Fact Check: ಲಾಕ್‌ಡೌನ್ ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬರಿಗೂ 2 ಸಾವಿರ ಪರಿಹಾರ ಧನ?

By Suvarna News  |  First Published Jul 6, 2020, 10:19 AM IST

ಕೇಂದ್ರ ಸರ್ಕಾರ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸಿದೆ. ದೇಶದ ಪ್ರತಿಯೊಬ್ಬರಿಗೂ 2000 ರು.ವನ್ನು ಲಾಕ್‌ಡೌನ್‌ ಪರಿಹಾರವಾಗಿ ನೀಡಲು ನಿರ್ಧರಿಸಿದೆ. ಇದನ್ನು ಒಬ್ಬರು ಒಮ್ಮೆ ಮಾತ್ರ ಪಡೆಯಲು ಸಾಧ್ಯ. ಕೆಳಗಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಎಂಥಾ ಖುಷಿ ಸುದ್ದಿ ಅಲ್ವಾ? ಹಾಗಾದ್ರೆ ನಿಜನಾ ಇದು? ಇಲ್ಲಿದೆ ಸತ್ಯಾಸತ್ಯತೆ.


ನವದೆಹಲಿ (ಜು. 06): ಕೊರೋನಾ ವೈರಸ್‌ ತಡೆಗಟ್ಟಲು ಕೇಂದ್ರ ಸರ್ಕಾರ ಲಾಕ್‌ಡೌನ್‌ ಹೇರಿದ ಕಾರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಉದ್ಯೋಗ ಅರಸಿ ನಗರಕ್ಕೆ ಬಂದವರು ಕೊರೋನಾ ಹೊಡೆತಕ್ಕೆ ಮತ್ತೆ ಹಳ್ಳಿಗಳೆಡೆಗೆ ಮುಖ ಮಾಡಿದ್ದಾರೆ.

ಹೀಗಿರುವಾಗ ‘ಕೊನೆಗೂ ಕೇಂದ್ರ ಸರ್ಕಾರ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸಿದೆ. ದೇಶದ ಪ್ರತಿಯೊಬ್ಬರಿಗೂ 2000 ರು.ವನ್ನು ಲಾಕ್‌ಡೌನ್‌ ಪರಿಹಾರವಾಗಿ ನೀಡಲು ನಿರ್ಧರಿಸಿದೆ. ಇದನ್ನು ಒಬ್ಬರು ಒಮ್ಮೆ ಮಾತ್ರ ಪಡೆಯಲು ಸಾಧ್ಯ. ಕೆಳಗಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಆದರೆ ನಿಜಕ್ಕೂ ಕೇಂದ್ರ ಸರ್ಕಾರ ಲಾಕ್‌ಡೌನ್‌ ಪರಿಹಾರ ಘೋಷಿಸಿದೆಯೇ ಎಂದು ಪರಿಶೀಲಿಸಿದಾಗ ವೈರಲ್‌ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ.

Tap to resize

Latest Videos

undefined

Fact Check: ಭಾರತದಲ್ಲಿ ಚೀನಾ ಬ್ಯಾಂಕ್‌ ತೆರೆಯಲು ಅನುಮತಿ ನೀಡಿತಾ ಆರ್‌ಬಿಐ?

ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ (ಪಿಐಬಿ) ಈ ಬಗ್ಗೆ ಸ್ಪಷ್ಟನೆ ನೀಡಿ, ಸರ್ಕಾರ 2000 ರು. ಲಾಕ್‌ಡೌನ್‌ ಪರಿಹಾರ ಧನ ನೀಡುತ್ತಿದೆ ಎಂಬ ಸುದ್ದಿ ಸುಳ್ಳು. ಸರ್ಕಾರ ಇಂಥ ಯಾವುದೇ ಯೋಜನೆಯನ್ನೂ ಜಾರಿ ಮಾಡಿಲ್ಲ. ಈ ರೀತಿ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಹೇಳಿದೆ.

 

Claim- A whatsapp viral message claims that Government has approved and started giving out free Rs 2000 relief fund to each citizen.: . The fraud link given is a Clickbait. Beware of such Fraudulent websites and whatsapp forwards. pic.twitter.com/6JWIx8AIDe

— PIB Fact Check (@PIBFactCheck)

 

- ವೈರಲ್ ಚೆಕ್  

click me!