
ಉದಯ ಟಿವಿಯಲ್ಲಿ ಪ್ರಸಾರವಾಗೋ 'ತುತ್ತಾ-ಮುತ್ತಾ' ರಿಯಾಲಿಟಿ ಶೋ ಹೆಸರು ಮಾಡುತ್ತಿದೆ. ಹಿರಿತೆರೆ ಹಾಗೂ ಕಿರುತೆರೆ ಸ್ಟಾರ್‌ಗಳು ಇದರಲ್ಲಿ ಮಿಂಚುತ್ತಿದ್ದಾರೆ. ಅಷ್ಟಕ್ಕೂ ಇದರಲ್ಲಿ ಪೈಪೋಟಿ ನಡೆಯುವುದು ಮಡದಿ ಹಾಗೂ ಅಮ್ಮನ ನಡುವೆ ಎಂಬುವುದು ವಿಶೇಷ.
ಈ ಶೋ ಅನ್ನು ಟಾಕಿಂಗ್ ಅ್ಯಂಡ್ ರಾಕಿಂಗ್ ನಿರಂಜನ್ ದೇಶಪಾಂಡೆ ನಿರೂಪಿಸುತ್ತಿದ್ದಾರೆ. ಒಂದು ಕಡೆ ಅಮ್ಮಂದಿರು ನಿಂತು ಉತ್ತರಿಸಿದರೆ, ಮತ್ತೊಂದೆಡೆ ಮಡದಿಯರು ನಿಂತು ಉತ್ತರಿಸುತ್ತಾರೆ. ಈ ಇಬ್ಬರ ನಡುವೆ ಗಂಡನಿರುತ್ತಾನೆ. 12 ಪ್ರಶ್ನೆಗಳಿದ್ದು, ಅವಕ್ಕೆ ಉತ್ತರಿಸಿದರೆ 12 ಲಕ್ಷ ರೂ. ಗೆಲ್ಲಬಹುದು. ಆದರೆ, ಅಪ್ಪಿ ತಪ್ಪಿ ತಪ್ಪು ಉತ್ತರಿಸಿದರೋ ನೆಗಟಿವ್ ಮಾರ್ಕ್ಸ್ ಇರಲಿದೆ. ಉತ್ತರ ತಪ್ಪಾದರೆ ಹಣ ಕಟ್ ಆಗುತ್ತದೆ.
ಈಗಾಗಲೇ ಇದರಲ್ಲಿ ಸಂಗೀತ ನಿರ್ದೇಶಕ ಗುರುಕಿರಣ, ಮಜಾ ಟಾಕೀಸ್ ಹಾಸ್ಯ ನಟ ಕುರಿ ಪ್ರತಾಪ್ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಈಗಾಗಲೇ ಈ ಶೋನಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ಆರಂಭವಾಗಿ, ಮೂರು ವಾರದೊಳಗೆ ಎಲ್ಲರ ಬಾಯಲ್ಲಿ ಇದರದ್ದೇ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.