ಇಂದು ರಾತ್ರಿ 8.30ಕ್ಕೆ ಭಾರತ ಹಾಗೂ ವಿಶ್ವಾದ್ಯಂತ ಟಾಕ್ಸಿಕ್ ಹಾಲಿವುಡ್ ಇಂಗ್ಲೀಷ್ ಟ್ರೇಲರ್ ರಿಲೀಸ್

Published : Aug 19, 2026, 03:11 PM IST
Toxic English Trailer

ಸಾರಾಂಶ

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ. ಇಂದು ರಾತ್ರಿ ಹಾಲಿವುಡ್ ಇಂಗ್ಲೀಷ್ ಟ್ರೇಲರ್ ಬಿಡುಗಡೆಯಾಗುತ್ತಿದೆ. ಗ್ಲೋಬಲ್ ಸ್ಟಾರ್ ಆಗಿರುವ ಯಶ್ ಇದೀಗ ಹಾಲಿವುಡ್‌ನಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ.

ಬೆಂಗಳೂರು (ಆ.19) ಭಾರತದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಹಾಲಿವುಡ್‌ನಲ್ಲಿ ಟಾಕ್ಸಿಕ್ ಟ್ರೇಲರ್ ಇಂದು ಬಿಡುಗಡೆಯಾಗುತ್ತಿದೆ. ಇಂದು ರಾತ್ರಿ 8.30ಕ್ಕೆ ದೇಶ ವಿದೇಶಗಳಲ್ಲಿ ಟಾಕ್ಸಿಕ್ ಇಂಗ್ಲೀಷ್ ಟ್ರೇಲರ್ ರಿಲೀಸ್ ಮಾಡಲಾಗುತ್ತಿದೆ. ಈ ಕುರಿತು ಟಾಕ್ಸಿಕ್ ಸಿನಿಮಾ ಮಹತ್ವದ ಅಪ್‌ಡೇಟ್ ಘೋಷಣೆ ಮಾಡಿದೆ.

ಟಾಕ್ಸಿಕ್ ಹಾಲಿವುಡ್ ಇಂಗ್ಲೀಷ್ ಟ್ರೇಲರ್ ರಿಲೀಸ್ ಸಮಯ

  • 8.30 PM (ಐಎಸ್‌ಟಿ)
  • 8:00 AM (ಪಿಎಸ್‌ಟಿ)
  • 11:00 AM(ಇಎಸ್‌ಟಿ)
  • 3:00 PM (ಜಿಎಂಟಿ )

ಈಗಾಗಲೇ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ಟ್ರೇಲಲ್ ಬಿಡುಗಡೆಯಾಗಿದೆ. ಈ ಟ್ರೇಲರ್ ನೋಡಿ ಅಭಿಮಾನಿಗಳು ಇದು ಹಾಲಿವುಡ್ ರೇಜ್ ಸಿನಿಮಾ ಎಂದೇ ಅಭಿಪ್ರಾಯ ಪಟ್ಟಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ವರ್ಲ್ಡ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಏಕಾಕಲದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣಗೊಂಡಿದೆ. ಈ ರೀತಿ ನಿರ್ಮಾಣಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಆ್ಯಕ್ಷನ್ ಡೈರೆಕ್ಟರ್,ಮ್ಯೂಸಿಕ್ ಡೈರೆಕ್ಟರ್ ಸೇರಿದಂತೆ ಹಲವು ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲಿ ಟಾಕ್ಸಿಕ್ ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ಮೂಲಕ 1 ಕೋಟಿ ರೂಪಾಯಿ ಅಧಿಕ ಗಳಿಕೆ ಮಾಡಿದೆ. ಅದ್ಭುತ ಮೇಕಿಂಗ್ ಹೊಂದಿರುವ ಟಾಕ್ಸಿಕ್ ಸಿನಿಮಾ ಭಾರತ ಹಾಗೂ ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಸ್ಟಾರ್ ಸೆಲೆಬ್ರೆಟಿಗಳ ದಂಡು

ಯಶ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಸ್ಟಾರ್ ಸೆಲೆಬ್ರೆಟಿಗಳ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮೊನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದೆ. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯ ಸೃಷ್ಟಿಸುವ ಸಾಧ್ಯತೆ ಇದೆ. ಹಾಲಿವುಡ್‌ನಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ನಟನ ಮೊದಲ ಸಿನಿಮಾ ಇದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬ್ರೇಕಪ್‌ ಸತ್ಯ' ಎಂದ ಅನುಪಮಾ ಆರೋಪಕ್ಕೆ ಎಕ್ಸ್‌-ಬಾಯ್‌ಫ್ರೆಂಡ್‌ ನಟ ಧ್ರುವ ವಿಕ್ರಮ್ ಹೇಳಿರೋ 'LOVE' ಸೀಕ್ರೆಟ್ ಇದು..!
Jr NTR: 'ನನ್ನ ಪುಟ್ಟ ಗೆಳೆಯ, ನೀನು ಸದಾ ನೆನಪಲ್ಲಿರುತ್ತೀಯಾ..' ಭಗೀರಾಗೆ ಕಣ್ಣೀರ ವಿದಾಯ | ವಿಡಿಯೋ