ವಿಜಯ್ ದೇವರಕೊಂಡಗೆ ನಾನಿ ಸಾಥ್: ಪೌರಾಣಿಕ ಹಿನ್ನೆಲೆಯ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ದಂಡು!

Published : Apr 21, 2026, 04:28 PM IST
Vijay Deverakonda

ಸಾರಾಂಶ

'ಹಾಯ್ ನಾನ್ನ' ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಶೌರ್ಯುವ್ ಜೊತೆ ವಿಜಯ್ ದೇವರಕೊಂಡ ಕೈಜೋಡಿಸಿದ್ದು, ಈ ಹೊಸ ಗ್ಲೋಬಲ್ ಪ್ರಾಜೆಕ್ಟ್‌ಗೆ ಹೈದರಾಬಾದ್‌ನಲ್ಲಿ ಚಾಲನೆ ಸಿಕ್ಕಿದೆ. ನಾನಿ ಮೊದಲ ಶಾಟ್‌ಗೆ ಕ್ಲ್ಯಾಪ್.

ಟಾಲಿವುಡ್‌ನ ಯುವ ನಟ ವಿಜಯ್ ದೇವರಕೊಂಡ ತಮ್ಮ ವೃತ್ತಿಜೀವನದ ಅತಿದೊಡ್ಡ ಚಿತ್ರಕ್ಕೆ ಸಜ್ಜಾಗಿದ್ದಾರೆ. ಈ ಗ್ಲೋಬಲ್ ಪ್ರಾಜೆಕ್ಟ್‌ನ ಪೂಜಾ ಕಾರ್ಯಕ್ರಮ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆಯಿತು. 'ಹಾಯ್ ನಾನ್ನ' ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಶೌರ್ಯುವ್ ಈ ಸಿನಿಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಭಾರತೀಯ ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಪ್ರಯತ್ನ ಇದಾಗಿದೆ.

ನಟ ನಾನಿ ಮೊದಲ ಶಾಟ್‌ಗೆ ಕ್ಲ್ಯಾಪ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು. ವೈರಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಅನೌನ್ಸ್‌ಮೆಂಟ್ ಪೋಸ್ಟರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಚಿತ್ರದ ತಾಂತ್ರಿಕ ಬಳಗವನ್ನು ಪರಿಚಯಿಸಿದ ಪೋಸ್ಟರ್, ಸಿನಿಪ್ರಿಯರಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಹಾಲಿವುಡ್‌ನ ಜನಪ್ರಿಯ ಪ್ರಾಜೆಕ್ಟ್‌ಗಳಾದ 'ಹೌಸ್ ಆಫ್ ದಿ ಡ್ರಾಗನ್' ಮತ್ತು 'ಫಾಲ್‌ಔಟ್' ನಲ್ಲಿ ಕೆಲಸ ಮಾಡಿದ ಅಲೆಹಾಂಡ್ರೋ ಮಾರ್ಟಿನೆಜ್ ಕ್ಯಾಮೆರಾಮ್ಯಾನ್ ಆಗಿದ್ದಾರೆ.

ಹಾಲಿವುಡ್ ತಂತ್ರಜ್ಞರ ದಂಡು!

ಇನ್ನು 'ಗಾಡ್ಸ್ ಆಫ್ ಈಜಿಪ್ಟ್', 'ಬ್ಯಾಟ್‌ಮ್ಯಾನ್ ಫಾರೆವರ್' ಮತ್ತು 'ಸ್ನೋಪಿಯರ್ಸರ್' ನಂತಹ ಬ್ಲಾಕ್‌ಬಸ್ಟರ್‌ಗಳಿಗೆ ಕೆಲಸ ಮಾಡಿದ ಎರಿಕ್ ಡರ್ಸ್ಟ್ ವಿಎಫ್‌ಎಕ್ಸ್ ಸೂಪರ್‌ವೈಸರ್ ಆಗಿ ತಂಡ ಸೇರಿದ್ದಾರೆ. 'ಅನಿಮಲ್', 'ಓಂ ಶಾಂತಿ ಓಂ' ಚಿತ್ರಗಳ ಖ್ಯಾತಿಯ ಸುರೇಶ್ ಸೆಲ್ವರಾಜನ್ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ. ಕನ್ನಡಿಗರಿಗೂ ಅಚ್ಚುಮೆಚ್ಚಿನ, ಮಲಯಾಳಿ ಮೂಲದ ಹಿಶಾಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಜೊತೆಗೆ, ಸಚಿನ್ ಲೋವಲೇಕರ್ ವಸ್ತ್ರ ವಿನ್ಯಾಸಕರಾಗಿ ಮತ್ತು ಪ್ರವೀಣ್ ಆಂಟನಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೌರಾಣಿಕ ಹಿನ್ನೆಲೆಯಲ್ಲಿ ಒಂದು ಹೊಸ ಜಗತ್ತನ್ನೇ ಸೃಷ್ಟಿಸುವ ಗುರಿಯೊಂದಿಗೆ ಈ ಸಿನಿಮಾ ತಯಾರಾಗುತ್ತಿದೆ. ಅದ್ಭುತ ದೃಶ್ಯ ವೈಭವ ಮತ್ತು ಅಂತರಾಷ್ಟ್ರೀಯ ದರ್ಜೆಯ ತಾಂತ್ರಿಕತೆಯೊಂದಿಗೆ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವುದು ಚಿತ್ರತಂಡದ ಉದ್ದೇಶ.

'ವಾರಣಾಸಿ', 'ರಾಕ' ದಂತಹ ಸಿನಿಮಾಗಳು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹಾಗೆ, ವಿಜಯ್ ದೇವರಕೊಂಡ-ಶೌರ್ಯುವ್ ಜೋಡಿಯ ಈ ಚಿತ್ರವೂ ಅದೇ ಹಾದಿಯಲ್ಲಿ ಒಂದು ದೊಡ್ಡ ಹೆಜ್ಜೆ ಇಡುತ್ತಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದ್ದು, ಸಿನಿ ರಸಿಕರು ಈಗಾಗಲೇ ಈ ಪ್ರಾಜೆಕ್ಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಪಿಆರ್‌ಒ ಆಗಿ ಪ್ರತೀಶ್ ಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Vaishak Death- Krishi Thapanda: ವೈಶಾಕ್ ಸಾವಿನ ಹಿನ್ನೆಲೆಯಲ್ಲಿ ಸುದ್ದಿಯಾಗಿರೋ ನಟಿ ಕೃಷಿ ತಾಪಂಡ ನಟಿಸಿದ ಸಿನಿಮಾಗಳು ಇವು!
ನವಿಲುಗರಿ ಕಾಂಟ್ರವರ್ಸಿ ಬಳಿಕ ಮತ್ತೊಮ್ಮೆ ಮಿಂಚಿದ ನಿವೇದಿತಾ ಗೌಡ