Fact Check: ಭಗತ್‌ ಸಿಂಗ್‌ರನ್ನು ನಡುರಸ್ತೆಯಲ್ಲಿ ಕಟ್ಟಿ ಹೊಡೆದರಾ ಪೊಲೀಸ್ ಅಧಿಕಾರಿ?

By Suvarna News  |  First Published Aug 15, 2020, 11:44 AM IST

ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನದಿಂದ ಬ್ರಿಟಿಷ್‌ ಪೊಲೀಸ್‌ ಅಧಿಕಾರಿಯೊಬ್ಬ ನಡು ಬೀದಿಯಲ್ಲಿ ವ್ಯಕ್ತಿಯೊಬ್ಬರನ್ನು ಕಟ್ಟಿಹಾಕಿ ಥಳಿಸುತ್ತಿರುವ ಫೋಟೋ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಒಳಗೊಂಡಿರುವ ದಿನಪತ್ರಿಕೆಯೊಂದರ ತುಣುಕನ್ನು ಪೋಸ್ಟ್‌ ಮಾಡಿ ನೆಟ್ಟಿಗರು, ‘ ಇದು ಭಗತ್‌ ಸಿಂಗ್‌ ಅವರ ಅಪರೂಪದ ಫೋಟೋ. ನೆಹರು ಮತ್ತು ಗಾಂಧಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆಂದು ನಮಗೆಲ್ಲ ಬೋಧಿಸಲಾಗಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದೀಗ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 


ಬೆಂಗಳೂರು (ಆ. 15): ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನದಿಂದ ಬ್ರಿಟಿಷ್‌ ಪೊಲೀಸ್‌ ಅಧಿಕಾರಿಯೊಬ್ಬ ನಡು ಬೀದಿಯಲ್ಲಿ ವ್ಯಕ್ತಿಯೊಬ್ಬರನ್ನು ಕಟ್ಟಿಹಾಕಿ ಥಳಿಸುತ್ತಿರುವ ಫೋಟೋ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಒಳಗೊಂಡಿರುವ ದಿನಪತ್ರಿಕೆಯೊಂದರ ತುಣುಕನ್ನು ಪೋಸ್ಟ್‌ ಮಾಡಿ ನೆಟ್ಟಿಗರು, ‘ ಇದು ಭಗತ್‌ ಸಿಂಗ್‌ ಅವರ ಅಪರೂಪದ ಫೋಟೋ. ನೆಹರು ಮತ್ತು ಗಾಂಧಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆಂದು ನಮಗೆಲ್ಲ ಬೋಧಿಸಲಾಗಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದೀಗ ವೈರಲ್‌ ಆಗುತ್ತಿದೆ.

 

Tap to resize

Latest Videos

undefined

ಆದರೆ ಈ ಸುದ್ದಿ ನಿಜವೇ ಎಂದು  ಪರಿಶೀಲಿಸಿದಾಗ ವೈರಲ್‌ ಫೋಟೋ 1919 ರಲ್ಲಿ ಇಂದಿನ ಪಾಕಿಸ್ತಾನದ ಕಸೂರ್‌ ರೈಲ್ವೆ ನಿಲ್ದಾಣದಲ್ಲಿ ತೆಗೆದಿದ್ದು. ಆಗ ಭಗತ್‌ ಸಿಂಗ್‌ ಅವರಿಗೆ ಕೇವಲ 12 ವರ್ಷ; ಲಾಹೋರ್‌ನ ಡಿ.ಎ.ವಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಲ್ಲದೆ 1920ರ ಒಳಗಾಗಿ ಭಗತ್‌ ಸಿಂಗ್‌ ಅವರನ್ನು ಬ್ರಿಟಿಷರು ಬಂಧಿಸಿರಲಿಲ್ಲ ಎಂದು ತಿಳಿದುಬಂದಿದೆ.

fact Check: ಇದು ಅದ್ಧೂರಿ ಅಯೋಧ್ಯೆಯ ದೃಶ್ಯವೇ?

ಬೆಂಜಮಿನ್‌ ಹಾರ್ನಿಮನ್‌ ಅವರ ‘ಅಮೃತಸರ ಆ್ಯಂಡ್‌ ಅವರ್‌ ಡ್ಯುಟಿ ಟು ಇಂಡಿಯಾ’ ಪುಸ್ತಕದಲ್ಲಿ ಈ ಚಿತ್ರವಿದ್ದು, ಅದರಲ್ಲಿ ‘ಪಾಕಿಸ್ತಾನದ ಕಸೂರ್‌ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಥಳಿಸುತ್ತಿರುವ ದೃಶ್ಯ’ ಎಂದಿದೆ. ಆದರೆ ಎಲ್ಲೂ ಭಗತ್‌ ಸಿಂಗ್‌ ಅವರ ಹೆಸರಿಲ್ಲ.

ಅಲ್ಲದೆ ಭಗತ್‌ ಸಿಂಗ್‌ ಅವರ ‘ದ ಜೈಲ್‌ ನೋಟ್‌ಬುಕ್‌ ಆ್ಯಂಡ್‌ ಅದರ್‌ ರೈಟಿಂಗ್ಸ್‌’ ಪ್ರಕಾರ, 1919ರಲ್ಲಿ ಸಿಂಗ್‌ ವರಿಗೆ ಕೇವಲ 12 ವರ್ಷ. ಲಾಹೋರ್‌ನ ಡಿಎಎಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಲ್ಲದೆ ಭಗತ್‌ ಸಿಂಗ್‌ ಸಕ್ರಿಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು 1920ರ ನಂತರ. ಹಾಗಾಗಿ ಈ ಚಿತ್ರದಲ್ಲಿರುವ ವ್ಯಕ್ತಿ ಭಗತ್‌ ಸಿಂಗ್‌ ಅಲ್ಲ ಎಂಬುದು ಸ್ಪಷ್ಟ.

- ವೈರಲ್ ಚೆಕ್ 

click me!