ವೈದ್ಯರು ಮತ್ತು ವಕೀಲರಂತೆ ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಶಿಕ್ಷಕ ಗುರುತಿನ ಲೋಗೋವನ್ನು ಹಾಕಿಕೊಳ್ಳಬಹುದು. ಈ ಹೊಸ ಲೋಗೋಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
ವೈದ್ಯರು ಮತ್ತು ವಕೀಲರಂತೆ ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಶಿಕ್ಷಕ ಗುರುತಿನ ಲೋಗೋವನ್ನು ಹಾಕಿಕೊಳ್ಳಬಹುದು. ಈ ಹೊಸ ಲೋಗೋಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಲೋಗೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ, ‘ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು. ಇನ್ನುಮುಂದೆ ಶಿಕ್ಷಕರೂ ಸಹ ತಮ್ಮ ಕಾರಿನ ಮೇಲೆ ಈ ಲೋಗೋ ಹಾಕಿಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.
Congratulations to all teachers, find this new approved Logo for teachers like ant other logos of Doctors or Lawyers. Ptoudly you can stick this logo on your vehicles with a caption of a nation builder. Be proud to be a teacher as usual. pic.twitter.com/1rg4oDiBRV
— Deepak Khanduri (@DeepakK91055048)undefined
ಆದರೆ ನಿಜಕ್ಕೂ ಸುಪ್ರೀಂಕೋರ್ಟ್ ಇಂಥದ್ದೊಂದು ಅವಕಾಶ ನೀಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ ಸರ್ವೋಚ್ಚ ನ್ಯಾಯಾಲಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿದಾಗ ಅಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಪತ್ತೆಯಾಗಿದೆ. ಅಲ್ಲದೆ ಈ ಲೋಗೋ ಕಳೆದ ಒಂದೆರಡು ವರ್ಷಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಲೋಗೋವನ್ನು 2017 ರಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಲೂದಿಯಾನಾದ ಸರ್ಕಾರಿ ಶಾಲೆಯ ಪ್ರಾಂಶುಪಾಲಕ ರಾಜೇಶ್ ಖನ್ನಾ ಅಭಿವೃದ್ಧಿಪಡಿಸಿದ್ದರು. ಸ್ವತಃ ರಾಜೇಶ್ ಖನ್ನಾ ಅವರು ಫೇಸ್‌ಬುಕ್‌ನಲ್ಲಿ ಇದನ್ನು ಅಪ್‌ಲೋಡ್ ಮಾಡಿದ್ದಾರೆ. ಅದರ ಹೊರತಾಗಿ ಆದರೆ ಈ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ನಿರ್ದೇಶನ ಅಥವಾ ಆದೇಶ ನೀಡಿಲ್ಲ. ಹಾಗಾಗಿ ಶಿಕ್ಷಕರೂ ತಮ್ಮ ಕಾರಿನ ಮೇಲೆ ಲೋಗೊ ಹಾಕಿಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿಸಿದೆ ಎಂಬ ಸುದ್ದಿ ಸುಳ್ಳು.
- ವೈರಲ್ ಚೆಕ್