Fact Check: ಕೊರೋನಾಗೆ ರೆಡಿಯಾಗಿದೆ ಕಷಾಯ; ಕುಡಿದ್ರೆ ವೈರಸ್‌ ಮಂಗಮಾಯ

By Suvarna NewsFirst Published Jun 29, 2020, 9:24 AM IST
Highlights

ಕೊರೋನಾ ಭಾರತದಲ್ಲಿ ಆತಂಕಕಾರಿಯಾಗಿ ಹಬ್ಬುತ್ತಿದೆ. ಈ ನಡುವೆ ಕೊರೋನಾ ವೈರಸ್‌ ಸೋಂಕು ತಗಲದಂತೆ ತಡೆಯಲು ಮತ್ತು ಕೊರೋನಾ ಸೋಂಕು ಈಗಾಗಲೇ ದೃಢಪಟ್ಟಿದ್ದರೂ ಗುಣಮುಖರಾಗಲು ಸರಳವಾದ ಮನೆಮದ್ದು ‘ಕೊರೋನಾ ಕಷಾಯ’ ಸಾಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜಕ್ಕೂ ಕಷಾಯ ಕುಡಿದರೆ ಗುಣವಾಗುತ್ತಾ? ಇಲ್ಲಿದೆ ಸತ್ಯಾಸತ್ಯತೆ..!

ಕೊರೋನಾ ಭಾರತದಲ್ಲಿ ಆತಂಕಕಾರಿಯಾಗಿ ಹಬ್ಬುತ್ತಿದೆ. ಈ ನಡುವೆ ಕೊರೋನಾ ವೈರಸ್‌ ಸೋಂಕು ತಗಲದಂತೆ ತಡೆಯಲು ಮತ್ತು ಕೊರೋನಾ ಸೋಂಕು ಈಗಾಗಲೇ ದೃಢಪಟ್ಟಿದ್ದರೂ ಗುಣಮುಖರಾಗಲು ಸರಳವಾದ ಮನೆಮದ್ದು ‘ಕೊರೋನಾ ಕಷಾಯ’ ಸಾಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಕಾಫಿ ಕುಡಿದರೆ ಕೊರೋನಾ ಬರಲ್ವಂತೆ..!

ಒಂದು ಲೀಟರ್‌ ನೀರಿಗೆ ಒಂದು ಚಮಚ ಅರಿಶಿನ ಪುಡಿ, 2 ಲವಂಗ, ಒಂದು ನಿಂಬೆಹಣ್ಣು, ಶುಂಠಿ ಹಾಕಿ ಕುದಿಯಲು ಇಡಿ. ನೀರು ಅರ್ಧ ಲೀಟರ್‌ ಆಗುವವರೆಗೂ ಕುದಿಸಿದರೆ ಕೊರೋನಾ ಕಷಾಯ ಸಿದ್ಧ. ಅದನ್ನು ಮೂರು ದಿನ ದಿನಕ್ಕೆ 2 ಬಾರಿ ಸೇವಿಸಿದರೆ ಕೊರೋನಾ ಗುಣಮುಖವಾಗುತ್ತದೆ ಎಂದು ಹೇಳಲಾಗುತ್ತಿದೆ. ಆಯುರ್ವೇದ ವೈದ್ಯರೇ ಈ ಸಲಹೆ ನೀಡಿದ್ದಾರೆ ಎಂದೂ ಹೇಳಲಾಗಿದೆ. ಕೊರೋನಾ ಕಷಾಯ ಮಾಡುವ ವಿಧಾನವನ್ನು ಬರೆದ ಫೋಟೋವನ್ನು ನೆಟ್ಟಿಗಳು ಶೇರ್‌ ಮಾಡುತ್ತಿದ್ದು, ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಈ ಕಷಾಯ ಕುಡಿದರೆ ಕೊರೋನಾ ಗುಣಮುಖವಾಗುತ್ತದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ಏಕೆಂದರೆ ಈ ರೀತಿಯ ಕಷಾಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದ ವೈದ್ಯರು ಹೇಳಿದ್ದಾರೆಯೇ ವಿನಃ ಇದರಿಂದ ಕೊರೋನಾ ಗುಣಮುಖವಾಗುತ್ತದೆಂದು ಎಲ್ಲೂ ಹೇಳಿಲ್ಲ. ಕಷಾಯಕ್ಕೆ ಬಳಸಿದ ವಸ್ತುಗಳಿಂದ ಕೊರೋನಾ ಗುಣಮುಖವಾಗುತ್ತದೆಂದೂ ಯಾವ ಸಂಶೋಧನೆಗಳೂ ಹೇಳಿಲ್ಲ. ಹಾಗಾಗಿ ಈ ಸುದ್ದಿ ಸತ್ಯಕ್ಕೆ ದೂರವಾದುದು.

- ವೈರಲ್ ಚೆಕ್ 

click me!