Fact Check : ಸೆ.1 ರಿಂದ ವಿದ್ಯುತ್‌ ದರ ಪಾವತಿ ಮಾಡಬೇಕಾಗಿಲ್ಲ?

By Suvarna News  |  First Published Sep 5, 2020, 9:49 AM IST

ಕೊರೊನಾ ವೈರಸ್‌ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವವರಿಗೆ ಕೇಂದ್ರ ಸರ್ಕಾರ ವಿದ್ಯುತ್ ಶುಲ್ಕ ವಿನಾಯಿತಿ ನೀಡುತ್ತಿದೆ. ಸೆ. 01 ರಿಂದ ವಿದ್ಯುತ್ ಬಿಲ್ ವಿನಾಯತಿ ನೀಡಲಾಗುತ್ತದೆ. ನಿಜನಾ ಈ ಸುದ್ದಿ? 


ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ಹಲವಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಅವರ ಬೆನ್ನ ಹಿಂದೆ ನಿಂತಿದೆ. ಅವರ ಕಂಷ್ಟಕ್ಕೆ ಕೊಂಚ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ. ಅದುವೇ ವಿದ್ಯುತ್‌ ಶುಲ್ಕ ವಿನಾಯಿತಿ ಯೋಜನೆ.

ಈ ಯೋಜನೆಯ ಪ್ರಕಾರ, ಸೆಪ್ಟೆಂಬರ್‌ 1ರಿಂದ ಜನರು ತಾವು ಬಳಸುವ ವಿದ್ಯುತ್‌ ಶುಲ್ಕವನ್ನು ಪಾವತಿ ಮಾಡಬೇಕಾದ ಅಗತ್ಯ ಇಲ್ಲ. ಸರ್ಕಾರವೇ ದೇಶದ ಎಲ್ಲ ಕುಟುಂಬಗಳ ವಿದ್ಯುತ್‌ ಶುಲ್ಕವನ್ನು ಭರಿಸಲಾಗಿದೆ ಎನ್ನಲಾಗಿದೆ. ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕೆಲವರು ಮೋದಿ ಸರ್ಕಾರವನ್ನು ಜನಪರ ಸರ್ಕಾರ ಎಂದು ಕೊಂಡಾಡಿದ್ದಾರೆ.

Tap to resize

Latest Videos

undefined

Fact Check: ಆನ್‌ಲೈನ್ ಕ್ಲಾಸ್‌ಗಾಗಿ ವಿದ್ಯಾರ್ಥಿಗಳಿಗೆ ಫ್ರೀ ಸ್ಮಾರ್ಟ್‌ಫೋನ್?

ಆದರೆ ನಿಜಕ್ಕೂ ಕೇಂದ್ರ ಸರ್ಕಾರ ವಿದ್ಯುತ್‌ ಶುಲ್ಕ ವಿನಾಯಿತಿ ಯೋಜನೆ ಜಾರಿ ಮಾಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆಯಾಗಿರುವ ಪ್ರೆಸ್‌ ಇನ್ಫಾರ್ಮೆಶನ್‌ ಬ್ಯೂರೋ ಈ ಬಗ್ಗೆ ಸ್ಪಷ್ಟೀಕರಣ ನೀಡಿ, ಕೇಂದ್ರ ಸರ್ಕಾರ ಇಂಥ ಯಾವುದೇ ಯೋಜನೆಗಳನ್ನೂ ಪ್ರಕಟಿಸಿಲ್ಲ. ಇದು ನಕಲಿ ಸುದ್ದಿ ಎಂದಿದೆ.

 

एक वीडियो में यह दावा किया जा रहा है कि बिजली बिल माफी योजना 2020 के तहत 1 सितंबर से पूरे देश मे सबका बिजली बिल माफ होगा। : यह दावा फर्जी है। सरकार द्वारा ऐसी किसी योजना की घोषणा नहीं की गई है pic.twitter.com/sKt7yljiJr

— PIB Fact Check (@PIBFactCheck)

ಅಲ್ಲದೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳಲ್ಲೂ ವರದಿಯಾಗಿಲ್ಲ. ಇದಕ್ಕೂ ಮೊದಲೂ ಸಹ ಕೇಂದ್ರ ಸರ್ಕಾರ ಕೊರೋನಾ ಪ್ರಕರಣಗಳ ನಿರ್ವಹಣೆಗೆ ಮುನ್ಸಿಪಾಲಿಟಿಗೆ 1.5 ಲಕ್ಷ ನೀಡುತ್ತಿದೆ ಎಂಬ ಸಂದೇಶ ವೈರಲ್‌ ಆಗಿತ್ತು. ಅದಾದ ಬಳಿಕ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ ಫೋನ್‌ ನೀಡುತ್ತದೆ ಎಂಬ ಸುಳ್ಳು ಸುದ್ದಿಯೂ ವೈರಲ್‌ ಆಗಿತ್ತು.

- ವೈರಲ್ ಚೆಕ್ 

click me!