕೆ ಹಾಕಿಸಿಕೊಂಡ ನರ್ಸ್‌ವೊಬ್ಬರು ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

 

FAINTING NURSE TIFFANY DOVER IS DEAD
family members listed in this death record show up as her friends on FB! pic.twitter.com/InxXbLaUmr

— Gringa Bahia (@BahiaGringa)

Tap to resize

Latest Videos

undefined

ಆದರೆ ಈ ಸುದ್ದಿಯನ್ನು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕಂಡಿದ್ದೀರಾ?’ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ವೈರಲ್‌ ಆಗಿರುವ ಸುದ್ದಿಯಲ್ಲಿ ಉಲ್ಲೇಖಿಸಿರುವ ನರ್ಸ್‌ ಟಿಫಾನಿ ಫಂಟೀಸ್‌ ಡೋವರ್‌ ಅವರು ಕ್ಯಾಥೋಲಿಕ್‌ ಹೆಲ್ತ್‌ ಇನಿಶಿಯೇಟಿವ್‌್ಸ ಮೆಮೋರಿಯಲ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

Fact check : ಮೋದಿ ಸೋದರರೆಲ್ಲಾ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರಾ?

ಅವರಿಗೆ ಮೊದಲೇ ಮೂರ್ಛೆ ಕಾಯಿಲೆ ಇದೆ. ಕೊರೋನಾ ಸೋಂಕಿತರಾಗಿದ್ದ ಅವರಿಗೆ ಫೈಝರ್‌ ಲಸಿಕೆ ನೀಡಲಾಗಿತ್ತು. ಲಸಿಕೆ ಪಡೆದ ಕೆಲ ಹೊತ್ತಲ್ಲೇ ಅವರು ಮೂರ್ಚೆ ಹೋಗಿದ್ದರು. ಅನಂತರದ 17 ನಿಮಿಷಗಳವರೆಗೆ ಅವರಿಗೆ ಪ್ರಜ್ಞೆ ಇರಲಿಲ್ಲ. ಇದು ಲಸಿಕೆಯಿಂದಾದ ಸಮಸ್ಯೆ ಅಲ್ಲ ಅವರಿಗೆ ಆಗಾಗ ಮೂಛæರ್‍ ಹೋಗುವ ಸಮಸ್ಯೆ ಇದೆ ಎಂದು ವರದಿಯಾಗಿದೆ. ಅಲ್ಲದೆ ತಮಗೆ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಆಗಿಲ್ಲ ಎಂದು ಟಿಫಾನಿ ಅವರೇ ಮಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ವೈರಲ್‌ ಆಗಿರುವ ಸುದ್ದಿ ಸುಳ್ಳು.

- ವೈರಲ್ ಚೆಕ್ 

click me!