ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಯಶಸ್ವಿಯಾಗಿ ಕುಂಭಮೇಳವನ್ನು ಆಯೋಜಿಸಿರುವ ಬಗ್ಗೆ ಉತ್ತರಾಖಂಡ ಸರ್ಕಾರವನ್ನು ಹೊಗಳಿ ಪತ್ರ ಬರೆದಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತದಲ್ಲಿ ಕೊರೋನಾ 2ನೇ ಅಲೆಯ ಆರ್ಭಟಕ್ಕೆ ಇಡೀ ದೇಶವೇ ತತ್ತರಿಸುತ್ತಿದೆ. ಈ ನಡುವೆ ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿದೆ. ಸಾವಿರಾರು ಜನರನ್ನು ಸೇರಿಸಿ ಕುಂಭಮೇಳ ಆಯೋಜಿಸುತ್ತಿರುವ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಆದರೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಯಶಸ್ವಿಯಾಗಿ ಕುಂಭಮೇಳವನ್ನು ಆಯೋಜಿಸಿರುವ ಬಗ್ಗೆ ಉತ್ತರಾಖಂಡ ಸರ್ಕಾರವನ್ನು ಹೊಗಳಿ ಪತ್ರ ಬರೆದಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಜಿತ್ ದೋವಲ್ ಅವರ ಸಹಿ ಇದೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
undefined
ಆಗಿದೆ ನಿಜಕ್ಕೂ ದೋವಲ್ ಕುಂಭಮೇಳವನ್ನು ಪ್ರಶಂಸಿಸಿ ಉತ್ತರಾಖಂಡ ಮುಖ್ಯ ಕಾರ‍್ಯದರ್ಶಿ ಓಂ ಪ್ರಕಾಶ್ ಅವರಿಗೆ ಪತ್ರ ಬರೆದಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಸರ್ಕಾರ ಸಹ ಇದು ನಕಲಿ ಪತ್ರ ಎಂದು ಸ್ಪಷ್ಟಪಡಿಸಿದೆ. ಉತ್ತರಾಖಂಡ ಮುಖ್ಯಕಾರ‍್ಯದರ್ಶಿ ಸಹ ದೋವಲ್ ಅವರಿಂದ ಕುಂಭಮೇಳ ಕುರಿತಂತೆ ಯಾವುದೇ ಪತ್ರ ಸ್ವೀಕರಿಸಿಲ್ಲ ಎಂದು ಖಚಿತಪಡಿಸಿದ್ದಾರೆ.
ಹಾಗೆಯೇ ವೈರಲ್ ಪತ್ರದಲ್ಲಿ ಸಾಕಷ್ಟುವ್ಯಾಕರಣ ದೋಷಗಳೂ ಇವೆ. ಗೂಗಲ್‌ನಲ್ಲಿ ಪರಿಶೀಲಿಸಿದಾಗ 2019ರಲ್ಲಿ ಉತ್ತರ ಪ್ರದೇಶ ಮುಖ್ಯಕಾರ‍್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಅವರಿಗೆ ದೋವಲ್ ಅವರು ಪತ್ರ ಬರೆದಿದ್ದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದ್ದು ಲಭ್ಯವಾಗಿದೆ. ಹಾಗಾಗಿ ಅದೇ ಪತ್ರವನ್ನು ಈಗ ಬರೆದಿದ್ದೆಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
NSA Ajit Doval congratulates Govt for ensuring peace and harmony post Ayodhya verdict pic.twitter.com/3IvyOSE39p
— Aman Sharma (@AmanKayamHai_)- ವೈರಲ್ ಚೆಕ್