Fact Check: ಚೀನಾ ವಿರುದ್ಧ ಜಪಾನ್‌ ಕ್ಷಿಪಣಿ ನಿಯೋಜನೆ ಮಾಡಿತಾ?

By Suvarna NewsFirst Published Jul 4, 2020, 6:04 PM IST
Highlights

ಚೀನಾ-ಭಾರತ ಗಡಿ ಸಂಘರ್ಷ ಏರ್ಪಟ್ಟಬಳಿಕ ಜಪಾನ್‌ ತನ್ನ ಗಡಿಯಲ್ಲಿ ಚೀನಾದ ವಿರುದ್ಧ ಕ್ಷಿಪಣಿ ನಿಯೋಜಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ಚೀನಾಗೆ ಕೌಂಟರ್ ಕೊಡಲು ಮುಂದಾಯಿತಾ ಜಪಾನ್? ಏನಿದರ ಅಸಲಿಯತ್ತು? ಇಲ್ಲಿದೆ ನೋಡಿ..!

ನವದೆಹಲಿ (ಜು. 04):  ಚೀನಾ-ಭಾರತ ಗಡಿ ಸಂಘರ್ಷ ಏರ್ಪಟ್ಟಬಳಿಕ ಜಪಾನ್‌ ತನ್ನ ಗಡಿಯಲ್ಲಿ ಚೀನಾದ ವಿರುದ್ಧ ಕ್ಷಿಪಣಿ ನಿಯೋಜಿಸಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಭಾರತದ ಯೋಧರಿಗೆ ಚೀನಾ ಮತ್ತೆ ಹಿಂಸೆ ನೀಡಿತಾ?

ಥೈಲ್ಯಾಂಡ್‌ ಮೂಲದ ನ್ಯೂಸ್‌ ವೆಬ್‌ಸೈಟ್‌ ‘ಏಷ್ಯಾ ನ್ಯೂಸ್‌’ ಮೊದಲಿಗೆ ಇಂಥದ್ದೊಂದು ಸುದ್ದಿಯನ್ನು ವರದಿ ಮಾಡಿ, ‘ಪೇಟ್ರಿಯಾಟ್‌ ಪ್ಯಾಕ್‌-3 ಎಂಎಸ್‌ಇ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ತನ್ನ 4 ವಾಯುನೆಲೆಗಳಲ್ಲಿ ನಿಯೋಜಿಸಲು ಜಪಾನ್‌ ನಿರ್ಧರಿಸಿದೆ’ ಎಂದು ಬರೆದುಕೊಂಡಿತ್ತು. ಇದು ಟ್ವೀಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರೂ ಇದನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು.

ಆದರೆ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ. ಭಾರತ-ಚೀನಾ ಗಡಿ ಸಂಘರ್ಷಕ್ಕೂ, ಜಪಾನ್‌ ತನ್ನ ಗಡಿಯಲ್ಲಿ ಕ್ಷಿಪಣಿ ನಿಯೋಜಿಸಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜಪಾನ್‌, ಪೇಟ್ರಿಯಾಟ್‌ ಪ್ಯಾಕ್‌-3 ಎಂಎಸ್‌ಇ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ವಾಯುನೆಲೆಗಳಲ್ಲಿ ಇತ್ತೀಚೆಗೆ ನಿಯೋಜಿಸಿತ್ತು. ಉತ್ತರ ಕೊರಿಯಾ ಸೇನಾ ಜಮಾವಣೆ ಮಾಡುವುದಾಗಿ ಪ್ರಕಟಿಸಿದ್ದಕ್ಕೆ ಪ್ರತಿಯಾಗಿ ಜಪಾನ್‌ ತನ್ನ ಗಡಿಯಲ್ಲಿ ಕ್ಷಿಪಣಿ ನಿಯೋಜನೆ ಮಾಡಿತ್ತು. ಜಪಾನ್‌ನ ಈ ನಿರ್ಧಾರವನ್ನು ಚೀನಾ-ಭಾರತ ಸಂಘರ್ಷಕ್ಕೆ ತಳುಕು ಹಾಕಿ ಸೋಷಿಯಲ್‌ ಮೀಡಿಯಾಗಳಲ್ಲಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್‌ ಚೆಕ್ 

click me!