Fact Check : ಹೊಪ್‌ ಶೂಟ್ಸ್‌ ಬೆಳೆದ ಬಿಹಾರ ರೈತ, ಕೆಜಿಗೆ ಇದರ ಬೆಲೆ ಎಷ್ಟು ಗೊತ್ತಾ?

By Suvarna News  |  First Published Apr 5, 2021, 5:46 PM IST

 ಬಿಹಾರದ ಔರಂಗಾಬಾದ್‌ ಜಿಲ್ಲೆಯ ಅಮ್ರೇಶ್‌ ಸಿಂಗ್‌ ಎಂಬಾತ ಹೊಪ್‌ ಶೂಟ್ಸ್‌ ತರಕಾರಿಯನ್ನು ಮೊದಲ ಬಾರಿಗೆ ಭಾರತದಲ್ಲೂ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸಂದೇಶ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.ನಿಜನಾ ಈ ಸುದ್ದಿ..?


ತರಕಾರಿಯ ದರ 100 ರು. ದಾಟಿದರೆ ಬೊಬ್ಬೆ ಹಾಕುತ್ತೇವೆ. ಆದರೆ, ಹೊಪ್‌ ಶೂಟ್ಸ್‌ ಹೆಸರಿನ ತರಕಾರಿ ಬೆಲೆ ಕೇಳಿದರೆ ನೀವು ಹೌಹಾರುವುದು ಪಕ್ಕಾ. ಏಕೆಂದರೆ ಈ ತರಕಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೇಜಿಗೆ 85 ಸಾವಿರದಿಂದ 1 ಲಕ್ಷ ರು.ವರೆಗೂ ದರ ಇದೆ.

ಬಿಹಾರದ ಔರಂಗಾಬಾದ್‌ ಜಿಲ್ಲೆಯ ಅಮ್ರೇಶ್‌ ಸಿಂಗ್‌ ಎಂಬಾತ ಹೊಪ್‌ ಶೂಟ್ಸ್‌ ತರಕಾರಿಯನ್ನು ಮೊದಲ ಬಾರಿಗೆ ಭಾರತದಲ್ಲೂ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸಂದೇಶ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅಮ್ರೇಶ್‌ ಸಿಂಗ್‌ ಮೊದಲು ಉತ್ತರ ಪ್ರದೇಶದ ವಾರಾಣಸಿಯ ಭಾರತೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ ಸಸಿಗಳನ್ನು ತಂದು ಭಾರತದ ಮಣ್ಣಿನಲ್ಲಿಯೂ ಈ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಈ ತರಕಾರಿ ಕ್ಯಾನ್ಸರ್‌ ಚಿಕಿತ್ಸೆಗೆ ಬಳಕೆ ಆಗುತ್ತಂತೆ. ಹೀಗಾಗಿ ಇದಕ್ಕೆ ಇಷ್ಟೊಂದು ದರ ಎಂದೂ ವೈರಲ್‌ ಆದ ಸಂದೇಶದಲ್ಲಿ ಹೇಳಲಾಗಿದೆ. ಇದು ಹಲವು ಮಾಧ್ಯಮಗಳಲ್ಲೂ ವರದಿಯಾಗಿದೆ.

Latest Videos

undefined

Fact Check : ತಮಿಳುನಾಡು ರಾಹುಲ್ ಗಾಂಧಿ ರ್ಯಾಲಿಯಲ್ಲಿ ಜನಸಾಗರ!

ಆದರೆ ಹೊಪ್‌ಶೂಟ್ಸ್‌ ತರಕಾರಿಯನ್ನು ಬಿಹಾರ ರೈತ ಅಮರೇಶ್‌ ಅವು ಬೆಳೆದಿರುವುದು ನಿಜವೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಅಮರೇಶ್‌ ಅವರ ಮನೆಗೇ ಹೋಗಿ ಪರಿಶೀಲಿಸಿದಾಗ ಅವರು ಈ ಬೆಳೆಯನ್ನು ಬೆಳೆದೇ ಇಲ್ಲ ಎಂಬ ವಾಸ್ತವ ಪತ್ತೆಯಾಗಿದೆ. ಹಾಗೆಯೇ ಇಡೀ ಹಳ್ಳಿಯಲ್ಲಿ ಯಾರೂ ಹೊಪ್‌ಶೂಟ್ಸ್‌ ಹೆಸರಿನ ಬೆಳೆ ಬೆಳೆಯುತ್ತಿಲ್ಲ ಎಂದು ಅಲ್ಲಿನ ರೈತರು ಖಚಿತಪಡಿಸಿದ್ದಾರೆ.

- ವೈರಲ್ ಚೆಕ್ 

click me!