Fact Check: ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’

Suvarna News   | Asianet News
Published : Jul 22, 2020, 10:21 AM ISTUpdated : Jul 22, 2020, 10:46 AM IST
Fact Check: ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’

ಸಾರಾಂಶ

ಭಾರತದಲ್ಲಿ ಕೊರೋನಾ ವೈರಸ್‌ ರಣಕೇಕೆ ಮುಂದುವರೆಸಿದೆ. ಉದ್ಯಾನ ನಗರಿ ಬೆಂಗಳೂರು ಸಹ ಕೊರೋನಾ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಯಾಗಿದೆ. ಈ ನಡುವೆ ಕಿರಿದಾದ ಜಾಗದಲ್ಲಿ ಕಿಕ್ಕಿರಿದು ಜನರು ನಿಂತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’ ಎಂದು ಹೇಳಲಾಗುತ್ತಿದೆ. ‘ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಯೂ ಇಲ್ಲದಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ನಿಜನಾ ಈ ಸುದ್ದಿ? 

ಭಾರತದಲ್ಲಿ ಕೊರೋನಾ ವೈರಸ್‌ ರಣಕೇಕೆ ಮುಂದುವರೆಸಿದೆ. ಉದ್ಯಾನ ನಗರಿ ಬೆಂಗಳೂರು ಸಹ ಕೊರೋನಾ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಯಾಗಿದೆ. ಈ ನಡುವೆ ಕಿರಿದಾದ ಜಾಗದಲ್ಲಿ ಕಿಕ್ಕಿರಿದು ಜನರು ನಿಂತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’ ಎಂದು ಹೇಳಲಾಗುತ್ತಿದೆ. ‘ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಯೂ ಇಲ್ಲದಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

 

ಆದರೆ ನಿಜಕ್ಕೂ ಇದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ದೃಶ್ಯವೇ ಎಂದು ಪರಿಶೀಲಿಸಿದಾಗ ಇದು ಬೆಂಗಳೂರಿನ ವಿಡಿಯೋ ಅಲ್ಲ, ಪಟನಾದ ಮಹಾವೀರ್‌ ಕ್ಯಾನ್ಸರ್‌ ಸಂಸ್ಥಾನದ್ದು ಎಂಬ ವಾಸ್ತವ ತಿಳಿದುಬಂದಿದೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ವಿಕ್ಟೋರಿಯಾ ಆಸ್ಪತ್ರೆ ಅಧಿಕಾರಿಗಳೂ ಸಹ ಸ್ಪಷ್ಟನೆ ನೀಡಿ, ‘ವೈರಲ್‌ ವಿಡಿಯೋದಲ್ಲಿರುವ ಆಸ್ಪತ್ರೆ ಬೆಂಗಳೂರಿನ ವಿಕ್ಟೋರಿಯಾ ಅಲ್ಲ’ ಎಂದಿದ್ದಾರೆ. ಇನ್ನು ಬೇರೆ ಬೇರೆ ಮೂಲಗಳಿಂದ ಪರಿಶೀಲಿಸಿದಾಗ ವೈರಲ್‌ ವಿಡಿಯೋದಲ್ಲಿರುವ ಆಸ್ಪತ್ರೆ ಪಟನಾದ ಮಹಾವೀರ್‌ ಕ್ಯಾನ್ಸರ್‌ ಸಂಸ್ಥಾನ ಎಂಬುದು ಖಚಿತವಾಗಿದೆ.

 

‘ಕೆಲವು ವೈದ್ಯರು ಮತ್ತು ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಆಸ್ಪತ್ರೆಯನ್ನು ಬಂದ್‌ ಮಾಡಲಾಗಿತ್ತು. ಜು.15ರಂದು ಆಸ್ಪತ್ರೆ ಮರು ಆರಂಭವಾದ ಕೆಲವೇ ಕ್ಷಣದಲ್ಲಿ ಹಲವಾರು ರೋಗಿಗಳು ನೆರೆದಿದ್ದರು’ ಎಂದು ಅಲ್ಲಿನ ವೈದ್ಯರೊಬ್ಬರು ಸ್ಪಷ್ಟಪಡಿಸಿದ್ದಾರೆ.

- ವೈರಲ್ ಚೆಕ್ 

PREV
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?