
ಬೆಂಗಳೂರು: ಚಿತ್ರರಂಗದ ಬಣ್ಣದ ಲೋಕ ಅನೇಕರಿಗೆ ಕನಸಿನ ತಾಣ. ಆದರೆ, ಇಲ್ಲಿನ ಅನಿಶ್ಚಿತತೆ ಮತ್ತು ಸವಾಲುಗಳನ್ನು ಅರಿತು, ತಮ್ಮ ವೃತ್ತಿಜೀವನವನ್ನು ಸಮತೋಲನದಿಂದ ನಿಭಾಯಿಸುವವರು ಕೆಲವರು ಮಾತ್ರ. ಅಂತಹ ವಿಶಿಷ್ಟ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ರವೀಕ್ಷಾ ಶೆಟ್ಟಿ (Raviksha Shetty). ನಟ ರಾಜೇಶ್ ಧ್ರುವ ಅಭಿನಯದ ‘ಪೀಟರ್’ ಚಿತ್ರದಲ್ಲಿ ನಾಯಕಿಯಾಗಿ ಬಣ್ಣಹಚ್ಚಿರುವ ನಟಿ ರವೀಕ್ಷಾ, ಸದ್ದಯ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲು ರೆಡಿಯಾಗಿದ್ದಾರೆ.
ಐಟಿ ಉದ್ಯೋಗವೇ ನನ್ನ ಆತ್ಮವಿಶ್ವಾಸದ ಮೂಲ:
ನಟಿ ರವಿಕ್ಷಾ ಶೆಟ್ಟಿ ತಮ್ಮ ವೃತ್ತಿ ಹಾಗೂ ಸಿನಿಮಾ ಫ್ಯಾಷನ್ ಬಗ್ಗೆ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ.. "ನಟನೆ ನನ್ನ ಅಚ್ಚುಮೆಚ್ಚಿನ ಕಲೆ. ಆದರೆ, ಚಿತ್ರರಂಗದಲ್ಲಿ ಅವಕಾಶಗಳು ಯಾವಾಗ ಸಿಗುತ್ತವೆ, ಯಾವಾಗ ಇಲ್ಲ ಎಂದು ಹೇಳಲಾಗದು. ಈ ಅನಿಶ್ಚಿತತೆಯೇ ಅನೇಕರನ್ನು ಚಿಂತೆಗೀಡು ಮಾಡುತ್ತದೆ. ಆದರೆ, ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದು ನನಗೆ ದೊಡ್ಡ ಆರ್ಥಿಕ ಶಕ್ತಿಯನ್ನು ನೀಡಿದೆ.
ಇದರಿಂದಾಗಿ ನಾನು ಹಣಕ್ಕಾಗಿ ಯಾವುದೇ ಪಾತ್ರವನ್ನು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಸಿಲುಕುವುದಿಲ್ಲ. ಬದಲಾಗಿ, ನನಗೆ ಇಷ್ಟವಾದ, ನನ್ನ ಮನಸ್ಸಿಗೆ ಹಿಡಿಸುವ ಮತ್ತು ನನ್ನ ನಟನಾ ಕೌಶಲ್ಯಕ್ಕೆ ಸವಾಲೆಸೆಯುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನನಗಿದೆ," ಎನ್ನುತ್ತಾರೆ ರವೀಕ್ಷಾ.
ಅವರ ಪ್ರಕಾರ, ಐಟಿ ಉದ್ಯೋಗವು ಕೇವಲ ಒಂದು 'ಬ್ಯಾಕಪ್' ಆಯ್ಕೆಯಲ್ಲ, ಬದಲಾಗಿ ಅದು ಅವರ ನಟನಾ ವೃತ್ತಿಜೀವನಕ್ಕೆ ಪೂರಕವಾದ ಶಕ್ತಿ. "ಈ ಕೆಲಸವು ನನಗೆ ಆರ್ಥಿಕ ಸ್ವಾತಂತ್ರ್ಯ ನೀಡುವುದಲ್ಲದೆ, ನನ್ನ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ. ನಾಳೆ ಅವಕಾಶ ಸಿಗದಿದ್ದರೆ ಏನು ಮಾಡುವುದು ಎಂಬ ಭಯವಿಲ್ಲದೆ, ನಾನು ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ," ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಸಿನಿಮಾ ಪಯಣ:
ಮಂಗಳೂರಿನವರಾದ ರವೀಕ್ಷಾ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ನಟನೆಯ ಮೇಲಿನ ಆಸಕ್ತಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದಿರುವ ಇವರಿಗೆ ಮರಿಕಾ (Marika) ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆ.
ಒಟ್ಟಿನಲ್ಲಿ, ತಮ್ಮ ವೃತ್ತಿ ಮತ್ತು ಪ್ಯಾಷನ್ ಎರಡನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿರುವ ರವೀಕ್ಷಾ ಶೆಟ್ಟಿ, ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಅವರ ಸಮತೋಲಿತ ಬದುಕು, ಚಿತ್ರರಂಗಕ್ಕೆ ಕಾಲಿಡಲು ಬಯಸುವ ಅನೇಕರಿಗೆ ಒಂದು ಉತ್ತಮ ಮಾದರಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.