ಹಾಲಿ ಪತ್ನಿ-ಮಕ್ಕಳು ಇರುವಾಗಲೇ ಸಂಜಯ್ ಕಪೂರ್ ಅಂತ್ಯಕ್ರಿಯೆಯನ್ನು ಕರಿಷ್ಮಾ ಕಪೂರ್ ಮಾಡಿದ್ದೇಕೆ?

Published : Jun 23, 2025, 12:35 PM IST
Karishma Kapoor Priya Sachdev

ಸಾರಾಂಶ

ಸಾಮಾನ್ಯವಾಗಿ ಡಿವೋರ್ಸ್ ಆದ ಬಳಿಕ ಪತಿ ಹಾಗು ಮುಂದಿನ ಸಂಬಂಧಗಳ ಜೊತೆ ಅನ್ಯೋನ್ಯತೆಯನ್ನು ಬಯಸುವುದು ತುಂಬಾ ಅಪರೂಪ. ಅನ್ಯೋನ್ಯತೆ ಹಾಗಿರಲಿ, ಸಾಮಾನ್ಯವಾಗಿ ಮಾಜಿ ಪತಿ, ಪತ್ನಿ ಹಾಗೂ ಹಾಲಿ ಪತಿ-ಪತ್ನಿ ನಡುವೆ ವೈಮನಸ್ಯ ಇರುವುದೇ ಹೆಚ್ಚು. ಆದರೆ, ಕರಿಷ್ಮಾ ಕುಟುಂಬ ಹಾಗೂ ಪ್ರಿಯಾ ಕುಟುಂಬಗಳ ಮಧ್ಯೆ..

ಬಾಲಿವುಡ್ ನಟಿ ಕರಿಷ್ಮಾ ಕಪೂರ್ (Karishma Kapoor) ಅವರು ತಮ್ಮ ಮಾಜಿ ಪತಿ ಸಂಜಯ್ ಕಪೂರ್ (Sunjay Kapoor) ಅವರ ಅಂತ್ಯಕ್ರಿಯೆ ಹಾಗೂ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಸಂಜಯ್ ಕಪೂರ್ ಅವರ ಹಾಲಿ ಪತ್ನಿ ಪ್ರಿಯಾ ಸಚ್‌ದೇವ್ (Priya Sachdev) ಹಾಗೂ ಅವರ ಮಕ್ಕಳು ಬದುಕಿದ್ದರೂ ಕೂಡ ಕರಿಷ್ಮಾ ಕಪೂರ್ ಯಾಕೆ ಅಂತ್ಯಕ್ರಿಯೆ ಮಾಡಿದ್ದಾರೆ? ಪ್ರಿಯಾ ಹಾಗೂ ಅವರ ಮಕ್ಕಳು ಯಾಕೆ ಸಂಜಯ್ ಕಪೂರ್ ಅಂತ್ಯಕ್ರಿಯೆ ಮಾಡಿಲ್ಲ ಎಂಬ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಹಾಗಿದ್ದರೆ ಅಸಲಿ ಕಾರಣವೇನು? ಇಲ್ಲಿದೆ ನೋಡಿ..

ಸಂಜಯ್ ಕಪೂರ್ ಆಕಸ್ಮಿಕ ಸಾವು ಸಂಭವಿಸಿದ್ದು, ಅದರಿಂದ ಅವರ ಪತ್ನಿ ಪ್ರಿಯಾ ಸಚ್‌ದೇವ್ ಅವರು ಭಾರೀ ಆಘಾತಕ್ಕೆ ಒಳಗಾಗಿದ್ದಾರೆ. ಪತಿಯ ಅಂತ್ಯಕ್ರಿಯೆ ಮಾಡಲು ಸಹ ಅವರಿಂದ ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಆ ಕಾರಣಕ್ಕೆ ಮಾಜಿ ಪತಿಯ ಅಂತ್ಯಕ್ರಿಯೆಯನ್ನು ಮಾಜಿ ಪತ್ನಿ ಕರಿಷ್ಮಾ ಕಪೂರ್ ಅವರೇ ಮಾಡಬೇಕಾಯ್ತು, ಮಾಡಿದ್ದಾರೆ ಎಂಬ ನಿಖರ ಉತ್ತರ ಸಿಕ್ಕಿದೆ. ಈ ಸಂಗತಿ ಗೊತ್ತಾದ ಬಳಿಕ, ಕರಿಷ್ಮಾ ಕಪೂರ್ ಹಾಗೂ ಪ್ರಿಯಾ ಸಚ್‌ದೇವ್ ಕುಟುಂಬಗಳ ನಡುವಿನ ಅನ್ಯೋನ್ಯತೆ ಬಗ್ಗೆ ನೆಟ್ಟಿಗರು ಅಚ್ಚರಿ ಹಾಗು ಸಂತೋಷ ವ್ಯಕ್ತಪಡಿಸಿದ್ದಾರೆ.

ಹೌದು, ಸಾಮಾನ್ಯವಾಗಿ ಡಿವೋರ್ಸ್ ಆದ ಬಳಿಕ ಪತಿ ಹಾಗು ಮುಂದಿನ ಸಂಬಂಧಗಳ ಜೊತೆ ಅನ್ಯೋನ್ಯತೆಯನ್ನು ಬಯಸುವುದು ತುಂಬಾ ಅಪರೂಪ. ಅನ್ಯೋನ್ಯತೆ ಹಾಗಿರಲಿ, ಸಾಮಾನ್ಯವಾಗಿ ಮಾಜಿ ಪತಿ, ಪತ್ನಿ ಹಾಗೂ ಹಾಲಿ ಪತಿ-ಪತ್ನಿ ನಡುವೆ ವೈಮನಸ್ಯ ಇರುವುದೇ ಹೆಚ್ಚು. ಆದರೆ, ಕರಿಷ್ಮಾ ಕುಟುಂಬ ಹಾಗೂ ಪ್ರಿಯಾ ಕುಟುಂಬಗಳ ಮಧ್ಯೆ ಅನ್ಯೋನ್ಯತೆ ಈಗಲೂ ಇದೆ ಎಂಬುದು ಶಾಕಿಂಗ್ ಎನ್ನಿಸಿದರೂ ಅಸಲಿ ಸತ್ಯ ಎನ್ನಲಾಗಿದೆ. ಹೀಗಾಗಿ, ತುಂಬಾ ನೋವಿನಲ್ಲಿರುವ ಪ್ರಿಯಾ ಬದಲು, ಕರಿಷ್ಮಾ ಅವರೇ ಮಾಜಿ ಪತಿ ಸಂಜಯ್ ಅಂತ್ಯಕ್ರಿಯೆ ಹಾಗೂ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ, ಪ್ರಿಯಾಗೆ ಸಾಂತ್ವನ ಕೂಡ ಹೇಳಿದ್ದಾರೆ.

ಅಂದಹಾಗೆ, ಕರಿಷ್ಮಾ ಮಾಜಿ ಪತಿ ಸಂಜಯ್ ಅವರು ಇಂಗ್ಲೆಂಡ್‌ನಲ್ಲಿ ಪೋಲೋ ಆಡುತ್ತಿರುವ ವೇಳೆ, ಜೇನು ನೊಣವೊಂದು ಬಾಯಿಯ ಮೂಲಕ ಶ್ವಾಸನಾಳ-ಶ್ವಾಸಕೋಶಕ್ಕೆ ಹೋಗಿ, ಬಳಿಕ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಅಷ್ಟರಲ್ಲಾಗಲೇ ಸಂಜಯ್ ಅವರು ಅಸು ನೀಗಿದ್ದರು. ಈ ಆಕಸ್ಮಿಕ ಸಾವಿನಿಂದ ಕರಿಷ್ಮಾಕಪೂರ್ ಕುಟುಂಬವೂ ಸೇರಿದಂತೆ, ಹಾಲಿ ಪತ್ನಿ ಪ್ರಿಯಾ ಸಚ್‌ದೇವ್ ಹಾಗೂ ಮಕ್ಕಳು ತೀವ್ರ ದಿಗ್ಭ್ರಾಂತಿಗೆ ಒಳಗಾಗಿದ್ದಾರೆ. ಇದನ್ನರಿತ ಕರಿಷ್ಮಾ ಕಪೂರ್, ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರು ತಾವೇ ಮೂಂದೆ ನಿಂತು ಅಂತ್ಯಕ್ರಿಯೆ ಹಾಗೂ ಪ್ರಾರ್ಥನಾ ಸಭೆಯಲ್ಲಿ ಕೂಡ ಭಾಗಿಯಾಗಿದ್ದಾರೆ.

ಕರೀಷ್ಮಾ ಕಪೂರ್, ಕರೀನಾ ಹಾಗೂ ಕಪೂರ್ ಕುಟುಂಬದ ಈ ನಡೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತ್ಯಕ್ರಿಯೆ ಹಾಗು ಪ್ರಾರ್ಥನಾ ಸಭೆ ವೇಳೆ ನಟಿ ಹಾಗೂ ಮಾಜಿ ಪತ್ನಿ ಕರಿಷ್ಮಾ ಕಪೂರ್ ಅವರು ಹಾಲಿ ಪತ್ನಿ ಪ್ರಿಯಾ ಹಾಗೂ ಅವರ ಮಕ್ಕಳನ್ನು ಸಂತೈಸುತ್ತಿರುವ ದೃಶ್ಯ ಎಂಥವರ ಕರುಳನ್ನು ಕೂಡ ಹಿಂಡುವಂತಿತ್ತು. ಜೊತೆಗೆ, ಕರಿಷ್ಮಾ, ಕರೀನಾ ಹಾಗು ಸೈಫ್ ಅಲಿ ಖಾನ್ ಅವರು ಈ ನಡೆಯನ್ನು ಯಾರಾದರೂ ಮೆಚ್ಚಿ ತಲೆದೂಗಲೇ ಬೇಕು. ಈ ಸಂಗತಿಯೀಗ ಜಗತ್ತಿನ ಗಮನ ಸೆಳೆದಿದ್ದು, ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಮುಂದೆ ಕೂಡ ಈ ಎರಡು ಕುಟುಂಬಗಳೂ ಅನ್ಯೋನ್ಯವಾಗಿರಲಿ ಎಂದು ಹಲವರು ಹಾರೈಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್