Fact Check: ಅತ್ಯಾಚಾರ ನಮ್ಮ ಸಂಸ್ಕೃತಿಯ ಅಂಗ ಅಂದ್ರಾ ಬಿಜೆಪಿ ಸಂಸದೆ?
ಖ್ಯಾತ ನಟಿ ಹಾಗೂ ಚಂಡೀಗಢದ ಬಿಜೆಪಿ ಸಂಸದೆ ಕಿರಣ್ ಖೇರ್ ಅವರು ‘ಅತ್ಯಾಚಾರ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಜನಾ ಈ ಸುದ್ದಿ?
ಖ್ಯಾತ ನಟಿ ಹಾಗೂ ಚಂಡೀಗಢದ ಬಿಜೆಪಿ ಸಂಸದೆ ಕಿರಣ್ ಖೇರ್ ಅವರು ‘ಅತ್ಯಾಚಾರ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತನಿಷ್ಕ ಆಭರಣದ ಅಂಗಡಿ ಮೇಲೆ ದಾಳಿ; NDTV ಜಾತಕ ಬಿಚ್ಚಿಟ್ಟ ನೆಟ್ಟಿಗರು!
ಕಿರಣ್ ಖೇರ್ ಹೀಗೆ ಹೇಳಿದ್ದಾರೆಂದು ರಾಜೀವ್ ತ್ಯಾಗಿ ಎಂಬುವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ನೂರಾರು ಬಾರಿ ಶೇರ್ ಆಗಿ, ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದೇ ಪೋಸ್ಟ್ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಹಾಥ್ರಸ್ ಘಟನೆ ಹಿನ್ನೆಲೆಯಲ್ಲಿ ಖೇರ್ ಹೀಗೆ ಹೇಳಿದ್ದಾರೆಂದೂ ಹೇಳಲಾಗುತ್ತಿದೆ.
ಈ ಕುರಿತು ಪರಿಶೀಲಿಸಿದಾಗ 2018ರಲ್ಲಿ ಕಿರಣ್ ಖೇರ್ ನೀಡಿದ್ದ ಹೇಳಿಕೆಯ ವಿಡಿಯೋ ದೊರೆತಿದೆ. ಆ ವರ್ಷ ಹರ್ಯಾಣದಲ್ಲಿ ಸರಣಿ ಅತ್ಯಾಚಾರಗಳು ನಡೆದಾಗ ಕಿರಣ್ ಖೇರ್ ಸುದೀರ್ಘ ಹೇಳಿಕೆ ನೀಡಿದ್ದರು. ಅದರಲ್ಲಿ, ಅತ್ಯಾಚಾರಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ. ಸಮಾಜದ ಮನಸ್ಥಿತಿ ಬದಲಾದರಷ್ಟೇ ಇದನ್ನು ತಡೆಯಲು ಸಾಧ್ಯ. ಈ ಬದಲಾವಣೆ ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದಿದ್ದರು. ಅದನ್ನೇ ‘ಅತ್ಯಾಚಾರ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ’ ಎಂಬಂತೆ ತಿರುಚಿ ಈಗ ಹರಿಬಿಡಲಾಗಿದೆ. ಹೀಗಾಗಿ ಕಿರಣ್ ಖೇರ್ ಈ ಹೇಳಿಕೆ ನೀಡಿದ್ದು ಸುಳ್ಳು.
- ವೈರಲ್ ಚೆಕ್