
ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ದಿನೇ ದಿನೇ ಗಗನಕ್ಕೇರುತ್ತಿರುವ ಕಾರಣ ಗ್ರಾಹಕರು ಕಂಗಾಲಾಗಿದ್ದಾರೆ. ಪೆಟ್ರೋಲಿಯಂ (Petrolium) ಉದ್ಯಮ ಕಂಪನಿ ಇಂಡಿಯನ್ ಆಯಿಲ್ (Indian Oil) ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಆನ್‌ಲೈನ್ ಸ್ಪರ್ಧೆಯಲ್ಲಿ ಗೆಲ್ಲುವ ಗ್ರಾಹಕರಿಗೆ 6000 ರು. ಮೌಲ್ಯದ ಗಿಫ್ಟ್ ವೋಚರ್ (Gift Vocher) ನೀಡಲಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Fact Check: ಕರ್ನಾಟಕದ ಮಕ್ಕಳು ಸನಾತನ ಧರ್ಮ ರಕ್ಷಣೆಗೆ ಮುಂದಾಗಿದ್ದು ಎಂಬ ವೈರಲ್ ಫೋಟೋ
ವೈರಲ್ ಸಂದೇಶದಲ್ಲಿ ಇಂಡಿಯನ್ ಆಯಿಲ್ ಕಂಪನಿಯು ಆನ್ಲೈನ್ ಮೂಲಕ ಸ್ಪರ್ಧೆಯನ್ನು ಆಯೋಜಿಸಿದೆ. ಅದರಲ್ಲಿ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ. ಸರಿಯಾದ ಉತ್ತರ ನೀಡುವ ಅದೃಷ್ಟಶಾಲಿ ಗ್ರಾಹಕರಿಗೆ ಬಂಪರ್ 6000 ರು. ಮೌಲ್ಯದ ಗಿಫ್‌್ಟವೋಚರ್ ಬಹುಮಾನ ಗೆಲ್ಲುವ ಅವಕಾಶವಿದೆ ಎಂದು ಹೇಳಲಾಗಿದೆ. ಸ್ಪರ್ಧೆಯಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಒಂದು ‘ನಿಮಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೊತ್ತೇ?’ ಎಂಬುದಾಗಿದೆ. ತೈಲ ದರ ಕೈಸುಡುತ್ತಿರುವ ಕಾರಣ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆದರೆ ನಿಜಕ್ಕೂ ಇಂಡಿಯನ್ ಆಯಿಲ್ ಕಂಪನಿ ಆನ್‌ಲೈನ್ ಸ್ಪರ್ಧೆ ಆಯೋಜಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಕೇಂದ್ರ ಸರ್ಕಾರದ ನೋಡಲ್ ಸಂಸ್ಥೆಯಾಗಿರುವ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PBI) ಸಹ ಇದು ಸುಳ್ಳುಸುದ್ದಿ ಎಂದು ಖಚಿತಪಡಿಸಿದೆ. ಅಲ್ಲದೆ ಇಂಥ ಸುದ್ದಿಗಳು ಹರಿದಾಡಿದಾಗ ಕಂಪನಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸುವಂತೆ ಸಲಹೆ ನೀಡಿದೆ.
- ವೈರಲ್ ಚೆಕ್