ಕೇಂದ್ರ ಗೃಹ ಸಚಿವ ಅಮಿತ್ ಶಾ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ..?
ಕೇಂದ್ರ ಗೃಹ ಸಚಿವ ಅಮಿತ್ ಶಾ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಓವೈಸಿ ಕೈ ಹಿಡಿದು ಅಮಿತ್ ಶಾ ನಮಿಸುತ್ತಿರುವ ಫೋಟೋ ಶೇರ್ ಮಾಡಿ ಹೀಗೆ ಹೇಳಲಾಗುತ್ತಿದೆ.
ಬಿಹಾರ ವಿಧಾನಸಭೆಯಲ್ಲಿ ಅಚ್ಚರಿಯಂತೆ ಓವೈಸಿ ಪಕ್ಷ 5 ಸೀಟುಗಳನ್ನು ಗೆದ್ದ ಬಳಿಕ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಓವೈಸಿ ಜೊತೆ ಸೇರಿ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಉದ್ದೇಶದಿಂದ ಈ ಭೇಟಿ ನಡೆದಿದೆ ಎಂದು ಹೇಳಲಾಗಿದೆ. ಕೆಲವರು ಈ ಫೋಟೋವನ್ನು ಪೋಸ್ಟ್ ಮಾಡಿ, ‘ಬಿಹಾರದಂತೆ ಪಶ್ಚಿಮ ಬಂಗಾಳವನ್ನೂ ನಮಗೆ ಕೊಟ್ಟುಬಿಡಿ. ನಾನು ನಿಮಗೆ ನಗದು ಅಥವಾ ಏನು ಬಯಸುವಿರೋ ಅದನ್ನು ನೀಡುವೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.
undefined
Fact check: ಬಂಗಾಳಕ್ಕೆ ಶಾ ಭೇಟಿ, ಸೋಲುವ ಭೀತಿಯಲ್ಲಿ ಕಣ್ಣೀರಿಟ್ಟ ಮಮತಾ ಬ್ಯಾನರ್ಜಿ?
Someone sent me this picture. Looks morphed as Asad won't wear a saffron waist coat. But now days you never know! pic.twitter.com/VixhI6joN2
— digvijaya singh (@digvijaya_28)ಆದರೆ ನಿಜಕ್ಕೂ ಓವೈಸಿ, ಅಮಿತ್ ಶಾ ಭೇಟಿಯಾಗಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಅಕ್ಟೋಬರ್ 20, 2014ರಲ್ಲಿ ಸುದ್ದಿಸಂಸ್ಥೆಯೊಂದು ಇದೇ ಫೋಟೋ ಪ್ರಕಟಿಸಿ ವರದಿ ಮಾಡಿರುವುದು ಪತ್ತೆಯಾಗಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮಿತ್ ಶಾ ಸ್ವಾಗತಿಸುತ್ತಿರುವ ದೃಶ್ಯವಿದೆ. ಇದೇ ಫೋಟೋವನ್ನು ಬಳಸಿಕೊಂಡು ನರೇಂದ್ರ ಮೋದಿ ಅವರ ಜಾಗದಲ್ಲಿ ಓವೈಸಿ ಅವರ ಫೋಟೋ ಇರುವಂತೆ ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ವೈರಲ್ ಸುದ್ದಿ ಸುಳ್ಳು.
- ವೈರಲ್ ಸುದ್ದಿ