2022ರ ಪಂಚರಾಜ್ಯ ಚುನಾವಣೆ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿವೆ. ಈ ಮಧ್ಯೆ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ ಬೆನ್ನಲ್ಲೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು ಬೆಂಬಲಿಸುವ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Fact Check: ದೇಶದಲ್ಲಿ ಪಂಚರಾಜ್ಯಗಳು ಚುನಾವಣೆ (Assembly Elections 2022) ಅಬ್ಬರ ಜೋರಾಗಿದೆ. ದೇಶದ ಬಹುದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ (Uttar Pradesh) ಚುನಾವಣೆ ಘೋಷಣೆ ಆದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಮೇಲಾಟಗಳು ಗರಿಗೆದರಿವೆ. ಇದೇ ಮೊದಲ ಬಾರಿಗೆ ಭಾರತೀಯ ಚುನಾವಣಾ ಆಯೋಗವು ಚುನಾವಣಾ ಕಣದಲ್ಲಿ ಕ್ಯಾಂಪೇನ್ ಕರ್ಫ್ಯೂ ಅಥವಾ ಪ್ರಚಾರ ಕರ್ಫ್ಯೂ (Campaign Curfew) ಘೋಷಣೆ ಮಾಡಿದೆ. ಈ ಬೆನ್ನಲ್ಲೇ ರಾಜಕೀಯ ಪಕ್ಷಗಳು ಡಿಜಿಟಲ್ ಪ್ರಚಾರದ ಮೊರೆ ಹೋಗಿವೆ. ಈ ಮಧ್ಯೆ 2022 ರ ಉತ್ತರ ಪ್ರದೇಶ ರಾಜ್ಯ ಅಸೆಂಬ್ಲಿ ಚುನಾವಣೆ ಬೆನ್ನಲ್ಲೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು ಬೆಂಬಲಿಸುವ ಪೋಸ್ಟರನ್ನು ಹಿಡಿದಿರುವ ಇಬ್ಬರು ವೃದ್ಧರನ್ನು ತೋರಿಸುವ ಛಾಯಾಚಿತ್ರವು ಈಗ ಮತ್ತೆ ವೈರಲ್ ಆಗಿದೆ. ಈ ಚಿತ್ರ 2021 ಆಗಸ್ಟ್‌ನಲ್ಲಿ ಕೂಡ ವೈರಲ್ ಆಗಿತ್ತು.
ಫೋಟೋದಲ್ಲಿ ಒಬ್ಬ ವ್ಯಕ್ತಿ ಕೇಸರಿ ಬಟ್ಟೆಗಳನ್ನು ಧರಿಸಿದ್ದು, ಮತ್ತೊಬ್ಬ ವ್ಯಕ್ತಿ ಸ್ಕಲ್ ಕ್ಯಾಪ್ ಧರಿಸಿದ್ದಾರೆ. ಜತೆಗೆ ಇಬ್ಬರೂ ಹಿಂದೂ ಮತ್ತು ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಲ್ಲಾ ಸಮುದಾಯದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ವೈರಲ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವವರು ಹೇಳಿಕೊಂಡಿದ್ದಾರೆ.
undefined
ಆದರೆ ಕಾಂಗ್ರೆಸ್ ಅನ್ನು ಬೆಂಬಲಿಸುವ ಪೋಸ್ಟರ್‌ನಲ್ಲಿ ಫೋಟೋವನ್ನು ಬದಲಾಯಿಸಲಾಗಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದೆ. ಮಾರ್ಚ್ 2021 ರಲ್ಲಿ ಪೋಸ್ಟ್ ಮಾಡಲಾಗಿದ್ದ ಈ ಛಾಯಾಚಿತ್ರವು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅನ್ನು ಬೆಂಬಲಿಸುವ ಪೋಸ್ಟರ್ ಆಗಿದೆ. 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
UP East Youth Congress ವೆರಿಫೈಡ್ ಖಾತೆಯಿಂದ ಫೋಟೋವನ್ನು ಹಂಚಿಕೊಳ್ಳಲಾಗಿದೆ. "ये तस्वीर इस और भी इशारा कर रही है कि उत्तरप्रदेश के दिल मे इस बार सिर्फ कांग्रेस है । हिन्दू मुस्लिम सिक्ख ईसाई आपस में हम भाई भाई," ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಚಿತ್ರವು ಈ ಬಾರಿ ಕಾಂಗ್ರೆಸ್ ಮಾತ್ರ ಉತ್ತರ ಪ್ರದೇಶದ ಹೃದಯಭಾಗದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿದ್ದಾರೆ ಎಂದು ಹಿಂದಿಯಲ್ಲಿ ಹೇಳಲಾಗಿದೆ. ಇಂಥಹ ಕೆಲವು ಪೋಸ್ಟ್‌ಗಳನ್ನು ನೀವು ನೋಡಬಹುದು.
ಆದರೆ ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ 2021 ರಲ್ಲಿ ಪೋಸ್ಟ್ ಮಾಡಲಾದ ಅದೇ ರೀತಿಯ ಚಿತ್ರಗಳು ಪೋಸ್ಟ್ ಮಾಡಿರುವುದು ತಿಳಿದುಬಂದಿದೆ. ಈ ಚಿತ್ರವನ್ನು "Didi Ke Bolo" (ದೀದಿ ಹೇಳಿ) ಎಂಬ ವೆರಿಫೈಡ್ ಫೇಸ್‌ಬುಕ್ ಪುಟದಿಂದ ಪೋಸ್ಟ್ ಮಾಡಲಾಗಿದೆ. ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಕುಂದು ಕೊರತೆಗಳನ್ನು ಮತ್ತು ದೂರುಗಳನ್ನು ಹೇಳಲು ಜನರಿಗಾಗಿ ಪ್ರಾರಂಭಿಸಿದ್ದರು.
2021ರ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯ ಪೂರ್ವದಲ್ಲಿ 2 ಮಾರ್ಚ್ 2021 ರಂದು ಈ ಚಿತ್ರವನ್ನು ಪ್ರಕಟಿಸಲಾಗಿತ್ತು ಮತ್ತು ಜನರು ಏಕತೆ ಮತ್ತು ಅಭಿವೃದ್ಧಿಯನ್ನು ಬಯಸಿದರೆ ಬ್ಯಾನರ್ಜಿ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದರು. ಅದೇ ಚಿತ್ರವನ್ನು ತೃಣಮೂಲ ಕಾಂಗ್ರೆಸ್ ನಾಯಕಿ ನುಸ್ರತ್ ಜಹಾನ್ (Nusrat Jahan) ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Shameless polarisation coming from the party that understands nothing of unity or peace!
FYI, Mr people across all religions, caste groups, genders are rallying behind owing to her good work. Would recommend having some grip on your politics of hate! https://t.co/kPHt6azW3m pic.twitter.com/fioJXWjZnK
ಹೀಗಾಗಿ 2021 ರಲ್ಲಿ ಟಿಎಂಸಿಗೆ ಬೆಂಬಲವನ್ನು ನೀಡಿದ್ದ ಹಳೆಯ ಛಾಯಾಚಿತ್ರವನ್ನು ಎಡಿಟ್ ಮಾಡಲಾಗಿದೆ ಮತ್ತು ಮುಂಬರುವ ಯುಪಿ ರಾಜ್ಯ ಚುನಾವಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ಚೆಕ್ ನಲ್ಲಿ ತಿಳಿದುಬಂದಿದೆ.