Fact Check: 50-60 ದಿನ ಸ್ಯಾನಿಟೈಸರ್‌ ಬಳಸಿದ್ರೆ ಕ್ಯಾನ್ಸರ್‌!

Published : Jun 03, 2020, 09:25 AM ISTUpdated : Jun 03, 2020, 10:02 AM IST
Fact Check: 50-60 ದಿನ ಸ್ಯಾನಿಟೈಸರ್‌ ಬಳಸಿದ್ರೆ ಕ್ಯಾನ್ಸರ್‌!

ಸಾರಾಂಶ

50-60 ದಿನ ನಿರಂತರವಾಗಿ ಸ್ಯಾನಿಟೈಸರ್‌ ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದರಿಂದ ಚರ್ಮರೋಗ ಅಥವಾ ಕ್ಯಾನ್ಸರ್‌ ಉಂಟಾಗಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಕೊರೋನಾ ವೈರಸ್‌ ಜನವರಿಯ ಆರಂಭದಲ್ಲಿ ಚೀನಾದಲ್ಲಿ ರೌದ್ರ ನರ್ತನ ಆರಂಭಿಸಿದಾದಾಗಿನಿಂದ ಕೊರೋನಾದಿಂದ ರಕ್ಷಣೆಗೆಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್‌ ಮತ್ತು ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆಗೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಸಿಕೆಯೇ ಇಲ್ಲದ ಕೊರೋನಾ ಸೋಂಕಿನಿಂದ ಮುಕ್ತಿ ಪಡೆಯಲು ವಿಶ್ವದಾದ್ಯಂತ ಜನರು ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಹೆಚ್ಚೆಚ್ಚು ಬಳಸುತ್ತಿದ್ದಾರೆ.

ಆದರೆ 50-60 ದಿನ ನಿರಂತರವಾಗಿ ಸ್ಯಾನಿಟೈಸರ್‌ ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದರಿಂದ ಚರ್ಮರೋಗ ಅಥವಾ ಕ್ಯಾನ್ಸರ್‌ ಉಂಟಾಗಬಹುದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಿನಪತ್ರಿಕೆಯೊಂದರ ತುಣುಕನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಈ ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿ ಜನರಲ್ಲಿ ಆತಂಕಕ್ಕೂ ಕಾರಣವಾಗುತ್ತಿದೆ.

Fact Check| ಡಾ. ದೇವಿ ಶೆಟ್ಟಿ ನೀಡಿದ 22 ಸಲಹೆಗಳು!

ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆಯಿಂದ ಕ್ಯಾನ್ಸರ್‌ ಅಥವಾ ಚರ್ಮರೋಗ ಉಂಟಾಗಬಹುದು ಎಂಬ ಸುದ್ದಿ ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ. 

 

ಜೊತೆಗೆ ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆಯಿಂದ ಮಾನವನ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ. ಕೊರೋನಾ ವೈರಸ್‌ ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ 70% ಆಲ್ಕೋಹಾಲ್‌ ಅಂಶ ಇರುವ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಲು ಆರೋಗ್ಯ ಸಂಸ್ಥೆಗಳೇ ಶಿಫಾರಸ್ಸು ಮಾಡಿವೆ ಎಂದು ಹೇಳಿದೆ. 

- ವೈರಲ್ ಚೆಕ್ 

PREV
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?