Fact Check| ಬಿಜೆಪಿ ಆಡಳಿತ ಮೂದಲಿಸುವ ಈ ಕಾರ್ಟೂನ್ ರಚಿಸಿದ್ದು ಯಾರು?

By Suvarna News  |  First Published May 8, 2021, 5:35 PM IST

ಬಿಜೆಪಿ ಆಡಳಿತ ಮೂದಲಿಸಿ ಕಾರ್ಟೂನ್ ಬರೆದರಾ ಬೆನ್‌ ಗ್ಯಾರಿಸನ್| ಕಾರ್ಟೂನ್ ಬಗ್ಗೆ ಸ್ಪಷ್ಟನೆ ನೀಡಿದ ಗ್ಯಾರಿಸನ್| ಫ್ಯಾಕ್ಟ್‌ ಚೆಕ್‌ನಲ್ಲಿ ಬಯಲಾಯ್ತು ವಾಸ್ತವ


ಬೆಂಗಳೂರು(ಮೇ.08): ಹಸುವನ್ನು ಬಿಜೆಪಿಗೆ ಹೋಲಿಸಿ ಭಾರತದ ನಕಾಶೆ ಇರುವ ಎಲೆಯನ್ನು ತಿನ್ನುವಂತಹ  ಕಾರ್ಟೂನ್ ಸದ್ಯ ಭಾರಿ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಶೇರ್ ಆಗುತ್ತಿದೆ. ಇಷ್ಟೇ ಅಲ್ಲದೇ ಈ ಹಸು ನೀಡುವ ಹಾಲು ಅಂಬಾನಿ ಹಾಗೂ ಅದಾನಿ ಪಡೆದುಕೊಳ್ಳುತ್ತಿದ್ದರೆ,ಹಸುವಿನ ಸಗಣಿ ಬಿಜೆಪಿ ಬೆಂಬಲಿಗರಿಗೆ ಸಿಗುತ್ತಿದೆ. ಇದನ್ನು ಅಮೆರಿಕದ ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಬೆನ್ ಗ್ಯಾರಿಸನ್, ಬಿಜೆಪಿಯ ಕಳೆದ ಏಳು ವರ್ಷದ ಆಡಳಿತವನ್ನು ಮುಂದಿಟ್ಟುಕೊಂಡು ಬರೆದಿದ್ದಾರೆ ಎನ್ನಲಾಗಿತ್ತು. ಆದರೆ ಇದು ನಿಜಾನಾ ಎಂದು ಪರಿಶೀಲಿಸಿದಾಗ ಕಂಡು ಬಂದ ಸತ್ಯವೇ ಬೇರೆಯಾಗಿದೆ. 

Tap to resize

Latest Videos

undefined

ಬೆನ್ ಗ್ಯಾರಿಸನ್ ಕಾರ್ಟೂನ್‌ಗಳನ್ನು ಅಧಿಕೃತವಾಗಿ ಪ್ರಕಟಿಸುವ  grrrgraphics.com ವೆಬ್‌ಸೈಟಿನಲ್ಲಿ ಪರಿಶೀಲಿಸಿದಾಗ, ಈ ಮೇಲಿನ ವ್ಯಂಗ್ಯಚಿತ್ರ ಲಭ್ಯವಾಗಿಲ್ಲ. ಇಷ್ಟೇ ಅಲ್ಲದೇ 2017 ರಲ್ಲೇ ತಾಣ ಭಾರತದ ರಾಜಕೀಯದ ಬಗ್ಗೆ ಯಾವುದೇ ಕಾರ್ಟೂನ್ ಪ್ರಕಟಿಸಿಲ್ಲ. ತಮ್ಮ ಸಿಗ್ನೀಚರ್ ಜೊತೆ ವೈರಲ್ ಆಗುತ್ತಿರುವ ಈ ಕಾರ್ಟೂನ್‌ಗಳು ನಕಲಿ ಎಂದು ಖುದ್ದು ಸ್ಪಷ್ಟನೆ ನೀಡಿದ್ದರು. 

ಇನ್ನು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದೇ ಕಾರ್ಟೂನ್ ಬಿಜೆಪಿ ಹಾಗೂ ಕಾಂಗ್ರೆಸ್‌ನ ವಿಭಿನ್ನ ವರ್ಶನ್‌ನಲ್ಲಿ ಕಾಣಿಸಿಕೊಂಡಿದೆ. ಕೆಲ ಫೋಟೋಗಳು ಆರು ವರ್ಷ ಹಳೆಯದ್ದಾಗಿದೆ. 

ಈ ಬಗ್ಗೆ ಫ್ಯಾಕ್ಟ್  ಚೆಕ್ ನಡೆಸಿದ ವೇಳೆ ಫೇಸ್‌ಬುಕ್ ಬಳಕೆದಾರನೊಬ್ಬ ಇದನ್ನು ತಾನು ರಚಿಸಿದ್ದಾಗಿ ಹೇಳಿಕೊಂಡಿದ್ದಾನೆಂದು ವೆಬ್‌ಸೈಟ್‌ ಸ್ಪಷ್ಟನೆ ನೀಡಿದೆ. ಒಟ್ಟಾರೆಯಾಗಿ ಇದು ಬಡನ್‌ ಗ್ಯಾರಿಸನ್ ಅವರಿಂದ ರಚಿತವಾದ ಕಾರ್ಟೂನ್ ಅಲ್ಲ. 

click me!