ನಿಖಿಲ್'ಗೆ ಆ್ಯಕ್ಷನ್ ಕಟ್ ಹೇಳಲು ಕನ್ನಡದ ನಿರ್ದೇಶಕರು ರೆಡಿಯಾಗ್ತಿದ್ದಾರೆ

Published : Nov 27, 2017, 02:17 PM ISTUpdated : Apr 11, 2018, 12:53 PM IST
ನಿಖಿಲ್'ಗೆ ಆ್ಯಕ್ಷನ್ ಕಟ್ ಹೇಳಲು ಕನ್ನಡದ ನಿರ್ದೇಶಕರು ರೆಡಿಯಾಗ್ತಿದ್ದಾರೆ

ಸಾರಾಂಶ

ಇವಿಷ್ಟು ಸಿನಿಮಾಗಳ ಪೈಕಿ ಹರ್ಷ ಮೊದಲು ಕೈಗೆತ್ತಿಕೊಳ್ಳುವ ಸಿನಿಮಾ ಯಾವುದು ಎಂಬುದರ ಬಗ್ಗೆ ಸಹಜವಾದ ಕುತೂಹಲವಿದೆ. ‘

ಕನ್ನಡದ ನಿರ್ದೇಶಕರಿಂದ ಬಹುನಿರೀಕ್ಷಿತ ಚಿತ್ರ ‘ಅಂಜನಿ ಪುತ್ರ’ ರಿಲೀಸ್‌ಗೆ ರೆಡಿ ಆಗಿದೆ. ಶುಕ್ರವಾರವಷ್ಟೇ ಈ ಚಿತ್ರದ ಆಡಿಯೋ ಸಿಡಿ ಅದ್ಧೂರಿಯಾಗಿ ಲಾಂಚ್ ಆಗಿದೆ. ಇದರ ಬೆನ್ನಲ್ಲೇ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್ ಹೇಳಲಿರುವ ಹೊಸ ಸಿನಿಮಾದ ಬಗ್ಗೆ ಕುತೂಹಲ ಶುರುವಾಗಿದೆ. ಯಾಕಂದ್ರೆ, ಹರ್ಷ ಬತ್ತಳಿಕೆಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಸದ್ಯಕ್ಕೆ ಮೂರು ಸಿನಿಮಾಗಳು ಸಾಕಷ್ಟು ಸುದ್ದಿಯಲ್ಲಿವೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪುತ್ರ ನಿಖಿಲ್ ಅಭಿನಯದ ಚಿತ್ರಕ್ಕೂ ಹರ್ಷ ಅವರೇ ನಿರ್ದೇಶಕ. ಮತ್ತೊಂದೆಡೆ ‘ಮೈ ನೇಮ್ ಈಸ್ ಆಂಜಿ’ ಹೆಸರಿನ ಚಿತ್ರದೊಂದಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್- ಹರ್ಷ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್‌ಗೆ ಆ್ಯಕ್ಷನ್ ಕಟ್ ಹೇಳಬೇಕಿರುವ ‘ರಾಣಾ’ ಕೂಡ ಅವರ ಪಟ್ಟಿಯಲ್ಲಿದೆ.

ಇವಿಷ್ಟು ಸಿನಿಮಾಗಳ ಪೈಕಿ ಹರ್ಷ ಮೊದಲು ಕೈಗೆತ್ತಿಕೊಳ್ಳುವ ಸಿನಿಮಾ ಯಾವುದು ಎಂಬುದರ ಬಗ್ಗೆ ಸಹಜವಾದ ಕುತೂಹಲವಿದೆ. ‘ಸದ್ಯಕ್ಕೆ ಇಂಥದ್ದೇ ಸಿನಿಮಾ ಶುರುವಾಗುತ್ತಿದೆ ಅಂತ ಹೇಳುವುದು ಕಷ್ಟ. ಆದ್ರೆ, ಈಗಾಗಲೇ ಒಂದು ತೀರ್ಮಾನ ಆಗಿದೆ. ಆ ಪ್ರಕಾರ ಡಿಸೆಂಬರ್ ಮೊದಲ ವಾರದಿಂದ ನಿಖಿಲ್ ಕುಮಾರ್ ಅಭಿನಯದ ಹೊಸ ಚಿತ್ರ ಶುರುವಾಗಲಿದೆ. ಇದಾದ ನಂತರ ಮುಂದಿನ ಪ್ರಾಜೆಕ್ಟ್. ಒಂದು ಸಿನಿಮಾ ಮುಗಿಯುವ ತನಕ ಮತ್ತೊಂದು ಸಿನಿಮಾ ಶುರು ಮಾಡುವ ಅಭ್ಯಾಸ ನಂಗಿಲ್ಲ. ಒಂದು ಕೆಲಸಕ್ಕೆ ಪರಿಪೂರ್ಣತೆ ಸಿಗಬೇಕು. ಆ ನಂತರವೇ ಮತ್ತೊಂದು ಕೆಲಸ. ಹೀಗಾಗಿ ಒಂದೊಂದಾಗಿಯೇ ಹೊಸ ಸಿನಿಮಾಗಳು ಟೇಕಾಫ್ ಆಗಲಿವೆ’ ಎನ್ನುತ್ತಾರೆ ನಿರ್ದೇಶಕ ಹರ್ಷ.

ಅವರೀಗ ‘ಅಂಜನಿಪುತ್ರ’ದ ಗುಂಗಿನಲ್ಲಿದ್ದಾರೆ. ಎಂ. ಎನ್. ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೀರೋ. ‘ರಾಜಕುಮಾರ’ ಚಿತ್ರದ ಬಹು ದೊಡ್ಡ ಸಕ್ಸಸ್‌ನ ನಂತರ ತೆರೆ ಕಾಣುತ್ತಿರುವ ಚಿತ್ರವಿದು. ಪವರ್‌ಸ್ಟಾರ್ ಅಭಿಮಾನಿಗಳ ಕಾತರ ದುಪ್ಪಟ್ಟಾಗಿದೆ. ಇನ್ನು ನಿರ್ದೇಶಕ ಹರ್ಷ ಸಿನಿಮಾಗಳ ಬಗ್ಗೆ ಹೆಚ್ಚು ಹೇಳುವಂತಿಲ್ಲ. ಕ್ಲಾಸ್ ಕೋರಿಯೋಗ್ರಾಫರ್ ಎನ್ನುವುದರ ಜತೆಗೆ ಮಾಸ್ ನಿರ್ದೇಶಕ ಎನ್ನುವ ಖ್ಯಾತಿ ಅವರದು. ಫ್ಯಾಮಿಲಿ ಸೆಂಟಿಮೆಂಟ್ ಜತೆಗೇ ಮಾಸ್ ಆಡಿಯನ್ಸ್‌ಗೂ ಇಷ್ಟವಾಗುವ ರೀತಿ ಈ ಚಿತ್ರವನ್ನು ತೆರೆಗೆ ತಂದಿದ್ದಾರಂತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚೈತ್ರಾ ಕುಂದಾಪುರಗೆ ಮತ್ತೊಮ್ಮೆ ಕಾನೂನು ಸಂಕಷ್ಟ; ಅಪ್ಪನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ?
ಚಳಿ ಅಂತ ರಚಿತಾ ರಾಮ್‌ರನ್ನ ಅಲ್ಲಿಗೆ ಕರೆದುಕೊಂಡು ಹೋದ ದುನಿಯಾ ವಿಜಯ್.. ಏನಿದು ಹೊಸ ವಿಷ್ಯ?