
ಬೆಮಗಳೂರು[ಡಿ.30]: ಬಿಗ್ ಬಾಸ್ ಸೀಜನ್ 6ರಲ್ಲಿ ತನ್ನ ವಿಭಿನ್ನ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಹಾಗೂ ಪ್ರೇಕ್ಷಕರ ಗಮನ ಸೆಳೆದಿರುವ ಆ್ಯಂಡಿಗೆ ಸಂಕಷ್ಟವೊಂದು ಎದುರಾಗಿದೆ. ಬಿಗ್ ಮನೆಯಲ್ಲಿ ಮಾಡಿದ ಅವಾಂತರವೊಂದರಿಂದ ಆ್ಯಂಡ್ರೂ ಜೈಪಾಲ್ ವಿರುದ್ಧ ಬಿಡದಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಷ್ಟಕ್ಕೂ ಆ್ಯಂಡಿ ಮಾಡಿದ ಎಡವಟ್ಟೇನು? ಇಲ್ಲಿದೆ ವಿವರ
ಡಿ. 26 ರಂದು ಪ್ರಸಾರವಾದ ಸಂಚಿಕೆಯಲ್ಲಿ ಆ್ಯಂಡಿ ಇತರ ಸ್ಪರ್ಧಿಗಳ ಮೇಲೆ ಹಾನಿಕಾರಕ ಪರ್ಪ್ಯೂಮ್ ಸ್ಪ್ರೇ ಮಾಡಿದ್ದರು. ಯಾವುದೇ ಸುಗಂಧ ದ್ರವ್ಯವನ್ನು ಮಿತಿಗಿಂತಲೂ ಹೆಚ್ಚು ಬಳಸಿದರೆ ಅದರಿಂದ ಕಣ್ಣು, ಶ್ವಾಸಕೋಶಗಳಿಗೆ ತೊಂದರೆಯಾಗುತ್ತದೆ. ಟಾಸ್ಕ್ ನಲ್ಲಿ ಆ್ಯಂಡಿ ತಾನು ಗೆಲ್ಲಲೇಬೇಕೆಂಬ ಉದ್ದೇಶದಿಂದ ಇತರೆ ಸ್ಪರ್ಧಿಗಳ ಕಣ್ಣಿಗೆ ಸ್ಪ್ರೇ ಮಾಡಿ ಇತರ ಸ್ಪರ್ಧಿಗಳಿಗೆ ಚಿತ್ರಹಿಂಸೆ ನೀಡಿದ್ದಾರೆ. ಹೀಗಾಗಿ ಕೂಡಲೇ ಆ್ಯಂಡಿಯನ್ನ ಹೊರಗೆ ತಂದು ಕ್ರಮ ಜರುಗಿಸಬೇಕು ಎಂದು ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಎಂಬ ಸಂಸ್ಥೆಯ ಪರವಾಗಿ ಆಡುಗೋಡಿಯ ರೋಲ್ಯಾಂಡ್ ರೋಲ್ಸ್ ಎಂಬುವವರು ಬಿಡದಿ ಠಾಣೆಗೆ ದೂರು ನೀಡಿದ್ದಾರೆ.
ಆ್ಯಂಡಿ ಹೀಗೆ ಮನಬಂದಂತೆ ನಡೆದುಕೊಳ್ಳುತ್ತಿದ್ದ ವೇಳೆ ಆತನನ್ನು ತಡೆಯದ ಇತರ ಸ್ಪರ್ಧಿಗಳು, ತಂತ್ರಜ್ಞರು ಮತ್ತು ಆಯೋಜಕರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.