ಭಾರತೀಯ ಮೂಲದ ಬಹುರಾಷ್ಟ್ರೀಯ ಆಟೋಮೊಬೈಲ್ ಕಂಪನಿ ಟಾಟಾ ಮೋಟರ್ ಕಾಲಿಡದ ಜಾಗವೇ ಇಲ್ಲ ಎನ್ನಬಹುದು. ಇದೀಗ ಓಲಾ, ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ‘ಕ್ಯಾಬ್ ಇ’ ಎಂಬ ನೂತನ ಟ್ಯಾಕ್ಸಿ ಸೇವೆ ಆರಂಭಿಸಿದೆ ಎನ್ನಲಾಗುತ್ತದೆ. ನಿಜನಾ ಈ ಸುದ್ದಿ? ನಾವು ಈ ಸೇವೆಯನ್ನು ಪಡೆಯಬಹುದಾ? ಇಲ್ಲಿದೆ ಸತ್ಯಾಸತ್ಯತೆ!
ನವದೆಹಲಿ (ಸೆ. 11): ಓಲಾ, ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಭಾರತೀಯ ಮೂಲದ ಬಹುರಾಷ್ಟ್ರೀಯ ಆಟೋಮೊಬೈಲ್ ಕಂಪನಿ ಟಾಟಾ ಮೋಟರ್ಸ್ ‘ಕ್ಯಾಬ್ ಇ’ ಎಂಬ ನೂತನ ಟ್ಯಾಕ್ಸಿ ಸೇವೆ ಆರಂಭಿಸಿದೆ. ಸದ್ಯಕ್ಕೆ ಇದು ಮುಂಬೈ ಮತ್ತು ಪುಣೆಯಲ್ಲಿ ಆರಂಭವಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
TATA has launched new taxi service *Cab E* in Mumbai & Pune.. better alternative to Ola & Uber... TATA always helps the Nation in difficult times.. I request all of you to share this as much as possible.
Download the app on play store.
https://t.co/0BQnffGcWT
undefined
‘ದೇಶ ಸಂಕಷ್ಟದಲ್ಲಿರುವಾಗ ಯಾವಾಗಲೂ ಟಾಟಾ ಕಂಪನಿ ಕೈಜೋಡಿಸುತ್ತದೆ. ಟಾಟಾ ಮೋಟರ್ಸ್ ಮುಂಬೈ ಮತ್ತು ಪುಣೆಯಲ್ಲಿ ಕ್ಯಾಬ್ ಇ ಎಂಬ ಟ್ಯಾಕ್ಸಿ ಸೇವೆ ಆರಂಭಿಸಿದೆ. ಈ ಸಂದೇಶವನ್ನು ಸಾಧ್ಯವಾದಷ್ಟುಶೇರ್ ಮಾಡಿ ಎಂದು ಬರೆದಿರುವ ಫಾರ್ವರ್ಡ್ ಸಂದೇಶವನ್ನು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.
Fact Check: ಗಡಿ ನಿಯಂತ್ರಣ ರೇಖೆ ಬಳಿ ಭಾರತ- ಚೀನಾ ಯುದ್ಧ?
ಆದರೆ ನಿಜಕ್ಕೂ ಟಾಟಾ ಮೋಟರ್ಸ್ ಹೊಸ ಟ್ಯಾಕ್ಸಿ ಸೇವೆ ಆರಂಭಿಸಿತೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ ಕ್ಯಾಬ್ ಇ ಎನ್ನುವ ಟ್ಯಾಕ್ಸಿ ಸೇವೆ ಆರಂಭಿಸಿದ್ದು ಟಾಟಾ ಅಲ್ಲ. ಇಇಜೆಡ್ ಇನ್‌ಫ್ರಾ ಟೆಕ್ ಎನ್ನುವ ಕಂಪನಿ. ಗೂಗಲ್ ಪ್ಲೇಸ್ಟೋರ್‌ನಲ್ಲಿ ನೀಡಿರುವ ವಿವರಣೆಯ ಪ್ರಕಾರ ಇದು ನಗರದ ಒಳಗೆ ಮತ್ತು ಹೊರಗೆ ಕಾರುಗಳನ್ನು ಬಾಡಿಗೆಗೆ ಒದಗಿಸುವ ಟೆಕ್ನಾಲಜಿ ಪ್ಲಾರ್ಟ್‌ಫಾಮ್‌ರ್. ಇದಕ್ಕೂ ಟಾಟಾ ಮೋಟರ್ಸ್ಗೂ ಯಾವುದೇ ಸಂಬಂಧವಿಲ್ಲ.
- ವೈರಲ್ ಚೆಕ್