ಡೀಪ್‌ಫೇಕ್ ವಿಡಿಯೋ ವೈರಲ್ ಆದ್ಮೇಲೆ ಏನು ಮಾಡಬೇಕು? ಹರ್ಷಿಕಾ-ತನಿಶಾ ಕೊಟ್ಟ ಸಲಹೆ ವೈರಲ್

Published : May 24, 2026, 11:27 PM IST
Harshika Poonacha

ಸಾರಾಂಶ

ರಶ್ಮಿಕಾ ಮಂದಣ್ಣ ಅವರು ಡೀಪ್‌ಫೇಕ್‌ಗೆ ತುತ್ತಾಗಿದ್ದರು. ಈಗ ರುಕ್ಮಿಣಿ ವಸಂತ್‌ ಅವರನ್ನು ಎಐ ಮೂಲಕ ಬಿಕಿಯಲ್ಲಿ ತೋರಿಸಿದ್ದಾರೆ. ಇಂಥ ಡಿಜಿಟಲ್‌ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ನಟಿಯರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

ಇಲ್ಲಿವರೆಗೂ ಟ್ರೋಲ್‌, ಮೀಮ್ಸ್‌ಗಳ ಮೂಲಕ ಸಿನಿಮಾ ನಟಿಯರನ್ನು ಗುರಿಯಾಗಿಸಿಕೊಂಡಿದ್ದ ಡಿಜಿಟಲ್‌ ಕಳ್ಳಾಟಗರಿಗೆ ಈಗ ಎಐ ವರವಾಗಿ ಪರಿಣಮಿಸಿದೆ. ಅಸಲಿ ಯಾವುದು, ನಕಲಿ ಯಾವುದು ಎಂದು ಕಂಡು ಹಿಡಿಯಲಾಗದ ಮಟ್ಟಕ್ಕೆ ಎಐ ವಿಡಿಯೋಗಳನ್ನು ಸೃಷ್ಟಿಸುವ ಮೂಲಕ ನಟಿಯರ ಖಾಸಗಿ ಜೀವನಕ್ಕೆ ಕನ್ನ ಹಾಕುತ್ತಿದ್ದಾರೆ. ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅವರು ಡೀಪ್‌ಫೇಕ್‌ಗೆ ತುತ್ತಾಗಿದ್ದರು. ಈಗ ರುಕ್ಮಿಣಿ ವಸಂತ್‌ ಅವರನ್ನು ಎಐ ಮೂಲಕ ಬಿಕಿಯಲ್ಲಿ ತೋರಿಸಿದ್ದಾರೆ. ಇಂಥ ಡಿಜಿಟಲ್‌ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ನಟಿಯರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

ಈ ನಾಲ್ಕು ಕೆಲಸಗಳನ್ನು ಮಾಡಬೇಕಿದೆ: ಹರ್ಷಿಕಾ ಪೂಣಚ್ಚ

1. ಅಸಭ್ಯ ವಿಡಿಯೋ, ಫೋಟೋಗಳು ಡಿಜಿಟಲ್‌ ಜಗತ್ತಿನಲ್ಲಿ ವೈರಲ್‌ ಆದ ಮೇಲೆ ಮಾತನಾಡುವುದಕ್ಕಿಂತ ಮೊದಲೇ ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಎಐ, ಡೀಫೇಕ್‌ ಎಂಬುದು ಕೋವಿಡ್‌ ರೀತಿ ಹರಡುತ್ತಿರುವ ತಾಂತ್ರಿಕ ರೋಗ. ನಮ್ಮ ಫೋಟೋಗಳಿಗೆ ಕೆಟ್ಟ ಕಾಮೆಂಟ್ ಮಾಡುವವರು, ಅಸಭ್ಯ ಫೋಟೋಗಳನ್ನು ಶೇರ್‌ ಮಾಡುವವರಿಗೆ ಸೋಷಿಯಲ್‌ ಮೀಡಿಯಾದಲ್ಲೇ ತಕ್ಕ ಉತ್ತರ ಕೊಡಬೇಕು. ಅವರ ವರ್ಜಿನಲ್‌ ಅಕೌಟ್‌ಗೆ ಹೋಗಿ ಅವರ ಫೋಟೋಗಳ ಸಮೇತ ಅವರ ಕೆಲಸವನ್ನು ಬಹಿರಂಗ ಮಾಡಬೇಕು. ನಂತರ ಅವರನ್ನು ಬ್ಲಾಕ್‌ ಮಾಡಬೇಕು. ನಮ್ಮ ಅಕೌಂಟ್‌ನಿಂದ ಮಾತ್ರವಲ್ಲ ಬೇರೆ ಅಕೌಂಟ್‌ಗಳ ಮೂಲಕ ಬರಕ್ಕೂ ಆಗದ ರೀತಿಯಲ್ಲಿ ಬ್ಲಾಕ್‌ ಮಾಡುವ ಸೆಟ್ಟಿಂಗ್ಸ್‌ ಇವೆ. ಹೀಗೆ ಅಂಥ ಅಕೌಂಟ್‌ಗಳನ್ನು ಬ್ಲಾಕ್‌ ಮಾಡುತ್ತಾ ಹೋದರೆ ಅವರನ್ನು ಸೋಷಿಯಲ್‌ ಮೀಡಿಯಾದಿಂದಲೇ ದೂರ ಇಟ್ಟಂತಾಗುತ್ತದೆ. ಜೊತೆಗೆ ಅವರ ಫೋಟೋಗಳನ್ನು ಬಹಿರಂಗ ಮಾಡಿದರೆ ಅವರೂ ಮಾನ- ಗೌರವಕ್ಕೆ ಅಂಜುತ್ತಾರೆ.

2. ನಟಿಯರು ಮಾತ್ರವಲ್ಲ, ಸಾಮಾನ್ಯ ಹೆಣ್ಣು ಮಕ್ಕಳು ಕೂಡ ಸೋಷಿಯಲ್‌ ಮೀಡಿಯಾಗೆ ಬಂದಾಗ ಹಾಕುವ ಫೋಟೋ, ವಿಡಿಯೋ ಪೋಸ್ಟ್‌ಗಳಿಗೆ ಬರುವ ಕಾಮೆಂಟ್‌ಗಳನ್ನು ಆರಂಭದ ದಿನಗಳಲ್ಲೇ ಗಮನಿಸಿ. ಯಾರೋ ಅಸಭ್ಯವಾಗಿ ಕಾಮೆಂಟ್‌ ಮಾಡಿರುತ್ತಾರೋ ಅಂಥವನ್ನು ಪತ್ತೆ ಹಚ್ಚಿ ನಿಮ್ಮ ಅಕೌಂಟ್‌ಗಳಿಂದ ದೂರ ಮಾಡಿ. ಕೆಲವು ಪದಗಳನ್ನು ಬಳಸಿ ಕಾಮೆಂಟ್‌ ಮಾಡಲು ಆಗದ ರೀತಿಯಲ್ಲಿ ಸೆಟ್ಟಿಂಗ್ಸ್‌ ಇದ್ದಾವೆ. ಅದನ್ನು ಮೊದಲ ಮಾಡಿಕೊಳ್ಳಬೇಕು. ಆರಂಭದಲ್ಲಿ ಕಾಮೆಂಟ್ಸ್‌, ಲೈಕ್ಸ್‌ಗಾಗಿ ಅವರನ್ನು ಹಾಗೆ ಬಿಟ್ಟರೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ.

3. ನಟಿಯರು ಡೀಫೇಕ್‌, ಎಐಗೆ ತುತ್ತಾದಾಗ ಅವರಿಗೆ ಚಿತ್ರೋದ್ಯಮ ಕಾನೂನಿ ನೆರವು ಕೊಡಿಸಬಹುದೆ ಹೊರತು, ಬೇರೆ ಏನೂ ಮಾಡಕ್ಕಾಗಲ್ಲ. ಚಿತ್ರರಂಗಕ್ಕೆ ಇಂಥ ವಿಷಯಗಳ ಬಗ್ಗೆ ಗಮನ ಕೊಡುವುದಕ್ಕಿಂತ ಚಿತ್ರರಂಗದಲ್ಲಿ ಒಳ್ಳೆಯ ಕಂಟೆಂಟ್‌ ಸಿನಿಮಾಗಳು ಬರುವಂತೆ ಮಾಡಬೇಕು. ವಲ್ಗರ್‌, ವೈಲೆನ್ಸ್‌ ಕಂಟೆಂಟ್‌ ಸಿನಿಮಾಗಳನ್ನು ಆದಷ್ಟು ಕಡಿಮೆ ಮಾಡಿಸಬೇಕು. ಚಿತ್ರರಂಗದಲ್ಲಿ ಒಳ್ಳೆಯ ವಿಷಯಗಳು ನಡೆಯುತ್ತಿದ್ದಾಗ ಇಂಥ ಡಿಜಿಟಲ್‌ ಕಳ್ಳರಿಗೆ ಮಹತ್ವ ಸಿಗಲ್ಲ.

4. ಚಿತ್ರರಂಗ, ನಾವು ತೆಗೆದುಕೊಳ್ಳುವ ಮುನ್ನಚ್ಚರಿಕೆಗಳ ಜೊತೆಗೆ ಸರ್ಕಾರ ಕೂಡ ಕೆಲವು ನಿಯಮಗಳನ್ನು ರೂಪಿಸಬೇಕಿದೆ. ಸಿನಿಮಾಗಳಿಗೆ ಸೆನ್ಸಾರ್‌ ಇರುವಂತೆ ಸೋಷಿಯಲ್‌ ಮೀಡಿಯಾ ಪ್ರಚಾರದ ಪೇಜ್‌ಗಳಿಗೆ ಸೆನ್ಸಾರ್‌ ಹಾಕಬೇಕಿದೆ. ಅದರಲ್ಲೂ ಸೆಲೆಬ್ರಿಟಿಗಳ ಫೋಟೋ, ವಿಡಿಯೋ, ಸುದ್ದಿಗಳನ್ನೇ ಅಪ್‌ಲೋಡ್‌ ಮಾಡುವ ಪೇಜ್‌ಗಳಿಗೆ ಸೆನ್ಸಾರ್‌ ಬೇಕಿದೆ.

ಮೊದಲು ನಾವು ಅಂಜಿಕೆ ಬಿಡಬೇಕಿದೆ: ತನಿಶಾ ಕುಪ್ಪಂಡ

ನಾನು ಇಂಥದ್ದೇ ಅಸಭ್ಯ ಹಾಗೂ ಕೆಟ್ಟ ಕಾಮೆಂಟ್‌ಗಳಿಗೆ ತುತ್ತಾಗಿದ್ದೇನೆ. ಫೋಟೋಗ್ರಫಿ ಮಾಡುತ್ತೇನೆಂದು ಬಂದ ವ್ಯಕ್ತಿ ನನ್ನ ಬಗ್ಗೆ ಮಾತನಾಡಿರುವ ಕಾಮೆಂಟ್‌ಗಳನ್ನು ಸ್ಕ್ರೀನ್‌ ಶೇರ್‌ ಮಾಡಿಕೊಂಡು ಅಲ್ಲೇ ಆತನಿಗೆ ಬುದ್ಧಿ ಕಲಿಸಿದ್ದೇನೆ. ಉಳಿದವರು ಇದೇ ಕೆಲಸ ಮಾಡಬೇಕಿದೆ. ನಮ್ಮ ಅಸಭ್ಯ, ಕೆಟ್ಟ ಮತ್ತು ವಲ್ಗರ್‌ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುವವರಿಗೆ, ಕಾಮೆಂಟ್‌ ಮಾಡುವವರಿಗೆ ಅಲ್ಲೇ ಉತ್ತರ ಕೊಡುವ ವಿಚಾರದಲ್ಲಿ ನಾವು ಯಾರಿಗೂ ಅಂಜಬಾರದು. ನಾವು ಗೌರವ, ಪ್ರತಿಷ್ಠೆಗೆ ಹೆದರಿ ಸುಮ್ಮನಾದರೆ ಅವರನ್ನು ಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ. ಕೊನೆಗೊಂದು ದಿನ ರೇಣುಕಾ ಸ್ವಾಮಿ ಪ್ರಕರಣ ಆದಾಗ ‘ಅಯ್ಯೋ ನನಗೂ ಹೀಗೆ ಕಾಮೆಂಟ್‌ ಮಾಡಿದರು’ ಅಂತ ಹೇಳೋ ಬದಲು ಮೊದಲೇ ಅಂಥವರು ಬೆಳೆಯದಂತೆ ನೋಡಿಕೊಳ‍್ಳಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

DON 3 Controversy: ರಣವೀರ್ ಸಿಂಗ್ ವಿರುದ್ಧ ತಿರುಗಿ ಬಿದ್ದ ಫರ್ಹಾನ್ ಅಖ್ತರ್; ಇರ್ತಾರಾ ಇಲ್ವಾ 'ಧುರಂಧರ್' ನಟ?
Kiss: ಯಶ್ ಮೇಲೆ UP ಸುಂದರಿಗೆ ಲವ್.. ರಾಕಿಂಗ್ ಸ್ಟಾರ್ ಕಟೌಟ್‌ಗೆ ಕಿಸ್ ಕೊಟ್ಟ ಲೇಡಿ ಫ್ಯಾನ್; ವಿಡಿಯೋ ವೈರಲ್!