
ಹಲವು ಸಿನಿಮಾ ನಟಿಯರದ್ದು ಒಂದು ರೀತಿಯ ಹುಚ್ಚು. ಎಲ್ಲಾ ಕಾಣಿಸೋ, ಅಡಿಯಿಂದ ಮುಡಿಯವರೆಗೆ ಧಾರಾಳ ಪ್ರದರ್ಶನ ಆಗುವಂಥ ಡ್ರೆಸ್ ಹಾಕಿಕೊಂಡು ಬರುವುದು, ಬಳಿಕ ಅದನ್ನು ಮೇಲೆ ಕೆಳಗೆ ಎಳೆದುಕೊಳ್ಳುತ್ತಲೇ ಇರುವುದು. ಇದೊಂದು ರೀತಿಯಲ್ಲಿ ಬೇರೆಯವರ ಗಮನ ಸೆಳೆಯುವ ತಂತ್ರವೋ ಏನೋ ಎನ್ನುವಷ್ಟರ ಮಟ್ಟಿಗೆ ಅಸಹ್ಯ ಎನ್ನಿಸುವುದು ಉಂಟು. ಲಕ್ಷ ಲಕ್ಷ ಕೊಟ್ಟು ತುಂಡುಡುಗೆ ಹಾಕುವ ನಟಿಯರು ಈ ರೀತಿ ಮಾಡುವುದು ಏಕೆ ಎನ್ನುವುದೇ ಪ್ರಶ್ನಾರ್ಹ ಎನ್ನಿಸುವುದು ಉಂಟು. ಹೀಗೆ ಮಾಡಿದ್ರೆ ಅವು ಟ್ರೋಲ್ ಪೇಜ್ನಲ್ಲಿ ಹೈಲೈಟ್ ಆಗಿ, ಇನ್ನಷ್ಟು ಫೇಮಸ್ ಆಗುವ ಹಂಬಲ ಇದ್ದರೂ ಇರಬಹುದು ಎನ್ನುವುದು ಉಂಟು.
ಇದೀಗ ಅಂಥದ್ದೇ ಒಂದು ಅಸಂಬದ್ಧ ಎನ್ನಿಸುವ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ, ಸ್ಲಿಟ್ ಡ್ರೆಸ್ ಹಾಕಿದ್ದಾರೆ. ಕೆಳಗಿನ ಭಾಗದಲ್ಲಿಯೂ ಪ್ರದರ್ಶನ, ಮೇಲಿನ ಭಾಗದಲ್ಲಿಯೂ ಪ್ರದರ್ಶನ. ಈ ರೀತಿಯ ಡ್ರೆಸ್ ಹಾಕಿಕೊಂಡು ಪ್ರೆಸ್ಮೀಟ್ನಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇರುವುದು ತಿಳಿದೇ ಈ ರೀತಿಯ ಡ್ರೆಸ್ ಹಾಕಿರುವುದಂತೂ ಕನ್ಫರ್ಮ್. ಆದರೆ ವೇದಿಕೆಯ ಮೇಲೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತ ನಟಿಗೆ ಏನೋ ಕಸಿವಿಸಿ ಆದಂತಿದೆ.
ಕೆಳಗೆ, ಮೇಲೆ ಎಲ್ಲಾ ಕಡೆ ಡ್ರೆಸ್ ಎಳೆದುಕೊಳ್ಳುವುದೇ ಕೆಲಸ ಆಗಿದೆ. ಪ್ರೆಸ್ಮೀಟ್ಗೆ ಬಂದಿದ್ದ ವಿಜಯ ದೇವರಕೊಂಡ ಅವರು ನೋಡಿ ನೋಡಿ ಸಾಕಾಯ್ತು. ಈ ನಟಿ ಉದ್ದೇಶಪೂರ್ವಕವಾಗಿ ಹೀಗೆಲ್ಲಾ ಮಾಡ್ತಿದ್ದಾರೋ, ಕಸಿವಿಸಿಯಾಗಿ ಮಾಡ್ತಿದ್ದಾರೋ ಪಾಪ ಆ ನಟನಿಗೆ ಹೇಗೆ ಗೊತ್ತಾಗಬೇಕು. ಆದರೂ ನೋಡುವಷ್ಟು ನೋಡಿ ಕೊನೆಗೆ ನಟಿಯ ಕಾಲನ್ನು ಇತ್ತ ಕಡೆ ಸರಿಸಿ ಸ್ಲಿಟ್ ಭಾಗ ಎದುರಿನ ಕ್ಯಾಮೆರಾ ಕಣ್ಣಿಗೆ ಬೀಳದಂತೆ ತಕ್ಕಮಟ್ಟಿಗೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ಮೇಲೆ ಹಾಕಿರುವ ತುಂಡುಡುಗೆಯನ್ನೂ ನಟಿ ಎಳೆದುಕೊಳ್ಳುತ್ತಲೇ ಇದ್ದರು. ಏಕೆಂದರೆ, ಅಲ್ಲಿಂದಲೂ ಅವರ ದೇಹ ಧಾರಾಳ ಪ್ರದರ್ಶನ ಆಗುತ್ತಿತ್ತು. ವಿಜಯ ದೇವರಕೊಂಡ ಅದನ್ನೂ ನೋಡಿದರು. ಆದರೆ ಅವರಿಗೆ ಅಲ್ಲಿ ಏನೂ ಮಾಡಲು ಆಗಲಿಲ್ಲ. ಇಲ್ಲದಿದ್ದರೆ ಅದನ್ನೂ ಎಳೆದು ಸರಿ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಪತ್ರಕರ್ತರ ಕ್ಯಾಮೆರಾ ಕಣ್ಣುಗಳು ಅಲ್ಲೇ ಇದ್ದವಲ್ಲ, ಆದ್ದರಿಂದ ತಕ್ಕಮಟ್ಟಿಗೆ ನಟಿಯ ಮರ್ಯಾದೆ (?) ಕಾಪಾಡುವಲ್ಲಿ ನಟ ಯಶಸ್ವಿಯಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಲೇ ನೆಟ್ಟಿಗರು ನಟಿಗೆ ಹಿಗ್ಗಾಮುಗ್ಗ ಬೈದಿದ್ದರೆ, ನಟನ ಈ ಕ್ರಿಯೆಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.