
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ಭಾಗ 1' ಸಿನಿಮಾ ನವೆಂಬರ್ 5 ರಂದು ರಿಲೀಸ್ ಆಗ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ನಿನ್ನೆ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಯಶ್ ಮಾತನ್ನಾಡಿದರು.
ನಮಿತ್ ಮಲ್ಹೋತ್ರ ಭಾರತದಲ್ಲಿ ರಾಮಾಯಣದ ಚಿತ್ರೀಕರಣವನ್ನು ಘೋಷಿಸಿದಾಗ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಾದವು. VFX ಅತ್ಯಂತ ಸವಾಲಿನ ಕೆಲಸ. ದಯವಿಟ್ಟು VFX ಅಥವಾ ಇನ್ನಾವುದರಲ್ಲೂ ಸಣ್ಣಪುಟ್ಟ ದೋಷಗಳನ್ನ ಹುಡುಕಲು ಪ್ರಯತ್ನಿಸಬೇಡಿ. ಈ ಅವಕಾಶಗಳು ಹೆಚ್ಚಾಗಿ ಸಿಗುವುದಿಲ್ಲ. ಒಮ್ಮೆ ಕಳೆದುಕೊಂಡರೆ ಮತ್ತೆಂದು ಸಿಗುವುದಿಲ್ಲ. ನಮಿತ್ ಮಲ್ಹೋತ್ರಾ ಅವರಂಥ ವ್ಯಕ್ತಿಗಳನ್ನ ಕಳೆದುಕೊಂಡರೆ.. ನಾವು ವರ್ಷಗಳಷ್ಟು ಹಿಂದೆ ಸರಿಯುತ್ತೇವೆ. ಮತ್ತೆ ನಾವು ಮೊದಲಿನಿಂದಲೂ ಶುರು ಮಾಡಬೇಕಾಗುತ್ತದೆ. ನಿಮಿತ್ ಈ ಚಿತ್ರವನ್ನು ಒಳ್ಳೆಯ ಉದ್ದೇಶದಿಂದ ಅದನ್ನು ಪ್ರಯತ್ನಿಸಿದ್ದಾರೆ. ಅವರು ಯಾವಾಗಲೂ ಜನರ ಟೀಕೆ ಮತ್ತು ಸಲಹೆಗಳನ್ನು ಸ್ವೀಕರಿಸುತ್ತಾರೆ.
ಪ್ರೇಕ್ಷಕರು ಪರ್ವಾಗ್ರಹ ಪೀಡಿತ ಕಲ್ಪನೆಗಳ ಆಧಾರದ ಮೇಲೆ ಚಿತ್ರವನ್ನು ನೋಡಬಾರದು. ಸಿನಿಮಾವನ್ನು ಮಕ್ತ ಮನಸ್ಸಿನಿಂದ ನೋಡಬೇಕು. ವಿವಿಧ ಭಾಷೆಗಳ ಚಿತ್ರೋದ್ಯಮಿಗಳು ಒಟ್ಟಾಗಿ ಬರಬೇಕು. ಕನ್ನಡ, ತೆಲುಗು, ತಮಿಳು, ಮಲಯಾಳಂ ಅಥವಾ ಹಿಂದಿ ಚಲನಚಿತ್ರೋದ್ಯಮದ ಅಭಿಮಾನಿಗಳಿಗೆ ಮನವಿ ಮಾಡುತ್ತೇನೆ. ನೀವು ಚಿತ್ರವನ್ನು ಇಷ್ಟಪಟ್ಟರೆ ನಾವೆಲ್ಲರೂ ಒಟ್ಟಾಗಿ ಜಗತ್ತಿಗೆ ಭಾರತೀಯ ಸಿನಿಮಾವನ್ನು ಕೊಂಡೊಯ್ಯೋಣ ಎಂದು ಮನವಿ ಮಾಡಿದ್ದಾರೆ.
ನಮಿತ್ ಮಲ್ಹೋತ್ರಾ ಜೊತೆ ಶಯ್ ಕೂಡ ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಲ್ಲದೇ ರಾವಣನ ಪಾತ್ರದಲ್ಲೂ ಯಶ್ ನಟಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಿದ್ದಾರೆ. ಸಿನಿಮಾ ಭಾರೀ ನಿರೀಕ್ಷೆಗಳನ್ನ ಹುಟ್ಟುಹಾಕಿದೆ.ಈಗಾಗಲೇ ಮುಂಗಡ ಬುಕಿಂಗ್ ಆರಂಭವಾಗಿದೆ. ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ವಿಶ್ವದಾದ್ಯಂತ ಭಾರೀ ದೊಡ್ಡಮೊಟ್ಟದಲ್ಲಿ ರಿಲೀಸ್ ಆಗಲಿದೆ.
RAMAYANA WILL NOT HAPPEN AGAIN
"Please don't try to find small faults; VFX, this-that. This chance won't come again. For years. If we lose people like him now, we'll go back.
So let's see with an open mind. He has had the right intentions, all criticism, correction, he has always taken and tried to do the best.
I request all the fans. Telugu industry, Kannada industry, Malayalam industry, Tamil industry, and Hindi industry:
For once, if you like the film, LET'S COME TOGETHER AND SHOW THE WORLD"
— KBP Reviews🏹 (@KshitizCritic) October 19, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.