'ಈ ಸ್ಟಾರ್ ನಟ ಹುಟ್ಟಿನಿಂದಲೇ ಡ್ಯಾನ್ಸರ್, ಕ್ಯಾಮೆರಾ ಮುಂದೆ ಬಂದರೆ ಬೇರೆ ಮನುಷ್ಯ': ನಟಿ ಪ್ರಿಯಾಮಣಿ

Published : Sep 27, 2026, 08:15 PM IST
Priyamani

ಸಾರಾಂಶ

‘ಈ ಸ್ಟಾರ್ ನಟನ ಜೊತೆ ಡ್ಯಾನ್ಸ್ ಅಂದ್ರೆ ಟೆರೆರ್’ ಎಂದ ಪ್ರಿಯಾಮಣಿ. ಯಮದೊಂಗ ಶೂಟಿಂಗ್ ನೆನಪಿಸಿಕೊಂಡ ನಟಿ, ಎನ್‌ಟಿಆರ್ ಅವರ ಡ್ಯಾನ್ಸ್ ಸ್ಪೀಡ್ ಹಾಗೂ ಕ್ಯಾಮೆರಾ ಮುಂದೆ ಅವರ ಅದ್ಭುತ ರೂಪಾಂತರದ ಬಗ್ಗೆ ಮಾತನಾಡಿದ್ದಾರೆ.

ಟಾಲಿವುಡ್‌ನ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್‌ಗೆ ಡ್ಯಾನ್ಸ್ ಅಂದ್ರೆ ಹೊಸದೇನಲ್ಲ. ಅದ್ಭುತ ಡ್ಯಾನ್ಸ್ ಮೂವ್ಸ್, ವೇಗದ ಸ್ಟೆಪ್ಸ್ ಹಾಗೂ ಎಕ್ಸ್‌ಪ್ರೆಶನ್ಸ್ ಮೂಲಕ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ನಟರಲ್ಲಿ ಎನ್‌ಟಿಆರ್ ಕೂಡ ಒಬ್ಬರು. ಆದರೆ ಅವರ ಜೊತೆ ಸ್ಕ್ರೀನ್ ಹಂಚಿಕೊಂಡು ಡ್ಯಾನ್ಸ್ ಮಾಡಿರುವ ನಟಿಯರ ಅನುಭವ ಹೇಗಿರುತ್ತದೆ? ಇದೇ ವಿಚಾರದ ಬಗ್ಗೆ ನಟಿ ಪ್ರಿಯಾಮಣಿ ತಮ್ಮ ಹಳೆಯ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ.

ಎನ್‌ಟಿಆರ್ ಜೊತೆ 'ಯಮದೊಂಗ' ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾಮಣಿ, ಅವರ ಜೊತೆ ಡ್ಯಾನ್ಸ್ ಮಾಡುವಾಗ ತಮಗೆ ನಿಜಕ್ಕೂ ಭಯವಾಗಿತ್ತು ಎಂದು ಹೇಳಿದ್ದಾರೆ. ಎನ್‌ಟಿಆರ್ ಅವರ ಡ್ಯಾನ್ಸ್ ವೇಗ ಮತ್ತು ಸ್ಟೆಪ್ಸ್ ಕಲಿಯುವ ಸಾಮರ್ಥ್ಯ ನೋಡಿ ತಾವು ಆಶ್ಚರ್ಯಪಟ್ಟಿದ್ದಾಗಿ ತಿಳಿಸಿದ್ದಾರೆ.

'ಎನ್‌ಟಿಆರ್ ಜೊತೆ ಡ್ಯಾನ್ಸ್ ಅಂದ್ರೆ ತುಂಬಾ ಭಯವಾಗಿತ್ತು!'

ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾಮಣಿಗೆ ಎನ್‌ಟಿಆರ್ ಜೊತೆ ಡ್ಯಾನ್ಸ್ ಮಾಡಿದ ಅನುಭವದ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಅವರು ಯಾವುದೇ ಮುಚ್ಚುಮರೆಯಿಲ್ಲದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 'ತುಂಬಾ ಭಯವಾಗಿತ್ತು. ಹೇಳಬೇಕೆಂದರೆ ನಿಜವಾಗಿಯೂ ಒಂದು ರೀತಿಯ ಟೆರೆರ್‌ನಂತಿತ್ತು' ಎಂದು ಪ್ರಿಯಾಮಣಿ ಹೇಳಿದ್ದಾರೆ.

ಎನ್‌ಟಿಆರ್ ಒಂದು ಹಾಡಿನ ಸ್ಟೆಪ್ಸ್‌ಗಳನ್ನು ಕಲಿಯುವ ವೇಗವನ್ನು ನೆನಪಿಸಿಕೊಂಡಿರುವ ಅವರು, ಒಂದು ಸಾಂಗ್‌ನಲ್ಲಿ ಆರು ಸ್ಟೆಪ್ಸ್ ಇದ್ದರೆ ಎನ್‌ಟಿಆರ್ ಅದನ್ನು ಒಮ್ಮೆ ನೋಡಿದ ಕೂಡಲೇ ಸುಲಭವಾಗಿ ಮಾಡಿಬಿಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ತಮಗೆ ಮಾತ್ರ ಅದೇ ಸ್ಟೆಪ್ಸ್‌ಗಳನ್ನು ಪರ್ಫೆಕ್ಟ್ ಮಾಡಲು ಮೂರು-ನಾಲ್ಕು ದಿನಗಳವರೆಗೆ ರಿಹರ್ಸಲ್ ಮಾಡಬೇಕಾಗುತ್ತಿತ್ತು ಎಂದು ಪ್ರಿಯಾಮಣಿ ಹೇಳಿದ್ದಾರೆ. ಎನ್‌ಟಿಆರ್ ಅವರ ಡ್ಯಾನ್ಸ್ ಸಾಮರ್ಥ್ಯವನ್ನು ಹತ್ತಿರದಿಂದ ನೋಡಿದಾಗ ತಮಗೆ ನಿಜಕ್ಕೂ ಅಚ್ಚರಿಯಾಗಿತ್ತು ಎಂದು ತಿಳಿಸಿದ್ದಾರೆ.

'ಅವರು ಪಕ್ಕಾ Born Dancer!'

ಎನ್‌ಟಿಆರ್ ಬಗ್ಗೆ ಮಾತನಾಡುವಾಗ ಪ್ರಿಯಾಮಣಿ ಒಂದು ಮಾತನ್ನು ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ. ಅವರು 'Born Dancer'! 'ಅವರು ಹುಟ್ಟಿನಿಂದಲೇ ಡ್ಯಾನ್ಸರ್. ಅವರಿಗೆ ಗ್ರೇಸ್, ರಿದಮ್ ಎಲ್ಲವೂ ಸಹಜವಾಗಿ ಬರುತ್ತದೆ. ಮ್ಯೂಸಿಕ್ ಹಾಕಿದರೆ ಸಾಕು, ಅದಕ್ಕೆ ತಕ್ಕಂತೆ ಅವರ ದೇಹವೇ ಸ್ಟೆಪ್ಸ್‌ಗೆ ಮೂವ್ ಆಗುತ್ತದೆ' ಎಂಬರ್ಥದಲ್ಲಿ ಪ್ರಿಯಾಮಣಿ ಎನ್‌ಟಿಆರ್ ಅವರ ಡ್ಯಾನ್ಸ್ ಕೌಶಲ್ಯವನ್ನು ಕೊಂಡಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಯಾರ ಜೊತೆ ಡ್ಯಾನ್ಸ್ ಮಾಡುವಾಗಲೂ ಸ್ಟೆಪ್ಸ್‌ಗಳನ್ನು ಮ್ಯಾಚ್ ಮಾಡುವುದು ಇಷ್ಟು ಕಷ್ಟವಾಗಿರಲಿಲ್ಲ ಎಂದು ಹೇಳುವ ಪ್ರಿಯಾಮಣಿ, ಎನ್‌ಟಿಆರ್ ಅವರ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಸವಾಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಸೈಲೆಂಟ್ ಆಗಿರ್ತಾರೆ.. ಕ್ಯಾಮೆರಾ ಮುಂದೆ ಬಂದರೆ ಬೇರೆ ಮನುಷ್ಯ!

ಎನ್‌ಟಿಆರ್ ಅವರ ಡ್ಯಾನ್ಸ್ ಮಾತ್ರವಲ್ಲ, ಅವರ ವ್ಯಕ್ತಿತ್ವದ ಮತ್ತೊಂದು ವಿಶೇಷತೆಯನ್ನೂ ಪ್ರಿಯಾಮಣಿ ಬಹಿರಂಗಪಡಿಸಿದ್ದಾರೆ. ಸೆಟ್‌ನಲ್ಲಿ ಎನ್‌ಟಿಆರ್ ತುಂಬಾ ಸೈಲೆಂಟ್ ಆಗಿರುತ್ತಾರೆ. ಹೆಚ್ಚು ಮಾತನಾಡುವುದಿಲ್ಲ. ಆದರೆ ಒಮ್ಮೆ ಕ್ಯಾಮೆರಾ ಮುಂದೆ ಬಂದು 'ಆ್ಯಕ್ಷನ್' ಎಂದಾಕ್ಷಣ ಅವರೇ ಸಂಪೂರ್ಣವಾಗಿ ಬದಲಾಗಿಬಿಡುತ್ತಾರೆ ಎಂದು ಪ್ರಿಯಾಮಣಿ ಹೇಳಿದ್ದಾರೆ. 'ಅಷ್ಟು ಸೈಲೆಂಟ್ ಆಗಿರುವ ವ್ಯಕ್ತಿ ಕ್ಯಾಮೆರಾ ಮುಂದೆ ಬಂದ ಕೂಡಲೇ ಹೀಗೆ ಹೇಗೆ ಬದಲಾಗುತ್ತಾರೆ ಎಂದು ನಂಬಲಾಗುವುದಿಲ್ಲ' ಎಂಬ ರೀತಿಯಲ್ಲಿ ಅವರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

'ಅದು ಒಬ್ಬ ನಟನ ದೊಡ್ಡ ಗುಣ!'

ಸೆಟ್‌ನಲ್ಲಿ ಶಾಂತವಾಗಿ ಇರುವ ವ್ಯಕ್ತಿಯೊಬ್ಬರು ಕ್ಯಾಮೆರಾ ಆನ್ ಆದ ತಕ್ಷಣ ಪಾತ್ರವಾಗಿ ಸಂಪೂರ್ಣವಾಗಿ ಬದಲಾಗುವುದು ಒಬ್ಬ ನಟನಿಗೆ ಇರುವ ದೊಡ್ಡ ಗುಣ ಎಂದು ಪ್ರಿಯಾಮಣಿ ಅಭಿಪ್ರಾಯಪಟ್ಟಿದ್ದಾರೆ. ಎನ್‌ಟಿಆರ್ ಆ ರೂಪಾಂತರವನ್ನು ತುಂಬಾ ಚೆನ್ನಾಗಿ ಮೆಂಟೇನ್ ಮಾಡುತ್ತಾರೆ. ಕ್ಯಾಮೆರಾ ಮುಂದೆ ಬಂದಾಗ ಪಾತ್ರದೊಳಗೆ ಸಂಪೂರ್ಣವಾಗಿ ಇಳಿದು ಅಭಿನಯಿಸುವ ಅವರ ಸಾಮರ್ಥ್ಯ ನಿಜಕ್ಕೂ ವಿಶೇಷ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು 'ಯಮದೊಂಗ' ಸಿನಿಮಾದ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡ ಪ್ರಿಯಾಮಣಿ, ಎನ್‌ಟಿಆರ್ ಅವರ ಡ್ಯಾನ್ಸ್ ವೇಗ, ಸಹಜವಾದ ಗ್ರೇಸ್ ಹಾಗೂ ಕ್ಯಾಮೆರಾ ಮುಂದೆ ಅವರ ಅದ್ಭುತ ರೂಪಾಂತರದ ಬಗ್ಗೆ ಹೇಳಿರುವ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

30 ವರ್ಷಗಳ ಪಯಣಕ್ಕೆ ರಿಷಬ್ ಶೆಟ್ಟಿ ಹೇಳಿದ ಆ ಮಾತುಗಳೇನು? ಸುದೀಪ್ ಕೊಟ್ಟ ಉತ್ತರ ಹೀಗಿತ್ತು!
ಅಮಿತಾಭ್​ರನ್ನು ನೋಡಲು ಬಂದಿದ್ದ ಉಗ್ರ ಕಸಬ್​: ಶಾಕಿಂಗ್​ ಘಟನೆ ತೆರೆದಿಟ್ಟ ವಕೀಲ- ಬಿಗ್​ ಬಿ ಹೇಳಿದ್ದೇನು