Fact Check: ಡೆನ್ಮಾರ್ಕಲ್ಲಿ ಮುಸ್ಲಿಮರಿಗೆ ಮತದಾನ ಮಾಡಲು ನಿಷೇಧ?

By Suvarna News  |  First Published Nov 10, 2020, 12:03 PM IST

ಡೆನ್ಮಾರ್ಕ್ನಲ್ಲಿ ಮುಸ್ಲಿಮರಿಗೆ ಮತದಾನ ಮಾಡಲು ನಿಷೇಧ ಹೇರಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.ಅರೇ, ಏನಿದು ಹೊಸ ಕಾನೂನು? ನಿಜನಾ ಇದು? 


ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಕ್ತಾಯವಾಗಿದೆ. ಈ ಮಧ್ಯೆ ಡೆನ್ಮಾರ್ಕ್ನಲ್ಲಿ ಮುಸ್ಲಿಮರಿಗೆ ಮತದಾನ ಮಾಡಲು ನಿಷೇಧ ಹೇರಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಹಿಂದಿಯಲ್ಲಿ ‘ಡೆನ್ಮಾರ್ಕ್ನಲ್ಲಿ ಮುಸ್ಲಿಂ ಸಮುದಾಯ ಮತದಾನ ಮಾಡದಿರುವಂತೆ ಕಾನೂನು ಜಾರಿ ಮಾಡಲಾಗಿದೆ’ ಎಂದು ಬರೆದು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಇದು ಭಾರೀ ವೈರಲ್‌ ಆಗುತ್ತಿದೆ.

Tap to resize

Latest Videos

undefined

 

डेनमार्क में मुस्लिम समुदाय के वोट देने के अधिकार को खत्म करनेवाला कानून पास किया गया ...

— Kajal mishra (@Kajal_mishr)

ಆದರೆ ನಿಜಕ್ಕೂ ಡೆನ್ಮಾರ್ಕ್ನಲ್ಲಿ ಮಸ್ಲಿಮರ ಮತದಾನದ ಹಕ್ಕನ್ನು ಕಸಿಯಲಾಯಿತೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ.ಈ ಕುರಿತು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮುಖ್ಯವಾಹಿನಿ ಮಾಧ್ಯಮಗಳ ವರದಿಯಾಗಲೀ ಅಥವಾ ಬೇರಾವುದೇ ವಿಶ್ವಾಸಾರ್ಹ ಮೂಲಗಳಿಂದಾಗಿ ಈ ಕುರಿತ ಮಾಹಿತಿ ಲಭ್ಯವಾಗಿಲ್ಲ.

Fact Check : ತೇಜಸ್ವಿ ಯಾದವ್‌ಗೆ ಜಗತ್ತಿನ ಅತಿ ಕಿರಿಯ ರಾಜಕಾರಣಿ ಪ್ರಶಸ್ತಿ?

ಬಳಿಕ ಡೆನ್ಮಾರ್ಕ್ ಚುನಾವಣಾ ಕಾನೂನಿನ ಕುರಿತು ಪರಿಶೀಲಿಸಿದಾಗ ಅಲ್ಲಿ 18 ವರ್ಷ ಮೇಲ್ಪಟ್ಟಡೆನ್ಮಾರ್ಕ್ನ ಪ್ರಜೆಗಳಿಗೆಲ್ಲರಿಗೂ ಮತದಾನದ ಅವಕಾಶವಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ವೈರಲ್‌ ಸುದ್ದಿ ಸುಳ್ಳು. ಕೋಮು ದ್ವೇಷ ಹರಡುವ ಉದ್ದೇಶದಿಂದ ಈ ರೀತಿ ಸುದ್ದಿಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಬಿತ್ತರಿಸಲಾಗುತ್ತಿದೆ.

- ವೈರಲ್ ಚೆಕ್ 

click me!