
ಮಕ್ಕಳ ಕಳ್ಳರ ಬಗ್ಗೆ ಹರಡುತ್ತಿರುವ ಸುದ್ದಿ ಬಗ್ಗೆ ಆತಂಕಗೊಂಡಿರುವ ಯಶ್, ಇದೀಗ ಪೊಲೀಸರ ಜತೆಯೂ ಕೈ ಜೋಡಿಸಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ಕಳ್ಳರ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರಿಗೂ ನುಂಗಲಾರದ ತುತ್ತಾಗಿದೆ. ಇಂಥ ಸುದ್ದಿಗಳಿಂದ ಅಮಾಯಕರು ಏಟು ತಿನ್ನುತ್ತಿದ್ದು, ಪರಿಸ್ಥಿತಿ ಉಲ್ಬಣಗೊಳ್ಳುತ್ತಲೇ ಇದೆ.
ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಶ್ಚಿಮ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಮುಂದಾಗಿದ್ದಾರೆ. ಇವರ ಆದೇಶದಂತೆ ಪೊಲೀಸರೇ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರಗಳನ್ನು ಹಂಚುತ್ತಿದ್ದರು. ಅದೇ ಮಾರ್ಗದಲ್ಲಿ ಯಶ್ ಸಹ ಜಿಮ್ ಮುಗಿಸಿ ಮರಳುತ್ತಿದ್ದರು. ಆಗ ಖುದ್ದು ಯಶ್ ಪೊಲೀಸರ ಜತೆ ನಿಂತು, ಕರಪತ್ರ ಪ್ರದರ್ಶಿಸಿದರು. ಆ ಮೂಲಕ ಜನರಲ್ಲಿ ಅರಿವು ಮೂಡಿಸಲು ಯಶ್ ಮುಂದಾದರು. ಪೊಲೀಸರು ಜಾಗೃತಿಗಾಗಿ ಕೈ ಗೊಳ್ಳುವ ಕಾರ್ಯಗಳಲ್ಲಿ ಯಶ್‌ನಂಥ ನಟರು ಕೈ ಜೋಡಿಸಿದರೆ ಉತ್ತಮ ಫಲಿತಾಂಶ ಹೊರ ಬರಲು ಸಾಧ್ಯ. ಪೊಲೀಸರ ಕೆಲಸವೂ ಸುಲಭವಾಗುತ್ತದೆ.
ಯಶ್ ಕರ ಪತ್ರ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.