Fact Check: ಫೇಸ್ಬುಕ್ಕಲ್ಲಿ ದಿನಾ 200 ಕೋಟಿ ಜೈಶ್ರೀರಾಮ್‌ ಜಪ?

Published : Aug 29, 2020, 09:17 AM ISTUpdated : Aug 29, 2020, 10:08 AM IST
Fact Check: ಫೇಸ್ಬುಕ್ಕಲ್ಲಿ ದಿನಾ 200 ಕೋಟಿ ಜೈಶ್ರೀರಾಮ್‌ ಜಪ?

ಸಾರಾಂಶ

ಫೇಸ್‌ಬುಕ್‌ನಲ್ಲಿ ಪ್ರತಿ ದಿನ 200 ಕೋಟಿಗೂ ಅಧಿಕ ಬಾರಿ ‘ಜೈ ಶ್ರೀರಾಮ್‌’ ಎಂದು ಬರೆಯಲಾಗುತ್ತಿದೆ. ಅದಕ್ಕೆ ಮತ್ತಷ್ಟುಸಾವಿರಗಳನ್ನು ಸೇರಿಸೋಣ. ಜೈ ಶ್ರೀರಾಮ್‌, ಜೈ ಶ್ರೀರಾಮ್‌, ಜೈ ಶ್ರೀರಾಮ್‌’ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ಫೇಸ್‌ಬುಕ್‌ನಲ್ಲಿ ಪ್ರತಿ ದಿನ 200 ಕೋಟಿಗೂ ಅಧಿಕ ಬಾರಿ ‘ಜೈ ಶ್ರೀರಾಮ್‌’ ಎಂದು ಬರೆಯಲಾಗುತ್ತಿದೆ. ಅದಕ್ಕೆ ಮತ್ತಷ್ಟುಸಾವಿರಗಳನ್ನು ಸೇರಿಸೋಣ. ಜೈ ಶ್ರೀರಾಮ್‌, ಜೈ ಶ್ರೀರಾಮ್‌, ಜೈ ಶ್ರೀರಾಮ್‌’ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಹೇಳಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 5ರಂದು ಭೂಮಿಪೂಜೆ ನೆರವೇರಿಸಿದ ಬೆನ್ನಲ್ಲೇ ಇಂಥ ಸಂದೇಶಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಲು ಆರಂಭಿಸಿವೆ.

ಆದರೆ ನಿಜಕ್ಕೂ ಜುಕರ್‌ಬರ್ಗ್‌ ಈ ರೀತಿಯ ಹೇಳಿಕೆ ನೀಡಿದ್ದರೇ, ಪ್ರತಿ ದಿನ 200ಕೋಟಿಗೂ ಅಧಿಕ ಬಾರಿ ಜೈ ಶ್ರೀರಾಮ್‌ ಎಂದು ಫೇಸ್‌ಬುಕ್‌ನಲ್ಲಿ ಬರೆಯಲಾಗುತ್ತಿದೆಯೇ ಎಂದು  ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ.

Fact Check: ಕೊರೊನಾ ವೇಳೆ ಬಾತುಕೋಳಿಗಳ ಜೊತೆ ಮೋದಿ ಫೋಟೋಶೂಟ್?

ಏಕೆಂದರೆ ಜುಕರ್‌ಬರ್ಗ್‌ ಹೇಳಿದ್ದಾರೆ ಎನ್ನಲಾದ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಅಲ್ಲದೆ ಜುಕರ್‌ ಬರ್ಗ್‌ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲೂ ಈ ಬಗ್ಗೆ ಉಲ್ಲೇಖವಿಲ್ಲ. ಇನ್ನು ಕಳೆದ 12 ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಎಷ್ಟುಬಾರಿ ಜೈಶ್ರೀರಾಮ್‌ ಎಂದು ಬರೆಯಲಾಗಿದೆ ಎಂಬ ಬಗ್ಗೆ ಪರಿಶೀಲಿಸಿದಾಗ, ಕ್ರೌಡ್‌ಟ್ಯಾಂಗಲ್‌ ಎಂಬ ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಪ್ಲಾಟ್‌ಫಾಮ್‌ರ್‍ ಪ್ರಕಾರ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಸೇರಿ ಒಟ್ಟು 17.5 ಲಕ್ಷ ಬಾರಿ ಬರೆಯಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ವೈರಲ್‌ ಸುದ್ದಿ ಸುಳ್ಳು.

- ವೈರಲ್ ಚೆಕ್ 

PREV
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?