Fact Check : ರಾಹುಲ್‌ 7ನೇ ವಿದ್ಯಾವಂತ ನಾಯಕನಾ?

By Suvarna NewsFirst Published Oct 20, 2020, 12:13 PM IST
Highlights

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜಗತ್ತಿನ 7ನೇ ಅತ್ಯಂತ ವಿದ್ಯಾವಂತ ವಿಶ್ವನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಜಗತ್ಪ್ರಸಿದ್ಧ ಫೋರ್ಬ್ಸ್ ಪತ್ರಿಕೆಯ ಜಾಗತಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜಗತ್ತಿನ 7ನೇ ಅತ್ಯಂತ ವಿದ್ಯಾವಂತ ವಿಶ್ವನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ನೆಟ್ಟಿಗರು ಇದನ್ನು ಪೋಸ್ಟ್‌ ಮಾಡಿ, ‘ಜಗತ್ಪ್ರಸಿದ್ಧ ಫೋರ್ಬ್ಸ್ ಜಾಗತಿಕ ಸರ್ವೆಯಲ್ಲಿ ಜಗತ್ತಿನ ಅತ್ಯಂತ ವಿದ್ಯಾವಂತ ವಿಶ್ವನಾಯಕನಾಗಿ ಗುರುತಿಸ್ಪಟ್ಟಿದ್ದಾರೆ ಹೆಮ್ಮೆಯ ನಾಯಕ ರಾಹುಲ್‌ ಗಾಂಧಿ. ವಿಶೇಷವೇನೆಂದರೆ ನಮ್ಮ ಪ್ರಧಾನಿ ಮೋದಿಗೆ ಆ ಪಟ್ಟಿಯ ಮೈಲು ದೂರದಲ್ಲೂ ಜಾಗವಿಲ್ಲ’ ಎಂದು ಬರೆದ ಪೋಸ್ಟರ್‌ ಅನ್ನು ಶೇರ್‌ ಮಾಡಿ ರಾಹುಲ್‌ ಗಾಂಧಿ ಅವರಿಗೆ ಅಭಿನಂಧನೆ ಸಲ್ಲಿಸಿದ್ದಾರೆ.

Fact Check : ಅತ್ಯಾಚಾರ ನಮ್ಮ ಸಂಸ್ಕೃತಿಯ ಅಂಗ ಅಂದ್ರಾ ಬಿಜೆಪಿ ಸಂಸದೆ?

ಆದರೆ ನಿಜಕ್ಕೂ ರಾಹುಲ್‌ ಗಾಂಧಿ ಜಗತ್ತಿನ 7ನೇ ವಿದ್ಯಾವಂತ ನಾಯಕರೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಎಂದು ಗೊತ್ತಾಗಿದೆ. ಅಲ್ಲದೆ, ಫೋರ್ಬ್ಸ್ ಇಂಥ ಪಟ್ಟಿಯನ್ನೇ ಪ್ರಕಟಿಸಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಅಲ್ಲದೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಎಂದು ಪರಿಶೀಲಿಸಿದಾಗಲೂ ಯಾವ ವರದಿಗಳೂ ಲಭ್ಯವಾಗಿಲ್ಲ.

2019 ರ ಲೋಕಸಭಾ ಚುನಾವಣೆ ವೇಳೆ ರಾಹುಲ್‌ ಗಾಂಧಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರು 1995ರಲ್ಲಿ ಯುನಿವರ್ಸಿಟಿ ಆಫ್‌ ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಲ್ಲಿ ಮಾಸ್ಟರ್‌ ಆಫ್‌ ಫಿಲಾಸಫಿ ಓದಿರುವುದಾಗಿ ಹೇಳಿಕೊಂಡಿದ್ದಾರೆ. ಅದರ ಹೊರತಾಗಿ ವೈರಲ್‌ ಸುದ್ದಿ ಕುರಿತಾದ ಯಾವುದೇ ಮಾಹಿತಿ ಇಲ್ಲ.

- ವೈರಲ್ ಚೆಕ್ 

click me!