
ಕೆಲವರು ಹಾಗೆನೇ. ಇದ್ದಕ್ಕಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಫೇಮಸ್ ಆಗಿಬಿಡುತ್ತಾರೆ. ಎಷ್ಟು ವರ್ಷ ಸಾಧನೆ ಮಾಡಿದ್ರೂ, ಏನೇನೋ ಕಷ್ಟಪಟ್ಟಿದ್ರೂ, ಎಷ್ಟೋ ಒಳ್ಳೆಯ ಕೆಲಸ ಮಾಡಿದ್ದರೂ ಮೂಲೆ ಗುಂಪಾಗಿ ಇರುವವರು ಒಂದೇ ಒಂದು ಫೋಟೋದಿಂದ ದೇಶ ಮಾತ್ರವಲ್ಲ... ಕೆಲವೊಮ್ಮೆ ವಿಶ್ವಖ್ಯಾತಿಯನ್ನು ಗಳಿಸಿಬಿಡುತ್ತಾರೆ. ಅದೇ ರೀತಿ ತಮ್ಮ ಒಂದೇ ಒಂದು ಫೋಟೋದಿಂದ ಈಗ ಎಲ್ಲರ ಗಮನ ಸೆಳೆದು ಹಾಲಿವುಡ್ನಿಂದಲೂ ಆಫರ್ ಗಳಿಸಿದ್ದಾರೆ ಅಸ್ಸಾಂನ ಪ್ರಸಿದ್ಧ ಮಾಡೆಲ್ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಅರ್ಚಿತಾ ಫುಕನ್. ಈಕೆ ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಡಾಲ್ ಆರ್ಚಿ ಎಂದೇ ಗುರುತಿಸಿಕೊಂಡಿದ್ದಾರೆ.
ಅಷ್ಟಕ್ಕೂ ಈಕೆ ಸಾಕಷ್ಟು ಅಭಿಮಾನಿಗಳನ್ನು ಈ ಮೊದಲೇ ಪಡೆದುಕೊಂಡಿದ್ದರೂ, ಇದೀಗ ರಾತ್ರೋರಾತ್ರಿ ಈ ಪರಿಯಲ್ಲಿ ಫೇಮಸ್ ಆಗಲು ಕಾರಣ, ಅವರ ಒಂದು ಫೋಟೋ. ಅದು ಅಮೆರಿಕದ ವಯಸ್ಕ ಚಲನಚಿತ್ರೋದ್ಯಮದ ಸೆಲೆಬ್ರಿಟಿ (Po*rn star) ಕೆಂಡ್ರಾ ಲಸ್ಟ್ ಎಂಬಾಕೆಯ ಜೊತೆಗಿನ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಇದು ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಈ ಫೋಟೋ ಅನ್ನು ಮಿಚಿಗನ್‌ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ, ಹಾಲಿವುಡ್ನಿಂದಲೂ ಈ ಫೋಟೋ ನೋಡಿ ಆಫರ್ ಕೂಡ ಬಂದಿದೆ ಎನ್ನುವ ಸುದ್ದಿ ಇದೆ. ಈ ಫೋಟೋದಲ್ಲಿ, ಬೇಬಿ ಡಾಲ್ ಆರ್ಚಿ ಮತ್ತು ಲಸ್ಟ್ ಒಟ್ಟಿಗೆ ನಿಂತಿರುವುದು ಕಂಡುಬರುತ್ತದೆ. ಇದನ್ನು ನೋಡಿದವರು, ಬೇಬಿ ಡಾಲ್ ಆರ್ಚಿ ವಯಸ್ಕ ಉದ್ಯಮಕ್ಕೆ ಸೇರಿದರೆ ಎನ್ನುವುದು ಸದ್ಯಕ್ಕಿರುವ ಚರ್ಚೆಯಷ್ಟೇ. ಅಷ್ಟಕ್ಕೂ ಈಕೆ ಪೋಸ್ಟ್ ಮಾಡುವ ಒಂದೊಂದು ಫೋಟೋ ನೋಡಿದರೆ ಸುಸ್ತಾಗೋದು ಗ್ಯಾರೆಂಟಿ. ಮೈಮೇಲೆ ವಿರಳಾತಿವಿರಳ ಬಟ್ಟೆ ಹಾಕಿಕೊಂಡೇ ಈಕೆ ಪೋಸ್ ಕೊಡುವುದು.
ಅಷ್ಟಕ್ಕೂ, ಅರ್ಚಿತಾ ಫುಕನ್ ಹಿಂದೆ ಒಂದು ನೋವಿನ ಕಥೆಯೂ ಇದೆ ಎಂದು ಅವರೇ ಹಿಂದೊಮ್ಮೆ ಬರೆದುಕೊಂಡಿದ್ದರು. . ತಾವು ಒಂದು ಕಾಲದಲ್ಲಿ ವೇಶ್ಯಾವಾಟಿಕೆಯ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದ್ದೆ ಮತ್ತು ಆ ನರಕದಿಂದ ಹೊರಬರಲು ಮತ್ತು ತನ್ನದೇ ಸ್ವಾತಂತ್ರ್ಯವನ್ನು 25 ಲಕ್ಷ ರೂಪಾಯಿ ಕೊಟ್ಟು ಖರೀದಿಸಬೇಕಾಯಿತು ಎಂಬುದಾಗಿ ಹೇಳಿದ್ದರು. "ಭಾರತದ ವೇಶ್ಯಾವಾಟಿಕೆಯ ಕರಾಳ ಜಗತ್ತಿನಲ್ಲಿ ಸಿಲುಕಿ ಆರು ವರ್ಷಗಳ ಕಾಲ ನರಕ ಅನುಭವಿಸಿದೆ. ನನ್ನ ಸ್ವಾತಂತ್ರ್ಯಕ್ಕಾಗಿ ಸುಮಾರು 25 ಲಕ್ಷ ರೂಪಾಯಿ ತೆರಬೇಕಾಯಿತು. ಅಂತಿಮವಾಗಿ, ನಾನು ಆ ಬಂಧನದಿಂದ ಮುಕ್ತಳಾಗುವಲ್ಲಿ ಯಶಸ್ವಿಯಾದೆ" ಎಂದು ಅವರು 2023ರಲ್ಲಿ ಬರೆದುಕೊಂಡಿದ್ದರು.
ಆದರೆ ಇದೀಗ ಈ ಫೋಟೋದಿಂದ ರಾತ್ರೋರಾತ್ರಿ ಮತ್ತಷ್ಟು ಫೇಮಸ್ ಆಗಿರೋ ನಟಿಗೆ ಈಗ 8 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ. ವಯಸ್ಕ ಉದ್ಯಮಕ್ಕೆ ಸೇರುವ ಬಗ್ಗೆ ನೇರವಾಗಿ ಈಕೆ ಮಾತನಾಡಲಿಲ್ಲವಾದರೂ "ಕೆಲವು ಮಾರ್ಗಗಳು ಖಾಸಗಿಯಾಗಿರುತ್ತವೆ. ಕೆಲವು ನಡೆಗಳು ಕಾರ್ಯತಂತ್ರದ್ದಾಗಿರುತ್ತವೆ" ಎಂದು ಅವರು ನಿಗೂಢ ಪೋಸ್ಟ್‌ನಲ್ಲಿ ಬರೆದಿದ್ದಾರೆ. "ಮೌನಕ್ಕೆ ಪದಗಳಿಗೆ ಇಲ್ಲದ ಶಕ್ತಿ ಇದೆ" ಎಂದೂ ಹೇಳುವ ಮೂಲಕ ಇನ್ನಷ್ಟು ಪುಷ್ಟಿ ನೀಡಿದ್ದಾರೆ. ಅಷ್ಟಕ್ಕೂ ಆರ್ಚಿತಾ ಫೇಮಸ್ ಆಗಿದ್ದು, ಕೇಟ್ ಲಿನ್ ಅವರ 'ಡೆಮ್ ಅನ್ ಗರ್' ಹಾಡಿನ ಇನ್‌ಸ್ಟಾಗ್ರಾಮ್ ರೀಲ್ ಇಂಟರ್ನೆಟ್‌ನಲ್ಲಿ ವೈರಲ್ ಆದಾಗ. ಅವರ ರೀಲ್ ಸಾಕಷ್ಟು ಗಮನ ಸೆಳೆದಿತ್ತು ಮತ್ತು ಇತರ ಅನೇಕ ಪ್ರಭಾವಿಗಳಿಗೆ ಸ್ಫೂರ್ತಿ ನೀಡಿತ್ತು. ಆದರೆ ಇದೀಗ ಈ ಮೂಲಕ ಫೇಮಸ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.