ಅಲ್ಲು ಅರ್ಜುನ್‌ಗೆ ಹುಬ್ಬಳ್ಳಿ ಅಭಿಮಾನಿಯ ಅದ್ಭುತ ಗಿಫ್ಟ್.. ಸಿದ್ಧಾರೂಢರ ಮೂರ್ತಿಯನ್ನು ಹೇಗೆ ಇಸ್ಕೊಂಡ್ರು ನೋಡಿ!

Published : Jul 29, 2026, 04:43 PM IST
Allu Arjun

ಸಾರಾಂಶ

ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ನಟ ಅಲ್ಲು ಅರ್ಜುನ್‌ ಅವರಿಗಿಘ ಶ್ರೀಗಳ ಶ್ರೀರಕ್ಷೆ ಸಿಕ್ಕಿದೆ.

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಮಮೆಂಟೋ ಗೌರವ!

ಟಾಲಿವುಡ್‌ನ ‘ಪುಷ್ಪರಾಜ್’ ಅಲಿಯಾಸ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೇವಲ ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ರಿಯಲ್ ಹೀರೋ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ‘ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್’ ಸಭೆಯಲ್ಲಿ ಟಾಲಿವುಡ್‌ನ ಸ್ಟಾರ್ ನಟ ಅಲ್ಲು ಅರ್ಜುನ್‌ ಅವರಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಮಮೆಂಟೋ ನೀಡಿ ಗೌರವಿಸಲಾಯಿತು. ಸಿದ್ದಾರೂಢ ಸ್ವಾಮೀಜಿಗಳ ಪ್ರತಿಕೃತಿ ಸ್ವೀಕರಿಸುವ ವೇಳೆ ನಟ ಅಲ್ಲು ಅರ್ಜುನ್ ಅವರು ತಮ್ಮ ಶೂ ತೆಗೆದು ಸ್ವೀಕರಿಸುವ ಮೂಲಕ ಶ್ರೀಗಳಿಗೆ ಗೌರವ ಸಮರ್ಪಿಸಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಅಗಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929)

ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿಸಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ಸರಿಸುಮಾರು ನೂರು ವರ್ಷಗಳ ಹಿಂದೆ (9 ದಶಕದ ಹಿಂದೆ) ಶ್ರೀಗಳು ಮಾಡಿರುವ ಸಮಾಜ ಸೇವೆ ಇಂದಿಗೂ ಕೂಡ ಯಾರೂ ಮರೆಯಲಾಗದ್ದು. ಜೊತೆಗೆ, ಇಂದಿಗೂ ಹುಬ್ಬಳ್ಳಿ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಜನರು ಸಿದ್ದಾರೂಢರ ಮಠಕ್ಕೆ ಬಂದು ಶ್ರೀಗಳ ಗದ್ದುಗೆ ದರ್ಶನ ಪಡೆಯುತ್ತಾರೆ.

ಅಂದಹಾಗೆ, ನಟ ಅಲ್ಲು ಅರ್ಜುನ್ ಅವರು ಈ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗ್ತಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಟ್ರೇಡ್‌ಮಾರ್ಕ್ ಕಪ್ಪು ಉಡುಪಿನಲ್ಲಿ ಮಿಂಚಿದ ಅರ್ಜುನ್, ಫ್ಯಾನ್ಸ್‌ಗೆ ಮಾತ್ರವಲ್ಲ, ತಮ್ಮನ್ನು ದ್ವೇಷಿಸುವವರಿಗೂ (Haters) ಒಂದು ಮಸ್ತ್ ಮೆಸೇಜ್ ಕೊಟ್ಟಿದ್ದಾರೆ.

ಪ್ರೀತಿ ಇರಲಿ, ನೆಗೆಟಿವಿಟಿ ಬೇಡ!

ಸಿನಿಮಾ ಅಂದಮೇಲೆ ಫ್ಯಾನ್ ವಾರ್ ಕಾಮನ್. ಆದರೆ, ಇದು ಅತಿರೇಕಕ್ಕೆ ಹೋಗಬಾರದು ಅನ್ನೋದು ಅಲ್ಲು ಅರ್ಜುನ್ ಆಶಯ. ವೇದಿಕೆ ಮೇಲೆ ಮೈಕ್ ಹಿಡಿದ ಬನ್ನಿ, "ನನ್ನ ಅಭಿಮಾನಿಗಳು, ವಿರೋಧಿಗಳು ಮತ್ತು ದ್ವೇಷಿಸುವವರಿಗೆ ಒಂದು ಮಾತು ಹೇಳಬೇಕಿದೆ. ನಿಮಗೆ ಯಾರನ್ನಾದರೂ ಇಷ್ಟವಾಗದಿದ್ದರೆ, ಅವರನ್ನು ದ್ವೇಷಿಸಿ ಅಥವಾ ಟ್ರೋಲ್ ಮಾಡಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಹತ್ತಿರ 100 ರೂಪಾಯಿ ಹಣ ಇದ್ದರೆ, ಅದನ್ನು ನಿಮಗೆ ಇಷ್ಟವಿಲ್ಲದ ವಸ್ತುವಿನ ಮೇಲೆ ಖರ್ಚು ಮಾಡ್ತೀರಾ? ಇಲ್ಲ ತಾನೇ? ಹಾಗೆಯೇ ನಿಮ್ಮ ಸಮಯ ಕೂಡ," ಎಂದು ತರ್ಕಬದ್ಧವಾಗಿ ಮಾತನಾಡಿದರು.

ಇದೇ ವೇಳೆ ಅಭಿಮಾನಿಗಳಿಗೆ ಒಂದು ತಮಾಷೆಯ ಕಿವಿಮಾತು ಹೇಳಿದ ನಟ, "ನಿಮಗೆ ಯಾರಾದರೂ ಇಷ್ಟವಾದರೆ, ಬೇಕಿದ್ದರೆ ಆ ಹುಡುಗಿಯ ಮನೆ ಮುಂದೆ ಹೋಗಿ ಕಾಯಿರಿ, ಪರವಾಗಿಲ್ಲ! ಕನಿಷ್ಠ ಆ ಸಮಯದಲ್ಲಾದರೂ ನೀವು ಖುಷಿಯಾಗಿರುತ್ತೀರಿ. ಆದರೆ ದಯವಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹರಡಬೇಡಿ' ಎಂದು ನಗುತ್ತಲೇ ಜವಾಬ್ದಾರಿಯುತ ಸಂದೇಶ ರವಾನಿಸಿದರು.

ಅಭಿಮಾನಿಗಳಿಗಾಗಿ 6 ಗಂಟೆಗಳ ಕಾಲ ನಿಂತೇ ಫೋಟೋ ನೀಡಿದ ನಟ!

ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳೆಂದರೆ ಪ್ರಾಣ. ಈ ಕಾರ್ಯಕ್ರಮದಲ್ಲಿ ಕೇವಲ ಭಾಷಣ ಅಷ್ಟೇ ಅಲ್ಲ, ದೂರದ ಊರುಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಸತತ 6 ಗಂಟೆಗಳ ಕಾಲ ನಿಂತಲೇ ಇದ್ದರು. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿ ಸಂಘದ ಸದಸ್ಯರಿಗಾಗಿ 'ಅಪಘಾತ ವಿಮೆ' ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ಹಾಗೂ ಜಿಲ್ಲಾ ಸದಸ್ಯರಿಗೆ 3 ಲಕ್ಷ ರೂಪಾಯಿ ವಿಮೆ ಸೌಲಭ್ಯವನ್ನು ಅವರು ಘೋಷಿಸಿದ್ದಾರೆ.

ಬ್ಯುಸಿ ಶೆಡ್ಯೂಲ್ ನಡುವೆಯೂ ಫ್ಯಾನ್ಸ್ ಜೊತೆ ಸೆಲ್ಫಿ

ಕಾರ್ಯಕ್ರಮ ಮುಗಿದ ನಂತರ ತಮ್ಮ ಅಧಿಕೃತ ಪೇಜ್‌ನಲ್ಲಿ ಅಭಿಮಾನಿಗಳೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡ ಅವರು, "ನಿಮ್ಮ ಪ್ರೀತಿ ಕಂಡು ನನ್ನ ಹೃದಯ ತುಂಬಿ ಬಂದಿದೆ," ಎಂದು ಬರೆದುಕೊಂಡಿದ್ದಾರೆ.

ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಸ್ಟಾರ್ ನಟ ಅಲ್ಲು ಅರ್ಜುನ್ ಈಗ ಸಿನಿಮಾ ಜೊತೆಗೆ ಈ ಹೊಸ ಈವೆಂಟ್ಗ್ ಮೂಲಕವೂ ಸುದ್ದಿಯಲ್ಲಿದ್ದಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರಜ್ ಸಿಂಗ್‌ಗೆ ಈಗಾಗಲೇ ಮದುವೆ ಆಗಿದ್ಯಾ? ಶಾಕಿಂಗ್ ಸೀಕ್ರೆಟ್ ರಿವೀಲ್ ಮಾಡಿದ ಬೆಸ್ಟ್ ಫ್ರೆಂಡ್
ಮೊದಲ ಬಾರಿಗೆ ಮಗಳೊಂದಿಗೆ ತೆರೆ ಹಂಚಿಕೊಂಡ ಊರ್ವಶಿ: 'ಬುಲ್ಲಿ'ಯಲ್ಲಿ ತೇಜಲಕ್ಷ್ಮಿ ಎಂಟ್ರಿ