
ಮುಂಬೈ(ನ.27): ಕನ್ನಡದಲ್ಲಿ ಐರಾವತನ ರಾಣಿಯಾಗಿ ಮೆರೆದಿದ್ದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಅವರ ಸಹೋದರ ಸಂಬಂಧಿಯ ಮದುವೆಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ಆದರೆ ಅದು ನಟಿ ಎನ್ನುವ ಕಾರಣಕ್ಕಾಗಿ ಅಲ್ಲ. ಅದಕ್ಕೆ ಕಾರಣ ಅವರು ಉಟ್ಟಿದ್ದ ಸೀರೆ ಆಗಿತ್ತು. ಅವರು ಮದುವೆಯಲ್ಲಿ ಧರಿಸಿದ ಆ ಸೀರೆಯು ಬರೋಬ್ಬರಿ 40 ಕೆ.ಜಿ ಇದ್ದು, 55 ಲಕ್ಷ ರು. ಮೌಲ್ಯದ್ದಾಗಿತ್ತು. ಮದುವೆಯಲ್ಲಿ ಸೀರೆಯೇ ಊರ್ವಶಿಗಿಂತ ಹೆಚ್ಚು ಸುದ್ದಿ ಮಾಡಿತ್ತು.
ಈ ಸೀರೆ ತಯಾರಿಸಲು ಡಿಸೈನರ್ ಬರೋಬ್ಬರಿ 7 ತಿಂಗಳ ಕಾಲ ಸಮಯವನ್ನು ತೆಗೆದುಕೊಂಡಿದ್ದಾರಂತೆ. ವಿಶೇಷವಾಗಿದ್ದ ಸೀರೆಯು ಸಾಂಪ್ರದಾಯಿಕತೆಯ ಟಚ್'ನೊಂದಿಗೆ ಆಧುನಿಕತೆಗೆ ತಕ್ಕಂತೆ ತಯಾರಾಗಿತ್ತು. ಇದರಲ್ಲಿ ಬಂಗಾರದ ಜರಿಯಿಂದ ಎಂಬ್ರಾಯಿಡರಿಗಳನ್ನು ಮಾಡಲಾಗಿತ್ತು.
ಅಲ್ಲದೇ ಈ ಸೀರೆಯೊಂದಿಗೆ ಊರ್ವಶಿ ಅಂದವನ್ನು ಹೆಚ್ಚಿಸುವಲ್ಲಿ 28 ಲಕ್ಷ ರು. ಮೌಲ್ಯದ ಆಭರಣಗಳ ಪಾತ್ರವೂ ಕೂಡ ಹೆಚ್ಚಾಗಿಯೇ ಇತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.