Fact Check: ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಅಕ್ಕಿ ಆಯ್ತು, ಮಾರುಕಟ್ಟೆಗೆ ಬಂದಿದೆ ನಕಲಿ ಗೋಡಂಬಿ!

By Suvarna News  |  First Published Aug 26, 2020, 9:11 AM IST

ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಅಕ್ಕಿ ಮಾರುಕಟ್ಟೆಗೆ ಬಂದಿದೆ ಎಂಬ ಸುದ್ದಿಗಳ ನಂತರ ಸದ್ಯ ನಕಲಿ ಗೋಡಂಬಿ ಸಹ ಮಾರುಕಟ್ಟೆಗೆ ಬಂದಿದೆ ಎಂಬ ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 


ಪ್ಲಾಸ್ಟಿಕ್‌ ಮೊಟ್ಟೆ, ಪ್ಲಾಸ್ಟಿಕ್‌ ಅಕ್ಕಿ ಮಾರುಕಟ್ಟೆಗೆ ಬಂದಿದೆ ಎಂಬ ಸುದ್ದಿಗಳ ನಂತರ ಸದ್ಯ ನಕಲಿ ಗೋಡಂಬಿ ಸಹ ಮಾರುಕಟ್ಟೆಗೆ ಬಂದಿದೆ ಎಂಬ ಮತ್ತೊಂದು ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಯಂತ್ರವೊಂದು ಬಿಳಿಯ ಬಣ್ಣದ ಕಾಗದದಿಂದ ಗೋಡಂಬಿ ವಿನ್ಯಾಸದ ತಿನಿಸನ್ನು ಉತ್ಪಾದಿಸುವ ವಿಡಿಯೋ ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ನೆಟ್ಟಿಗರು ಇದನ್ನು ಪೋಸ್ಟ್‌ ಮಾಡಿ, ‘ಈಗಾಗಲೇ ಇದ್ದ ಸಮಸ್ಯೆಗೆ ಇನ್ನೊಂದು ಸೇರ್ಪಡೆಯಾಗಿದೆ. ಗ್ರಾಹಕರೇ ಗೋಡಂಬಿ ಕೊಳ್ಳುವ ಮುನ್ನ ಒಮ್ಮೆ ಪರೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಹುಣಸೆ ಬೀಜದಿಂದ ಗೋಡಂಬಿ ತಯಾರಿಸಲಾಗುತ್ತಿದೆ. ಹೋಟೆಲ್‌ ಮಾಲಿಕರು ಇದನ್ನು ಸೋವಿ ಬೆಲೆಗೆ ಪಡೆದು ಅಡುಗೆಗೆ ಬಳಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ 5000ಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದಿದೆ.

Tap to resize

Latest Videos

undefined

 

A friend of mine sent this video to have it posted. Now we have one more added problem, please check the cashews before buying. Lesson: nothing to be taken for granted. pic.twitter.com/3F9i7McA4t

— ProfMKay🇮🇳 (@ProfMKay)

ಆದರೆ ವೈರಲ್‌ ವಿಡಿಯೋ ಹಿಂದಿನ ಸತ್ಯಾಸತ್ಯ ಏನೆಂದು ಪರಿಶೀಲಿಸಿದಾಗ ಗೋಡಂಬಿ ವಿನ್ಯಾಸದ ಬೇರೊಂದು ತಿನಿಸು ತಯಾರಿಸುವ ಯಂತ್ರದ ವಿಡಿಯೋವನ್ನೇ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿದುಬಂದಿದೆ. ಯುಟ್ಯೂಬ್‌ನಲ್ಲಿ ಈ ರೀತಿಯ ಹಲವು ವಿಡಿಯೋಗಳು ಲಭ್ಯವಿದ್ದು, ತುಷಾರ್‌ ಪಾಡ್ಯ ಎಂಬುವರೂ ಸಹ ಇದೇ ರೀತಿಯ ವಿಡಿಯೋ ಅಪ್ಲೋಡ್‌ ಮಾಡಿದ್ದಾರೆ.

Fact Check: ಧ್ಯೇಯವಾಕ್ಯ ಬದಲಿಸಿದ ಸುಪ್ರೀಂಕೋರ್ಟ್‌?

 ಪಾಡ್ಯ ಅವರನ್ನು ಸಂಪರ್ಕಿಸಿ ವಿಡಿಯೋ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ,‘ವಿಡಿಯೋದಲ್ಲಿರುವುದು ಗೋಡಂಬಿ ತಯಾರಿಸುವ ದೃಶ್ಯವಲ್ಲ. ಗೋಡಂಬಿ ವಿನ್ಯಾಸದ ಬಿಸ್ಕೆಟ್‌ ತಯಾರಿಸುತ್ತಿರುವ ದೃಶ್ಯ’ ಎಂದಿದ್ದಾರೆ. ಹಾಗಾಗಿ ನಕಲಿ ಗೋಡಂಬಿ ಮಾರುಕಟ್ಟೆಗೆ ಬಂದಿದೆ ಎಂಬುದು ಸುಳ್ಳುಸುದ್ದಿ.

- ವೈರಲ್ ಚೆಕ್ 

click me!