
ಚಿತ್ರವೊಂದರ ಬಿಡುಗಡೆಯ ಹೊತ್ತಿನಲ್ಲಿ ರಿಮೇಕ್ ಹಾಗೂ ಸ್ವಮೇಕ್ ಚರ್ಚೆ ನಡೆಯುತ್ತಿದೆ. ಕೆಲವರು ಇದನ್ನು ರಿಮೇಕ್ ಅಂದ್ರೆ, ಚಿತ್ರತಂಡ ಮಾತ್ರ ಸ್ವಮೇಕ್ ಅನ್ನುತ್ತಿದೆ. ಇಷ್ಟಕ್ಕೂ ಹೀಗೆ ರಿಮೇಕ್ ಮತ್ತು ಸ್ವಮೇಕ್ ಹಗ್ಗವನ್ನು ಕೊರಳಿಗೆ ಸುತ್ತಿಕೊಂಡಿರುವುದು ಯಶ್ ನಟನೆಯ ‘ಸಂತು ಸ್ಟೈಟ್ ಪಾರ್ವಡ್’ ಸಿನಿಮಾ. ಕನ್ನಡ- ಇಂಗ್ಲಿಷ್ ಮಿಶ್ರಣದ ಈ ಹೆಸರಿನ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಕೆ ಮಂಜು ನಿರ್ಮಾಣದ ಈ ಚಿತ್ರದಲ್ಲಿ ಯಶ್ ಜತೆಗೆ ನಾಯಕಿಯಾಗಿ ರಾಕಾ ಪಂಡಿತ್ ನಟಿಸಿದ್ದಾರೆ. ಇನ್ನೂ ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ಮಗೇಶ್ ಕುಮಾರ್. ಈಗಾಗಲೇ ತಮಿಳಿನಲ್ಲಿ ಬಂದಿರುವ ಸಿಂಬು ನಟನೆಯ ‘ವಾಲು’ ಚಿತ್ರದ ರಿಮೇಕ್ ಎನ್ನುವ ಮಾತುಗಳು ಇವೆ. ಹಾಗೆ ನೋಡಿದರೆ ಇದೊಂದು ರಿಮೇಕ್ ಸಿನಿಮಾ ಎಂಬುದು ಮೊದಲಿನಿಂದಲೂ ಅನುಮಾನ ಇದ್ದರೂ ಅದು ಎಲ್ಲೂ ಸುದ್ದಿಯಾಗಿರಲಿಲ್ಲ.
ಆದರೆ, ಈಗ್ಯಾಕೆ ಈ ಸುದ್ದಿ ಎಂದರೆ ಅದಕ್ಕೆ ಕಾರಣ ನಿರ್ಮಾಪಕ ಕೆ ಮಂಜು. ಯಾಕೆಂದರೆ ‘ವಾಲು’ ಚಿತ್ರದ ರಿಮೇಕ್ ರೈಟ್ಸ್ ಇರುವುದು ಕೆ ಮಂಜು ಅವರಲ್ಲಿಯೇ. ಈ ಚಿತ್ರದಲ್ಲಿ ತಮಿಳು ಹಾಗೂ ತೆಲುಗಿನ ಕಲಾವಿದರು ಬೇರೆ ನಟಿಸಿದ್ದಾರೆ. ಅಲ್ಲದೆ ‘ವಾಲು’ ಚಿತ್ರದಲ್ಲಿ ವಿಲನ್ ಆಗಿದ್ದು ಕನ್ನಡದ ನಟ ಅದಿತ್ಯ. ಅವರನ್ನೇ ಈ ‘ಸಂತು ಸ್ಟೈಟ್ ಪಾರ್ವಡ್’ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ, ಸಿನಿಮಾ ಮುಹೂರ್ತ ಮುಗಿದ ಮೇಲೆ ಅದಿತ್ಯ ವಿಲನ್ ರೋಲ್‌ಗೆ ನೋ ಎಂದುಬಿಟ್ಟರು. ಆ ಜಾಗದಲ್ಲಿ ತೆಲುಗು ನಟ ಶ್ಯಾಮ್ ನಟಿಸಿದ್ದಾರೆ. ಇದೇ ಯಶ್ ಸಿನಿಮಾ ರಿಮೇಕ್ ಎನ್ನುವ ಗುಮಾನಿಗೆ ಕಾರಣವಾಗಿದೆ. ಈ ಎಲ್ಲ ಅನುಮಾನಗಳಿಗೆ ಸಿನಿಮಾ ನೋಡಿದ ಮೇಲೆ ಉತ್ತರ ದೊರೆಯಲಿದೆ. ಹಾಗೆ ನೋಡಿದರೆ ಯಶ್‌ಗೆ ಆರಂಭದಲ್ಲಿ ಗೆಲುವು ಕೊಟ್ಟ ‘ಕಿರಾತಕ’ ಹಾಗೂ ‘ರಾಜಾಹುಲಿ’ ಚಿತ್ರಗಳು ತಮಿಳಿನಿಂದ ಹಾರಿ ಬಂದ ಕತೆಗಳೇ. ಅದೇ ಸೆಂಟಿಮೆಂಟ್ ‘ಸಂತು ಸ್ಟೈಟ್ ಪಾರ್ವಡ್’ ಚಿತ್ರದಲ್ಲೂ ಮುಂದುವರೆದಿದೆಯೇ?
Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.