ಕೆಸರು ಗದ್ದೆಯಲ್ಲಿ ಕುಳಿತು ಮಕ್ಕಳು ಪಾಠ ಕೇಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಪೋಸ್ಟ್ ಮಾಡಿ, ‘ವಿಶ್ವದ ಅತಿ ಎತ್ತರದ ಪ್ರತಿಮೆ ಹೊಂದಿರುವ ಭಾರತ ದೇಶದಲ್ಲಿ ಶಾಲೆಗಳ ಪಾಡು ಏನಾಗಿದೆ ನೋಡಿ’ ಎಂದು ವ್ಯಂಗ್ಯವಾಗಿ ಟೀಕಿಸಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಕೆಸರು ಗದ್ದೆಯಲ್ಲಿ ಕುಳಿತು ಮಕ್ಕಳು ಪಾಠ ಕೇಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಪೋಸ್ಟ್ ಮಾಡಿ, ‘ವಿಶ್ವದ ಅತಿ ಎತ್ತರದ ಪ್ರತಿಮೆ ಹೊಂದಿರುವ ಭಾರತ ದೇಶದಲ್ಲಿ ಶಾಲೆಗಳ ಪಾಡು ಏನಾಗಿದೆ ನೋಡಿ’ ಎಂದು ವ್ಯಂಗ್ಯವಾಗಿ ಟೀಕಿಸಲಾಗಿದೆ.
ಪುಟ್ಟಮಕ್ಕಳು ಕೆಸರಿನ ಮೇಲೆ ಕುಳಿತು ಪಾಠ ಕೇಳುವ ಈ ಫೋಟೋ ಕಂಡು ನೆಟ್ಟಿಗರು ಮರುಗಿ, ದೇಶದ ಭವಿಷ್ಯಕ್ಕೆ ಬೇಕಾಗಿರುವುದು ಎತ್ತರದ ಪ್ರತಿಮೆಗಳಲ್ಲ, ಅತ್ಯುತ್ತಮ ಶಾಲೆಗಳು ಎಂದು ಕಿಡಿಕಾರಿದ್ದಾರೆ. ಈ ಫೋಟೋವೀಗ ಟ್ವೀಟರ್ ಮತ್ತು ಫೇಸ್‌ಬುಕ್‌ನಲ್ಲಿ ಸಾವಿರಾರು ಬಾರಿ ಶೇರ್ ಆಗುತ್ತಿದೆ.
undefined
ಆದರೆ ನಿಜಕ್ಕೂ ಇದು ಭಾರತದ ಶಾಲೆಯೇ ಎಂದು ಪರಿಶೀಲಿಸಿದಾಗ ವೈರಲ್ ಚಿತ್ರ ಭಾರತದ್ದಲ್ಲ ಎಂಬುದು ಖಚಿತವಾಗಿದೆ. ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ಪಾಕಿಸ್ತಾನ ವಿದೇಶಾಂಗ ಇಲಾಖೆಯಲ್ಲಿ ಕಾರ‍್ಯನಿರ್ವಹಿಸಿದ್ದ ಇಮ್ರಾನ್ ಲಷಾರಿ ಎಂಬವರ ಟ್ವೀಟ್‌ನಲ್ಲಿ ಇದೇ ಚಿತ್ರ ಪತ್ತೆಯಾಗಿದೆ.
Fact Check: 'ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ'
ಈ ಟ್ವೀಟ್ ಜಾಡು ಹಿಡಿದು ಪರಿಶೀಲಿಸಿದಾಗ 2015ರಲ್ಲಿ ಪಾಕಿಸ್ತಾನ ಮೂಲದ ಸುದ್ದಿಸಂಸ್ಥೆಯೊಂದು ಈ ಫೋಟೋ ಪ್ರಕಟಿಸಿ ಮಾಡಿದ್ದ ವರದಿಯೊಂದು ಪತ್ತೆಯಾಗಿದೆ. ಈ ವರದಿಯಲ್ಲಿ ವೈರಲ್ ಚಿತ್ರದಲ್ಲಿರುವ ಶಾಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಕನಿಷ್ಠ 5 ವರ್ಷ ಹಳೆಯದಾದ ಪಾಕಿಸ್ತಾನ ಶಾಲೆಯ ಚಿತ್ರವನ್ನು ಸದ್ಯ ಭಾರತದ್ದು ಎಂದು ಕತೆಕಟ್ಟಿಸುಳ್ಳುಸುದ್ದಿ ಹರಡಲಾಗುತ್ತಿದೆ ಎಂಬುದು ಸ್ಪಷ್ಟ.
- ವೈರಲ್ ಚೆಕ್