Fact Check: ಜಾಗ್ರತೆ! ವಾಟ್ಸಾಪ್‌ ಮೇಲೆ ಸರ್ಕಾರ ನಿಗಾ ಇಡುತ್ತಂತೆ!

By Kannadaprabha NewsFirst Published Apr 8, 2020, 9:18 AM IST
Highlights

ಇನ್ನು ಮುಂದೆ ಭಾರತ ಸರ್ಕಾರವು ಎಲ್ಲಾ ಪ್ರಜೆಗಳ ವಾಟ್ಸ್‌ಆ್ಯಪ್‌ ಮತ್ತು ಟೆಲಿಫೋನ್‌ ಕರೆಗಳ ಮೇಲೆ ನಿಗಾ ವಹಿಸಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

ಇನ್ನು ಮುಂದೆ ಭಾರತ ಸರ್ಕಾರವು ಎಲ್ಲಾ ಪ್ರಜೆಗಳ ವಾಟ್ಸ್‌ಆ್ಯಪ್‌ ಮತ್ತು ಟೆಲಿಫೋನ್‌ ಕರೆಗಳ ಮೇಲೆ ನಿಗಾ ವಹಿಸಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಪೂರ್ಣ ವೈರಲ್‌ ಸಂದೇಶ ಹೀಗಿದೆ, ‘ನಾಳೆಯಿಂದ ಎಲ್ಲಾ ಕರೆಗಳು ರೆಕಾರ್ಡ್‌ ಆಗುತ್ತವೆ. ವಾಟ್ಸ್‌ಆ್ಯಪ್‌, ಟ್ವೀಟರ್‌, ಫೇಸ್‌ಬುಕ್‌ ಮೇಲೆ ಕಾಣ್ಗಾವಲಿಡಲಾಗುತ್ತದೆ. ನಿಮ್ಮ ಫೋನ್‌ ಸಚಿವಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಆದ್ದರಿಂದ ಸರ್ಕಾರಕ್ಕೆ ಸಂಬಂಧಪಟ್ಟಯಾವುದೇ ಪೋಸ್ಟ್‌, ವಿಡಿಯೋಗಳನ್ನು ಶೇರ್‌ ಮಾಡದಂತೆ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ತಿಳಿಸಿ.

Fact Check: ಮೇ 4 ರ ವರೆಗೂ ಮುಂದುವರೆಯುತ್ತಾ ಲಾಕ್‌ಡೌನ್‌?

ರಾಜಕೀಯ ಮತ್ತು ಧರ್ಮಕ್ಕೆ ಸಂಬಂಧಿಸದ ಪೋಸ್ಟ್‌ಗಳನ್ನು ಬರೆಯುವುದು ಮತ್ತು ಫಾರ್ವರ್ಡ್‌ ಮಾಡುವುದು ಅಪರಾಧ. ದಯವಿಟ್ಟು ಈ ಮಾಹಿತಿಯನ್ನು ಶೇರ್‌ ಮಾಡಿ’ ಎಂದಿದೆ. ಇದೀಗ ಸೋಷಿಯಲ್‌ ಮೀಡಿಯಾಗಳಲ್ಲಿ ಹಿಂದಿ, ಇಂಗ್ಲಿಷ್‌ ಮತ್ತು ಗುಜರಾತಿ ಭಾಷೆಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ ಈ ಸುದ್ದಿಯನ್ನು ಅಲ್ಲಗಳೆದು ‘ಸರ್ಕಾರ ಇಂಥ ಯಾವುದೇ ಕಾನೂನನ್ನು ಜಾರಿ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೆಸೆಂಜರ್‌ ಸಂವಹನವನ್ನು ಬೇರೆಯವರು ಓದಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಎಲ್ಲಾ ಮೊಬೈಲ್‌ ಕರೆ ಮತ್ತು ಸಂವಹನಗಳ ಮೇಲೆ ನಿಗಾ ವಹಿಸಲಿದೆ ಎಂಬ ಸಂದೇಶ ಸುಳ್ಳು. ಇದೇ ರೀತಿಯ ಸಂದೇಶ ಕಳೆದ ವರ್ಷವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

- ವೈರಲ್ ಚೆಕ್ 

click me!