
Vijay Deverakonda talked about his personal life during Romanchakam movie promotions- ವಿಜಯ್ ದೇವರಕೊಂಡ ಲವ್, ಬ್ರೇಕಪ್ ಮತ್ತು ಮದುವೆ ಸೀಕ್ರೆಟ್ಸ್ ಔಟ್ ಆಯ್ತು!
ಟಾಲಿವುಡ್‌ನ 'ರೌಡಿ ಬಾಯ್' ವಿಜಯ್ ದೇವರಕೊಂಡ ಅಂದ್ರೆ ಸಾಕು, ಹುಡುಗಿಯರ ಹಾರ್ಟ್ ಬೀಟ್ ಜಾಸ್ತಿ ಆಗುತ್ತೆ. ತೆರೆಯ ಮೇಲೆ 'ಅರ್ಜುನ್ ರೆಡ್ಡಿ'ಯಾಗಿ ಎಣ್ಣೆ ಹೊಡೆಯುತ್ತಾ, ರಗಡ್ ಆಗಿ ಕಾಣಿಸಿಕೊಂಡಿದ್ದ ಈ ನಟ, ಈಗ ನಿಜ ಜೀವನದಲ್ಲಿ ಸದ್ದಿಲ್ಲದೆ ದೊಡ್ಡ ನಿರ್ಧಾರವೊಂದನ್ನು ತಗೆದುಕೊಂಡಿದ್ದಾರೆ. ಹೌದು, ವಿಜಯ್ ದೇವರಕೊಂಡ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ! ಇತ್ತೀಚೆಗೆ ನಡೆದ ಸಿನಿಮೀಯ ಕಾರ್ಯಕ್ರಮವೊಂದರಲ್ಲಿ ವಿಜಯ್ ಬಿಚ್ಚಿಟ್ಟ ಸೀಕ್ರೆಟ್‌ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿವೆ.
'ರೋಮಾಂಚಕಂ' ಚಿತ್ರದ ಪ್ರಚಾರದ ವೇಳೆ ವಿಜಯ್ ದೇವರಕೊಂಡ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ ಬಾಂಬ್ ಸಿಡಿಸಿದ್ದಾರೆ. "ನಾನು ಕುಡಿಯುವುದನ್ನ ಬಿಟ್ಟುಬಿಟ್ಟಿದ್ದೇನೆ" ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಒಂದು ಕಾಲದಲ್ಲಿ ಜೇಬಿನಲ್ಲಿ ಕಾಸು ಇರಲಿ ಬಿಡಲಿ, ಬ್ಲೆಂಡರ್ಸ್ ಪ್ರೈಡ್‌ನಿಂದ ಹಿಡಿದು ಗ್ಲೆನ್‌ಫಿಡ್ಡಿಚ್‌ವರೆಗೂ ಸಾಕಷ್ಟು ಬ್ರ್ಯಾಂಡ್ ಮದ್ಯವನ್ನು ಟೇಸ್ಟ್ ಮಾಡಿದ್ದ ವಿಜಯ್, ಈಗ ಯಾಕೆ ಈ ನಿರ್ಧಾರ ತಗೆದುಕೊಂಡರು ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. ಅರ್ಜುನ್ ರೆಡ್ಡಿ ಪಾತ್ರದ ಮೂಲಕ ಕುಡಿತದ ಕ್ರೇಜ್ ಹುಟ್ಟಿಸಿದ್ದ ನಟನೇ ಈಗ ಮದ್ಯಪಾನ ತ್ಯಜಿಸಿರುವುದು ನಿಜಕ್ಕೂ ರೋಮಾಂಚನಕಾರಿ ಬದಲಾವಣೆ ಅಲ್ವಾ?
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ, ಆದರ್ಶ ದಾಂಪತ್ಯದಲ್ಲಿ ಸ್ಟಾರ್ ಜೋಡಿ!
ಇದೇ ಕಾರ್ಯಕ್ರಮದಲ್ಲಿ ವಿಜಯ್ ಆಡಿದ ಈ ಮಾತು ಚರ್ಚೆಗೆ ಕಾರಣವಾಗಿದೆ. "ನಾನು ಪ್ರೀತಿಸಿದೆ, ಬ್ರೇಕಪ್ ಆಯ್ತು, ನನ್ನ ಎದೆ ಒಡೆಯಿತು... ಮತ್ತು ಈಗ ನಾನು ಮದುವೆಯಾದೆ!" ಎಂದು ಹೇಳಿದ್ದಾರೆ. ವಿಜಯ್ ಅವರು ತಮ್ಮ ಮೊದಲ ಲವ್, ಬ್ರೇಕಪ್ ಬಗ್ಗೆ ಇಷ್ಟು ಓಪನ್ ಆಗಿ ಮಾತನಾಡಿದ್ದು ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ. ಆದರೆ, ವಿಜಯ್ ಅವರ ಮೊದಲ ಲವ್-ಬ್ರೇಕಪ್ ಹಾಗೂ ರಶ್ಮಿಕಾ ಅವರದೂ ಮೊದಲ ಲವ್-ಬ್ರೇಕಪ್‌ಗೆ ಇಡೀ ಜಗತ್ತಿಗೇ ಗೊತ್ತಿದೆ. ಹೀಗಿರುವಾಗ, ವಿಜಯ್ ದೇವರಕೊಂಡ ಅವರು ಈ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದರಲ್ಲಿ ತಪ್ಪೇನೂ ಇಲ್ಲ. ಅದು ಅವರ ಜೀವನ, ಅವರ ಮಾತಿನಲ್ಲಿ ಜೀವನದ ಎಲ್ಲಾ ಏಳುಬೀಳುಗಳನ್ನು ಅನುಭವಿಸಿದ ಪಕ್ವತೆ ಎದ್ದು ಕಾಣುತ್ತಿತ್ತು.
ವಿಜಯ್ ದೇವರಕೊಂಡ ಹೆಸರು ಬಂದ ಮೇಲೆ ಅಲ್ಲಿ 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಹೆಸರು ಬರಲೇಬೇಕು. 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಈಗ 'ರಣಬಾಲಿ' ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸಲು ಸಜ್ಜಾಗಿದೆ. ಆದರೆ, ಹ್ಯಾಟ್ರಿಕ್ ಜೋಡಿ' ಆಗುವ ಮೊದಲು ಈ ಜೋಡಿ ಮದುವೆ ಕೂಡ ಆಗಿದ್ದಾರೆ ಅನ್ನೋದು ವಿಶೇಷ!
ಅಕ್ಟೋಬರ್ 16ಕ್ಕೆ 'ರಣಬಾಲಿ' ಹವಾ!
ವಿಜಯ್ ಮತ್ತು ರಶ್ಮಿಕಾ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ 'ರಣಬಾಲಿ' ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಅಬ್ಬರಿಸಲಿದೆ. ಟಿ-ಸೀರೀಸ್ ಈ ಚಿತ್ರವನ್ನು ಅದ್ಧೂರಿಯಾಗಿ ಪ್ರೆಸೆಂಟ್ ಮಾಡುತ್ತಿದ್ದು, ವಿಜಯ್ ಲೈಫ್‌ನ ಈ ಹೊಸ 'ರೋಮಾಂಚನ' ಚಿತ್ರಮಂದಿರಗಳಲ್ಲಿ ಹೇಗೆ ವರ್ಕೌಟ್ ಆಗಲಿದೆ ಅನ್ನೋದನ್ನ ಕಾದು ನೋಡಬೇಕು.
ಒಟ್ಟಿನಲ್ಲಿ, ಲವ್, ಬ್ರೇಕಪ್, ಕುಡಿತ ಬಿಟ್ಟ ವಿಚಾರ ಮತ್ತು ಮದುವೆ ಬಗೆಗಿನ ವೈಯಕ್ತಿಕ ವಿಷಯಗಳ ಓಪನ್ ಟಾಕ್ ಮೂಲಕ ನಟ ವಿಜಯ್ ದೇವರಕೊಂಡ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಸದ್ಯಕ್ಕೆ ವಿಜಯ್ ಹಾಗೂ ರಶ್ಮಿಕಾ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.