ಶ್ರೀ ವಿಷ್ಣು ದಶಾವತಾರ: ಹಿರಣ್ಯ ಕಶ್ಯಪನಾಗಿ ನವೀನ್!

By Web Desk  |  First Published Jan 8, 2019, 1:23 PM IST

ಮನೋರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುವ ಪುರಾಣ ಕಥೆಯಾಧಾರಿತ ಧಾರವಾಹಿಗಳು ಎಲ್ಲರ ಮನೆ ಮಾತಾಗಿವೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಶ್ರೀ ದಶಾವತಾರ' ಹೆಚ್ಚೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತಿದೆ.


ಲಕ್ಷ್ಮೀ ದೇವಿಯೊಂದಿಗೆ ವಿಷ್ಣುವಿನ ಪ್ರೇಮ ಪ್ರಸಂಗದ ಮೂಲಕ ಆರಂಭವಾದ ಧಾರವಾಹಿ 'ಶ್ರೀ ವಿಷ್ಣು ಅವತಾರ'ಗಳಾದ ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರವನ್ನು ಮುಗಿಸಿದೆ. ಈಗ ನರಸಿಂಹಾವತಾರ ಆರಂಭವಾಗಿದೆ.

ನರಸಿಂಹಾವತಾರ ಎಂದಾಕ್ಷಣ ಜ್ಞಾಪಕಕ್ಕೆ ಬರುವುದು ಹಿರಣ್ಯ ಕಶ್ಯಪ ಹಾಗೂ ಆತನ ರೌದ್ರತನ. ಧಾರವಾಹಿಯಲ್ಲಿ ಈ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಕಿರುತೆರೆಯ ನಿರ್ದೇಶಕ ಹಾಗೂ ನಟ ನವೀನ್ ಕೃಷ್ಣ. ಇನ್ನು ಪ್ರಹ್ಲಾದನ ಪಾತ್ರದಲ್ಲಿ ಡ್ರಾಮ ಜ್ಯೂನಿಯರ್ಸ್‌ ಪ್ರತಿಭೆ ಚಿಂತೆ ಇಲ್ಲದ ಅಚಿಂತ್ಯ.

Latest Videos

ಈ ಪಾತ್ರಕ್ಕ ಹೆಚ್ಚು ಪ್ರಮುಖ್ಯತೆ ಇದ್ದು, ನವೀನ್ ತಮ್ಮ ದೇಹ, ಭಾಷೆ ಹಾಗೂ ಉಗ್ರ ನೋಟಕ್ಕೆ ತಯಾರಾಗುತ್ತಿದ್ದಾರೆ. ಇನ್ನು ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪತ್ತೇದಾರಿ ಪ್ರತಿಭಾ' ಧಾರವಾಹಿಯನ್ನು ನಿರ್ದೇಶಿಸುತ್ತಿದ್ದರು ನವೀನ್.

ಈ ಅವತಾರ ಇಂದಿನಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

click me!