ಅಮಿತಾಭ್​ರನ್ನು ನೋಡಲು ಬಂದಿದ್ದ ಉಗ್ರ ಕಸಬ್​: ಶಾಕಿಂಗ್​ ಘಟನೆ ತೆರೆದಿಟ್ಟ ವಕೀಲ- ಬಿಗ್​ ಬಿ ಹೇಳಿದ್ದೇನು

Published : Sep 27, 2026, 07:26 PM IST
KBC Show

ಸಾರಾಂಶ

ರಾಜ್‌ಕುಮಾರ್ ರಾವ್ ಅಭಿನಯದ 'ಪ್ರಹಾರ್' ಚಿತ್ರದ ಪ್ರಚಾರಕ್ಕಾಗಿ ಉಜ್ವಲ್ ನಿಕಮ್ ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ 26/11 ಉಗ್ರ ಅಜ್ಮಲ್ ಕಸಬ್ ತನಿಖೆ ದಿಕ್ಕುತಪ್ಪಿಸಲು ಅಮಿತಾಭ್ ಬಚ್ಚನ್ ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದ ಸುಳ್ಳನ್ನು ನಿಕಮ್ ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿ ಅಮಿತಾಭ್ ಬಚ್ಚನ್ ಆಘಾತ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮುಂಬೈ: ಚಿತ್ರನಟರಾದ ರಾಜ್‌ಕುಮಾರ್ ರಾವ್, ವಾಮಿಕಾ ಗಬ್ಬಿ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರು, ಅಮಿತಾಭ್​ ಬಚ್ಚನ್​ ಅವರು ನಡೆಸಿಒಡುವ ಕೌನ್ ಬನೇಗಾ ಕರೋಡ್‌ಪತಿಯ ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಂಡರು. "ಪ್ರಹಾರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಉಜ್ವಲ್ ನಿಕಮ್" ಚಿತ್ರದ ಪ್ರಚಾರಕ್ಕಾಗಿ ಈ ಷೋನಲ್ಲಿ ಇವರೆಲ್ಲರೂ ಕಾಣಿಸಿಕೊಂಡಿದ್ದರು. "ಪ್ರಹಾರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಉಜ್ವಲ್ ನಿಕಮ್" ಉಜ್ವಲ್ ನಿಕಮ್ ಅವರ ಜೀವನ ಮತ್ತು ಅವರ ಪ್ರಸಿದ್ಧ ಪ್ರಕರಣಗಳನ್ನು ಆಧರಿಸಿದ ಜೀವನಚರಿತ್ರೆಯಾಗಿದೆ. ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಉಜ್ವಲ್ ನಿಕಮ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕಥೆಯು ಅವರ ವೃತ್ತಿಜೀವನದ ಪ್ರಮುಖ ಪ್ರಕರಣಗಳ ಸುತ್ತ ಸುತ್ತುತ್ತದೆ, ವಿಶೇಷವಾಗಿ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಅಜ್ಮಲ್ ಕಸಬ್ ವಿಚಾರಣೆ ಮತ್ತು 1993 ರ ಮುಂಬೈ ಬಾಂಬ್ ಸ್ಫೋಟ ಪ್ರಕರಣ. ನ್ಯಾಯಾಲಯದಲ್ಲಿ ಅವರ ಕಾನೂನು ಹೋರಾಟಗಳು, ಈ ಪ್ರಕರಣಗಳಲ್ಲಿ ಅವರು ಎದುರಿಸಿದ ಸವಾಲುಗಳು ಮತ್ತು ಅವರ ವೈಯಕ್ತಿಕ ಜೀವನದ ಒಂದು ನೋಟವನ್ನು ಈ ಚಿತ್ರವು ಚಿತ್ರಿಸುತ್ತದೆ. ವಾಮಿಕಾ ಗಬ್ಬಿ ಅವರ ಪತ್ನಿ ಜ್ಯೋತಿ ನಿಕಮ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರವನ್ನು ಅವಿನಾಶ್ ಅರುಣ್ ನಿರ್ದೇಶಿಸಿದ್ದಾರೆ.

ಈ ಸಮಯದಲ್ಲಿ, ಉಜ್ವಲ್ ನಿಕಮ್ ಅವರು ಕಸಬ್​ ಕುರಿತು ಹಲವಾರು ಘಟನೆಗಳನ್ನು ವಿವರಿಸಿದರು. 26/11 ಮುಂಬೈ ಭಯೋತ್ಪಾದಕ ದಾಳಿ ಮತ್ತು ನಂತರದ ಕಾನೂನು ಕ್ರಮಗಳ ಬಗ್ಗೆ ಚರ್ಚಿಸುವ ಸಮಯದಲ್ಲಿ, ನಿಕಮ್​ ಅವರು, ಅಜ್ಮಲ್ ಕಸಬ್ ತನಿಖಾ ಸಂಸ್ಥೆಗಳನ್ನು ದಾರಿ ತಪ್ಪಿಸಲು ಹಲವಾರು ಸುಳ್ಳುಗಳನ್ನು ಹೇಳಿದ್ದಾನೆ ಎಂದರು. 26/11 ದಾಳಿಗೆ ಸಂಬಂಧಿಸಿದಂತೆ ತನ್ನನ್ನು ಬಂಧಿಸಲಾಗಿಲ್ಲ ಎಂದು ಕಸಬ್ ಹೇಳಿದ್ದ. ಆದರೆ ನವೆಂಬರ್ 6 ರಂದು ಜುಹು ಚೌಪಟ್ಟಿಯಲ್ಲಿ ಬಂಧಿಸಲ್ಪಟ್ಟಿದ್ದ ಎಂದು ನಿಕಮ್ ಹೇಳಿದರು. ಇದೇ ವೇಳೆ, ನಿಕಮ್​ ಅವರು, ಶಾಕಿಂಗ್​ ವಿಷಯವೊಂದನ್ನು ಬಹಿರಂಗಪಡಿಸಿದರು. ಅದೇನೆಂದರೆ, ಕಸಬ್ ಅಮಿತಾಭ್​ ಬಚ್ಚನ್ ಅವರನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದನಂತೆ! ಈ ವಿಷಯವನ್ನು ಆತ ಬಹಿರಂಗಪಡಿಸಿರುವುದಾಗಿ ತಿಳಿಸಿದರು. ಇದನ್ನು ಕೇಳುತ್ತಲೇ ಅಮಿತಾಭ್​ ಬಚ್ಚನ್ ತನ್ನ ಮನೆಗೆ ಬಂದಿದ್ದರೆ, ನಾನು ಅಲ್ಲಿಂದ ಹೋಗುತ್ತಿರಲಿಲ್ಲ ಮತ್ತು ಅಲ್ಲಿಯೇ ಗುಂಡು ಹಾರಿಸುತ್ತಿದ್ದೆ ಎಂದಿದ್ದಾರೆ.

ವಿಚಾರಣೆಯ ಸಮಯದಲ್ಲಿ ಕಸಬ್‌ನ ಇತರ ಹೇಳಿಕೆಗಳನ್ನು ನಿಕಮ್ ಪ್ರಸ್ತಾಪಿಸಿದರು. ಅವರ ಪ್ರಕಾರ, ಕಸಬ್ ತಾನು ಅಪ್ರಾಪ್ತ ವಯಸ್ಕನೆಂದು ಹೇಳಿಕೊಂಡು ರಾನಿಂದ ಬಂಧಿಸಲ್ಪಟ್ಟಿರುವುದಾಗಿ ಹೇಳಿಕೊಂಡಿದ್ದ. ಮುಂದಿನ ಕ್ರಮ ಕೈಗೊಳ್ಳುವ ಮೊದಲು ತನ್ನ ವಯಸ್ಸನ್ನು ಸಾಬೀತುಪಡಿಸುವುದು ಅಗತ್ಯವಾಗಿದ್ದ ಕಾರಣ ಇದು ಪ್ರಕರಣದಲ್ಲಿ ಕಾನೂನು ಸವಾಲನ್ನು ಒಡ್ಡಿತ್ತು ಎಂದಿದ್ದಾರೆ.

26/11ರ ಘಟನೆ ಕುರಿತು..

ನವೆಂಬರ್ 26, 2008 ರಂದು, ಸಮುದ್ರ ಮಾರ್ಗವಾಗಿ ಮುಂಬೈಗೆ ಆಗಮಿಸಿದ 10 ಭಯೋತ್ಪಾದಕರು ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿದರು. ದಾಳಿ ಸುಮಾರು 60 ಗಂಟೆಗಳ ಕಾಲ ನಡೆದು ನವೆಂಬರ್ 29 ರ ಬೆಳಿಗ್ಗೆ ಕೊನೆಗೊಂಡಿತು. ಸುಪ್ರೀಂ ಕೋರ್ಟ್ ದಾಖಲೆಗಳ ಪ್ರಕಾರ, ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 238 ಜನರು ಗಾಯಗೊಂಡರು. ಮೃತರಲ್ಲಿ 18 ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮತ್ತು 26 ವಿದೇಶಿ ಪ್ರಜೆಗಳು ಸೇರಿದ್ದಾರೆ. ಈ 10 ದಾಳಿಕೋರರಲ್ಲಿ, ಅಜ್ಮಲ್ ಅಮೀರ್ ಕಸಬ್ ಜೀವಂತವಾಗಿ ಸೆರೆಹಿಡಿಯಲಾದ ಏಕೈಕ ಭಯೋತ್ಪಾದಕ. ಅವರನ್ನು ನವೆಂಬರ್ 27, 2008 ರಂದು ಬಂಧಿಸಲಾಯಿತು. ಉಳಿದ ಒಂಬತ್ತು ದಾಳಿಕೋರರನ್ನು ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು.

ಈ ಪ್ರಕರಣದ ತನಿಖೆಯಲ್ಲಿ ಕಸಬ್‌ನ ಬಂಧನವು ನಿರ್ಣಾಯಕವಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ತನಿಖೆಯಲ್ಲಿ ಪೊಲೀಸ್ ತನಿಖೆಯ ಜೊತೆಗೆ ಕಸಬ್‌ನ ಹೇಳಿಕೆಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪುರಾವೆಗಳು ಸೇರಿವೆ. ಈ ದಾಳಿಯನ್ನು ಪಾಕಿಸ್ತಾನದಲ್ಲಿ ಯೋಜಿಸಿ ಸಿದ್ಧಪಡಿಸಲಾಗಿತ್ತು ಎಂದು ನ್ಯಾಯಾಲಯ ತೀರ್ಮಾನಿಸಿತು. ಕಸಬ್ ವಿರುದ್ಧ ದೇಶದ ವಿರುದ್ಧ ಯುದ್ಧ ನಡೆಸಲು ಸಂಚು ರೂಪಿಸುವುದು, ಭಯೋತ್ಪಾದಕ ಚಟುವಟಿಕೆಗಳು, ಕೊಲೆ, ಕೊಲೆಗೆ ಸಂಚು ರೂಪಿಸುವುದು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಸೇರಿದಂತೆ ಹಲವಾರು ಆರೋಪಗಳನ್ನು ಹೊರಿಸಲಾಯಿತು.

ದೋಷಿ ಎಂದು ತೀರ್ಪು

ಮೇ 2010 ರಲ್ಲಿ, ಮುಂಬೈನ ವಿಶೇಷ ನ್ಯಾಯಾಲಯವು ಅವನನ್ನು ದೋಷಿ ಎಂದು ನಿರ್ಣಯಿಸಿ ಮರಣದಂಡನೆ ವಿಧಿಸಿತು. ಬಾಂಬೆ ಹೈಕೋರ್ಟ್ ಫೆಬ್ರವರಿ 2011 ರಲ್ಲಿ ಅವನ ಶಿಕ್ಷೆಯನ್ನು ಎತ್ತಿಹಿಡಿಯಿತು. ನಂತರ ಪ್ರಕರಣ ಸುಪ್ರೀಂ ಕೋರ್ಟ್‌ಗೆ ತಲುಪಿತು. 2012 ರಲ್ಲಿ, ಸುಪ್ರೀಂ ಕೋರ್ಟ್ ಕಸಬ್‌ನ ಮೇಲ್ಮನವಿಯನ್ನು ತಿರಸ್ಕರಿಸಿತು ಮತ್ತು ಅವನ ಮರಣದಂಡನೆಯನ್ನು ಎತ್ತಿಹಿಡಿಯಿತು. ನಂತರ ಅವನ ದಯಾ ಅರ್ಜಿಯನ್ನು ತಿರಸ್ಕರಿಸಲಾಯಿತು. ನವೆಂಬರ್ 21, 2012 ರಂದು ಪುಣೆಯ ಯೆರವಾಡ ​​ಜೈಲಿನಲ್ಲಿ ಅವನನ್ನು ಗಲ್ಲಿಗೇರಿಸಲಾಯಿತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ ಮಾಜಿ ಸ್ಪರ್ಧಿ ಅರೆಸ್ಟ್, ವೈದ್ಯರಿಂದ 5 ಲಕ್ಷ ರೂ ವಸೂಲಿಗೆ ಯತ್ನಿಸಿ ಹಲ್ಲೆ ಆರೋಪ
ತಾಂಡವ್ ರಾಮ್ ಕಿವಿ ಹಿಂಡಿದ ಕಿಚ್ಚ ಸುದೀಪ್‌: '12 ವರ್ಷದಲ್ಲಿ ಮೊದಲಿಗ ನೀವೇ' ಎಂದಿದ್ದೇಕೆ?