Fact Check : ನಿರಾಶ್ರಿತರ ಊಟಕ್ಕೆ ಉಗುಳಿದ್ದು ನಿಜನಾ?

By Kannadaprabha News  |  First Published May 2, 2020, 9:36 AM IST

ವ್ಯಕ್ತಿಯೊಬ್ಬರು ದೊಡ್ಡ ದೊಡ್ಡ ಪಾತ್ರೆಯಲ್ಲಿ ಮಾಡಿಟ್ಟಆಹಾರಕ್ಕೆ ಸೌಟು ಹಾಕಿ ಕದಡಿ, ಒಂದು ಸೌಟು ಎತ್ತಿ ಬಾಯಿಯ ಹತ್ತಿರಕ್ಕೆ ತಂದು ಊದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 


ವ್ಯಕ್ತಿಯೊಬ್ಬರು ದೊಡ್ಡ ದೊಡ್ಡ ಪಾತ್ರೆಯಲ್ಲಿ ಮಾಡಿಟ್ಟಆಹಾರಕ್ಕೆ ಸೌಟು ಹಾಕಿ ಕದಡಿ, ಒಂದು ಸೌಟು ಎತ್ತಿ ಬಾಯಿಯ ಹತ್ತಿರಕ್ಕೆ ತಂದು ಊದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದರೊಂದಿಗೆ, ಕೊರೋನಾ ವೈರಸ್‌ ಹಿನ್ನೆಲೆ ಲಾಕ್‌ಡೌನ್‌ ಘೋಷಿಸಿರುವುದಿರಿಂದ ನಿರಾಶ್ರಿತರಿಗೆ ಊಟ ಬಡಿಸಲು ಮಾಡಿಟ್ಟಅಡುಗೆಗೆ ಮುಸ್ಲಿಮರು ಬಂದು ಉಗುಳುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ‘ನಮೋ ಆಲ್‌ವೇಸ್‌’ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು ಅದೀಗ 8200 ಬಾರಿ ಶೇರ್‌ ಆಗಿದೆ.

Latest Videos

undefined

Fact Check: ಕೋವಿಡ್‌ ಮೃತರ ಬಟ್ಟೆಆಫ್ರಿಕಾಗೆ ಸಾಗಿಸುತ್ತಿದೆಯಾ ಚೀನಾ?

ಆದರೆ ವೈರಲ್‌ ವಿಡಿಯೋ ಹಿಂದಿನ ಸತ್ಯಾಸತ್ಯ ಏನೆಂದು ಆಲ್ಟ್‌ ನ್ಯೂಸ್‌ ಬಯಲಿಗೆಳೆದಿದ್ದು, ಹಳೆಯ ವಿಡಿಯೋವನ್ನು ಸದ್ಯ ಪೋಸ್ಟ್‌ ಮಾಡಿ ಸುಳ್ಳು ಸುದ್ದಿ ಹರಡಿ ಕೋಮು ದ್ವೇಷ ಹರಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

 

गरीबों के लिए राहत कार्य में जुटे हमारे देश के इस्लामिक भाई कैसे कोरोना वायरस को आगे फैलाने की कोशिश की जा रही है जरूर देखें और अपनी बंद आंखों को खोलने की कोशिश जरूर करें pic.twitter.com/2XRc7rYhoF

— sandeep saini (@sandeep09442765)

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಡಿಸೆಂಬರ್‌ 15, 2018ರಲ್ಲಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಇದೇ ರೀತಿಯ ವಿಡಿಯೋ ಲಭ್ಯವಾಗಿದೆ. ಅಲ್ಲಿಗೆ ಈ ವಿಡಿಯೋಗೂ ಕೊರೋನಾ ವೈರಸ್‌ಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸ್ಪಷ್ಟ.

ಇನ್ನು ವಿಡಿಯೋದಲ್ಲಿ ಕಾಣುವುದು, ‘ಫತಿಹಾ ಜಲಾನಾ’ ಎಂಬ ಮುಸ್ಲಿಂ ಸಮುದಾಯದ ಸಂಪ್ರದಾಯ. ಅಂದರೆ ಅಡುಗೆಯಾದ ನಂತರ ಸ್ವಲ್ಪ ಆ ಆಹಾರವನ್ನು ತೆಗೆದುಕೊಂಡು ಕುರಾನ್‌ ಮಂತ್ರಗಳನ್ನು ಪಠಿಸಿ ಎಲ್ಲರಿಗೂ ಒಳಿತು ಮಾಡು, ಸಂಕಷ್ಟಗಳನ್ನು ದೂರ ಮಾಡು ಎಂದು ಅಲ್ಲಾನನ್ನು ಬೇಡಿಕೊಳ್ಳುವ ವಿಧಾನ ಇದಾಗಿದೆ.

- ವೈರಲ್ ಚೆಕ್     

click me!