Fact Check: ಪ್ರಿಯಾಂಕಾ, ವಾದ್ರಾ ಮದ್ವೆ ಮಾಡಿದ್ದು ಮೌಲ್ವಿ?

By Suvarna News  |  First Published Jul 28, 2020, 9:57 AM IST

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್‌ ವಾದ್ರಾ ವಿವಾಹ ಮುಸ್ಲಿಂ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದಿತ್ತು. ಮೌಲ್ವಿಯೇ ಮುಂದೆ ನಿಂತು ವಿವಾಹ ನೆರವೇರಿಸಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?


ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್‌ ವಾದ್ರಾ ವಿವಾಹ ಮುಸ್ಲಿಂ ಸಂಪ್ರದಾಯಕ್ಕೆ ಅನುಗುಣವಾಗಿ ನಡೆದಿತ್ತು. ಮೌಲ್ವಿಯೇ ಮುಂದೆ ನಿಂತು ವಿವಾಹ ನೆರವೇರಿಸಿದ್ದರು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾರ‍್ಯಕ್ರಮವೊಂದರಲ್ಲಿ ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರೊಟ್ಟಿಗೆ ಗಡ್ಡಧಾರಿಯಾಗಿರುವ ವ್ಯಕ್ತಿ ಕುಳಿತಿರುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಚಿತ್ರದಲ್ಲಿರುವ ಗಡ್ಡಧಾರಿ ವ್ಯಕ್ತಿಯ ಹೆಸರು ಪಂಡಿತ್‌ ಇಕ್ಬಾಲ್ ಕಿಶೆನ್‌ ರೆಯು. ಅವರು ಮೊದಲ ಕಾಶ್ಮೀರಿ ಪಂಡಿತ ಕ್ರಿಕೆಟ್‌ ಅಂಪೈರ್‌. ಕಾಶ್ಮೀರ ಸೆಂಟಿನೆಲ್‌ನ 2009ರ ಲೇಖನವೊಂದರ ಪ್ರಕಾರ, ಪಂಡಿತ್‌ ಇಕ್ಬಾಲ್ ಕಿಶೆನ್‌ ರೆಯು ಕಾಶ್ಮೀರಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದರು. ಅವರು ಕುಲ ಪುರೋಹಿತ್‌ ಶಾಸ್ತ್ರಗಳ ಅಭ್ಯಾಸ ಮಾಡುತ್ತಿದ್ದರು.

Tap to resize

Latest Videos

undefined

Fact Check: ಜಿಯೋದಿಂದ 349 ರೂ ಫ್ರೀ ರೀಚಾರ್ಜ್..?

1996ರಲ್ಲಿ ರಾಬರ್ಟ್‌ ವಾದ್ರಾ ಮತ್ತು ಪ್ರಿಯಾಂಕಾ ಗಾಂಧಿಯವರ ವಿವಾಹವನ್ನು ಮಾಡಿದ ನಂತರ ಅವರು ಈ ಕೆಲಸವನ್ನು ತೊರೆದರು ಎಂದು ಪತ್ರಿಕೆ ವರದಿ ಮಾಡಿದೆ. ಅಲ್ಲದೆ ಇಕ್ಬಾಲ್ ಕಿಶೆನ್‌ ಗಾಂಧಿ ಕುಟುಂಬದ ಕುಲ ಪುರೋಹಿತರಾಗಿದ್ದು, ಹಿಂದೂ ಸಂಪ್ರದಾಯದ ರೀತಿಯಲ್ಲಿಯೇ ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಅಲ್ಲದೇ ಪ್ರಿಯಾಂಕ ಗಾಂಧಿ ಜೂನ್‌ 15ರಂದು ಹಂಚಿಕೊಂಡಿರುವ ಮದುವೆಯ ಫೋಟೊಗಳಲ್ಲಿ ಅವರು ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

- ವೈರಲ್ ಚೆಕ್ 

click me!