Fact Check: ಅಬ್ಬಬ್ಬಾ...! ಎಸ್‌ಪಿಬಿ ಆಸ್ಪತ್ರೆ ಬಿಲ್‌ 3 ಕೋಟಿ ಆಯ್ತಾ?

Suvarna News   | Asianet News
Published : Sep 30, 2020, 09:49 AM IST
Fact Check: ಅಬ್ಬಬ್ಬಾ...! ಎಸ್‌ಪಿಬಿ ಆಸ್ಪತ್ರೆ ಬಿಲ್‌ 3 ಕೋಟಿ ಆಯ್ತಾ?

ಸಾರಾಂಶ

ಗಾನಗಂಧರ್ವ ಎಸ್‌.ಪಿ.ಬಾಲಸುಬ್ರಮಣ್ಯಂ ಅವರ ಆಸ್ಪತ್ರೆ ಬಿಲ್ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. 52 ದಿನಕ್ಕೆ 3 ಕೋಟಿ ಬಿಲ್ ಆಗಿದೆ ಎನ್ನಲಾಗಿದೆ. ನಿಜನಾ ಈ ಸುದ್ದಿ? ನಿಜಕ್ಕೂ ಅಷ್ಟಾಯ್ತಾ? 

ಗಾನಗಂಧರ್ವ ಎಸ್‌.ಪಿ.ಬಾಲಸುಬ್ರಮಣ್ಯಂ ಅವರ ಚಿಕಿತ್ಸಾ ವೆಚ್ಚದ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲಿ, ‘ಅನಾರೋಗ್ಯ ನಿಮಿತ್ತ ಎಸ್‌ಪಿಬಿ ಸುಮಾರು 51 ದಿನಗಳ ಕಾಲ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಪಡೆದಿದ್ದ ಚಿಕಿತ್ಸೆಗೆ ಸುಮಾರು 3 ಕೋಟಿ ರು. ಬಿಲ್‌ ಆಗಿತ್ತು.

Fact Check: ಭವ್ಯ ರಾಮಮಂದಿರಕ್ಕೆ ಸ್ಪೆಷಲ್ ಗಂಟೆ ಸಿದ್ಧ!

ಇದರಲ್ಲಿ 1.85 ಕೋಟಿ ರು. ಮಾತ್ರ ಪುತ್ರ ಎಸ್‌.ಪಿ ಚರಣ್‌ ಪಾವತಿಸಿದ್ದರು. ಉಳಿದ ಹಣಕ್ಕಾಗಿ ಸಹಾಯ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಕುಟುಂಬ ಮನವಿ ಮಾಡಿತ್ತು. ಆದರೆ ಸರ್ಕಾರ ಪ್ರತಿಕ್ರಿಯೆ ನೀಡಲಿಲ್ಲ. ಅಂತಿಮವಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಹಾಯಹಸ್ತ ಚಾಚಿದರು. ಅನಂತರವೇ ಆಸ್ಪತ್ರೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿತ್ತು’ ಎಂದು ಹೇಳಲಾಗಿದೆ.

ಇದು ವೈರಲ್‌ ಆಗುತ್ತಿದ್ದಂತೆಯೇ ಪುತ್ರ ಚರಣ್‌ ಅವರು ವಿಡಿಯೋ ಸಂದೇಶದ ಮೂಲಕ ಇದು ಸುಳ್ಳುಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ‘ತಂದೆಯ ಆಸ್ಪತ್ರೆ ವೆಚ್ಚ, ಎಂಜಿಎಂ ಆಸ್ಪತ್ರೆ ಮತ್ತು ನೆರವಿನ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ. ಇದರಿಂದ ಬಹಳಷ್ಟುಜನರಿಗೆ ನೋವುಂಟಾಗಲಿದೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಬಗ್ಗೆ ವೈದ್ಯರು ಮತ್ತು ನಾನು ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡುತ್ತೇವೆ’ ಎಂದಿದ್ದಾರೆ.

- ವೈರಲ್ ಚೆಕ್ 

PREV
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?