Fact Check: ಕೋವಿಡ್‌ ಮೃತರ ಬಟ್ಟೆಆಫ್ರಿಕಾಗೆ ಸಾಗಿಸುತ್ತಿದೆಯಾ ಚೀನಾ?

Suvarna News   | Asianet News
Published : Apr 29, 2020, 10:22 AM IST
Fact Check: ಕೋವಿಡ್‌ ಮೃತರ ಬಟ್ಟೆಆಫ್ರಿಕಾಗೆ ಸಾಗಿಸುತ್ತಿದೆಯಾ ಚೀನಾ?

ಸಾರಾಂಶ

ಕೊರೋನಾ ವೈರಸ್‌ ಸೋಂಕು ತಗುಲಿ ಮೃತಪಟ್ಟವರ ಬಟ್ಟೆಮತ್ತು ಹೊದಿಕೆಗಳನ್ನು ಚೀನಾ ಆಫ್ರಿಕಾಗೆ ಸಾಗಿಸುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಬಟ್ಟೆಅಥವಾ ಹೊದಿಕೆಗಳಿರುವ ನೂರಾರು ಪ್ಯಾಕೆಟ್‌ಗಳ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಕೊರೋನಾ ವೈರಸ್‌ ಸೋಂಕು ತಗುಲಿ ಮೃತಪಟ್ಟವರ ಬಟ್ಟೆಮತ್ತು ಹೊದಿಕೆಗಳನ್ನು ಚೀನಾ ಆಫ್ರಿಕಾಗೆ ಸಾಗಿಸುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಬಟ್ಟೆಅಥವಾ ಹೊದಿಕೆಗಳಿರುವ ನೂರಾರು ಪ್ಯಾಕೆಟ್‌ಗಳ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ.

‘ದೀ ಥಿಂಕಿಂಗ್‌ ಬುಕ್‌’ ಎಂಬ ಫೇಸ್‌ಬುಕ್‌ ಬಳಕೆದಾರರು ಇದನ್ನು ಪೋಸ್ಟ್‌ ಮಾಡಿ, ‘ಇವು ಚೀನಾದಲ್ಲಿ ಕೊರೋನಾ ಸೋಂಕು ತಗುಲಿ ಮೃತಪಟ್ಟವರ ಬಟ್ಟೆಗಳು. ಚೀನಾ ಇವುಗಳನ್ನೀಗ ಆಫ್ರಿಕಾಗೆ ಸಾಗಿಸುತ್ತಿದೆ. ಹಾಗಾಗಿ ನಾವೆಲ್ಲರೂ ಎಚ್ಚರಿಕೆಯಿಂದಿರಬೇಕು’ ಎಂದು ಬರೆದುಕೊಂಡಿದ್ದಾರೆ. ಇದೀಗ ವೈರಲ್‌ ಆಗಿದೆ.

ಆದರೆ ನಿಜಕ್ಕೂ ಇವು ಕೊರೋನಾ ಸೋಂಕು ತಗುಲಿ ಮೃತಪಟ್ಟವರ ಬಟ್ಟೆಗಳೇ ಎಂದು  ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಏಕೆಂದರೆ ಇದೇ ಫೋಟೋ ಇಂಟರ್‌ನೆಟ್‌ನಲ್ಲಿ ಕಳೆದ 7 ವರ್ಷಗಳಿಂದಲೂ ಲಭ್ಯವಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2013ರಲ್ಲಿ ಫೇಸ್‌ಬುಕ್‌ನಲ್ಲಿ ಇದೇ ಫೋಟೋವನ್ನು ಪೋಸ್ಟ್‌ ಮಾಡಿದ್ದು ಕಂಡು ಬಂದಿದೆ.

ಅಲ್ಲಿಗೆ ಇದು ಕೋವಿಡ್‌-19ನಿಂದ ಮೃತಪಟ್ಟವರ ಬಟ್ಟೆಅಲ್ಲ ಎಂಬುದು ಸ್ಪಷ್ಟ. ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಈ ಫೋಟೋ ಹೆಚ್ಚಾಗಿ ಕಂಡುಬಂದಿದ್ದು, ‘ಬಳಕೆ ಮಾಡಿರುವ ಬಟ್ಟೆಗಳು’ ಎಂದೇ ಅದರಲ್ಲಿ ಮಾಹಿತಿ ಇದೆ. ಬಹುಶಃ ಸೆಕೆಂಡ್‌ ಹ್ಯಾಂಡ್‌ ಬಟ್ಟೆಗಳನ್ನು ಹಲವು ದೇಶಗಳಿಗೆ ರಫ್ತು ಮಾಡುವ ಉದ್ದೇಶವಿದ್ದಿರಬಹುದು. ಆದರೆ ಈ ಫೋಟೋಗೂ ಕೊರೋನಾ ಸೋಂಕಿಗೂ ಯಾವುದೇ ಸಂಬಂಧ ಇಲ್ಲ.

- ವೈರಕ್ ಚೆಕ್ 

PREV
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?