Fact Check: ಲಡಾಖ್‌ ಬಳಿ ಭಾರತದ ಯುದ್ಧ ವಿಮಾನ ಪತನಗೊಂಡಿತೆ?

By Suvarna NewsFirst Published Sep 18, 2020, 10:24 AM IST
Highlights

ಚೀನಾ- ಭಾರತದ ನಡುವೆ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವಾಗ  ಲಡಾಖ್‌ ಬಳಿ ಭಾರತದ ಯುದ್ಧ ವಿಮಾನ ಪತನಗೊಂಡಿದೆ ಎಂದು ಹೇಳಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ಭಗ್ನಾವಶೇಷಗೊಂಡ ಹೆಲಿಕಾಪ್ಟರ್‌ವೊಂದರ ಫೋಟೋವನ್ನು ಪೋಸ್ಟ್‌ ಮಾಡಿ, ಲಡಾಖ್‌ ಬಳಿ ಭಾರತದ ಯುದ್ಧ ವಿಮಾನ ಪತನಗೊಂಡಿದೆ ಎಂದು ಹೇಳಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಭಾರತ-ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಗಡಿ ವಿಚಾರವಾಗಿ ಸಂಘರ್ಷ ಏರ್ಪಟ್ಟಬೆನ್ನಲ್ಲೇ ಈ ಸುದ್ದಿ ಹರಿದಾಡುತ್ತಿದ್ದು, ಕೆಲವರು ಇದನ್ನು ಪೋಸ್ಟ್‌ ಮಾಡಿ, ‘ಭಾರತೀಯ ವಾಯುಸೇನೆಯ ಮಿಗ್‌-17 ವಿಮಾನ ಲಡಾಖ್‌ ಬಳಿ ಪತನಗೊಂಡಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಪಾಕಿಸ್ತಾನ ಟೀವಿ ಆ್ಯಂಕರ್‌ ಸೇರಿದಂತೆ ಹಲವು ಪಾಕಿಸ್ತಾನಿ ನೆಟ್ಟಿಗಳು ಈ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋವೀಗ ವೈರಲ್‌ ಆಗುತ್ತಿದೆ.

fact Check: ಹೊಸ ರಫೇಲ್ ವಿಮಾನ ಪತನ, ಇಬ್ಬರು ಪೈಲಟ್ ಸಾವು?

ಆದರೆ ನಿಜಕ್ಕೂ ಇತ್ತೀಚೆಗೆ ಭಾರತದ ವಿಮಾನ ಪತನಗೊಂಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಇದರ ಜಾಡು ಹಿಡಿದು ಪತ್ತೆಹಚ್ಚಿದಾಗ, 2018 ಏಪ್ರಿಲ್‌ 3ರಂದು ಸುದ್ದಿಸಂಸ್ಥೆಯೊಂದರ ವರದಿಯಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ.

 

Joint Sino-Indian Humanitarian Assistance & Disaster Relief Exercise conducted by soldiers in Ladakh. pic.twitter.com/x1GIF2OzdP

— NorthernComd.IA (@NorthernComd_IA)

ಅದರಲ್ಲಿ ಉತ್ತರಾಖಂಡದ ಕೇದಾರನಾಥ ದೇವಾಲಯದ ಸಮೀಪ ಭಾರತೀಯ ವಾಯುಸೇನೆಯ ಸರಕು ಸಾಗಣೆ ಹೆಲಿಕಾಪ್ಟರ್‌ ಪತನಗೊಂಡಿತ್ತು ಎಂಬ ಮಾಹಿತಿ ಇದೆ. ಅಲ್ಲದೆ ಐಎಎಫ್‌ ಪೈಲಟ್‌ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿತ್ತು. ಅದರ ಹೊರತಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಇದೆ. ಹಾಗಾಗಿ ಇದೇ ಫೋಟೋವನ್ನು ಬಳಸಿಕೊಂಡು ಚೀನಾ-ಭಾರತ ಗಡಿ ಸಂಘರ್ಷದೊಂದಿಗೆ ತಳುಕು ಹಾಕಿ ಸುಳ್ಳುಸುದ್ದಿ ಹರಡಲಾಗಿದೆ ಎಂಬುದು ಸ್ಪಷ್ಟ.

- ವೈರಲ್ ಚೆಕ್ 

click me!