
ವಾಷಿಂಗ್‌ಟನ್ (ಡಿ.09): 15 ವರ್ಷದ ವಿದ್ಯಾರ್ಥಿಗೆ ನಗ್ನ ಫೋಟೋ ಕಳುಹಿಸಿದ ಆರೋಪದ ಮೇಲೆ ಮಿಸ್ ಕೆಂಟುಕಿ ಆಗಿ ಮಿಂಚಿದ್ದ ಅಮೆರಿಕದ ರೂಪದರ್ಶಿ ರಾಮ್ಸೇ ಬೇರ್ಸ್ ವಿರುದ್ಧ ಕೇಸ್ ದಾಖಲಾಗಿದೆ.
ದಕ್ಷಿಣ ವರ್ಜಿನಿಯಾದಲ್ಲಿ ರಾಮ್ಸೇ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಮ್ಸೇ ತಮ್ಮ ಮಾಜಿ ವಿದ್ಯಾರ್ಥಿಗೆ ಇತ್ತೀಚೆಗೆ ನಗ್ನ ಫೋಟೋ ಕಳುಹಿಸಿದ ವಿಚಾರ ಬಯಲಗೆ ಬಂದಿದೆ. ವಿದ್ಯಾರ್ಥಿ ಪಾಲಕರು ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ರೂಪದರ್ಶಿಯ ನಗ್ನ ಚಿತ್ರಗಳು ಪತ್ತೆಯಾಗಿದ ನಂತರ ಪಾಲಕರು ದೂರು ನೀಡಿದ್ದಾರೆ.
ಮಾಡೆಲ್ ಅನುಭವ, ಹೀಗೆ ಮಾಡಿದ್ರೆ ಸ್ತನದ ಗಾತ್ರ ಹೆಚ್ಚುತ್ತಾ!
ರಾಮ್ಸೇ ಕೂಡ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸ್ನಾಪ್ಚ್ಯಾಟ್ ಮೂಲಕ ವಿದ್ಯಾರ್ಥಿಗೆ ನಗ್ನ ಫೋಟೋ ಕಳುಹಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಶಾಲಾ ಮುಖ್ಯಸ್ಥರು ರಾಮ್ಸೇ ಪರವಾಗಿ ನಿಂತಿದ್ದು ವಿದ್ಯಾರ್ಥಿಗಳ ಜೊತೆ ಅವರು ಅನುಚಿತವಾಗಿ ನಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದೊಂದು ವಿಚಿತ್ರ ಪ್ರಕರಣ.. ಆದರೆ ರೂಪದರ್ಶಿಯೊಬ್ಬರು ಅಪ್ರಾಪ್ತ ಬಾಲಕನಿಗೆ ನಗ್ನ ಫೋಟೋ ಕಳಿಸಿದ್ದಾರೆ. ಈ ಆರೋಪದ ಮೇಲೆ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.